ದೇಶ ಬಿಟ್ಟರೂ ಬೇರು ಬಿಡದ ಭಾರತೀಯ ನಾರಿ: ಸಾಂಪ್ರದಾಯಿಕ 'ನೌವರಿ' ಸೀರೆಯಲ್ಲಿ ಪೌರತ್ವ ಸ್ವೀಕಾರ; ವಿಡಿಯೋ ವೈರಲ್​ | Citizenship

ಸಾಂಪ್ರದಾಯಿಕ ನೌವರಿ ಸೀರೆಯುಟ್ಟು ಪೌರತ್ವ ಸ್ವೀಕರಿಸುತ್ತಿರುವ ಮಹಿಳೆ
ಸಾಂಪ್ರದಾಯಿಕ ನೌವರಿ ಸೀರೆಯುಟ್ಟು ಪೌರತ್ವ ಸ್ವೀಕರಿಸುತ್ತಿರುವ ಮಹಿಳೆ
Published on

ಪ್ರಮುಖ ಮುಖ್ಯಾಂಶಗಳು

  • ಕೆನಡಾದ ಪೌರತ್ವ ಪಡೆಯುವ ಸಂದರ್ಭದಲ್ಲಿ ಭಾರತೀಯ ಮೂಲದ ಉಡುಗೆಯನ್ನು ತೊಟ್ಟ ಮಹಿಳೆ
  • ಪ್ರಮಾಣವಚನ ಸ್ವೀಕರಿಸುವಾಗ ಸಾಂಪ್ರದಾಯಿಕ ನೌವರಿ ಸೀರೆಯುಟ್ಟ ಮರಾಠಿ ಮಹಿಳೆ
  • ವೈರಲ್​ ಆದ ವಿಡಿಯೋಗೆ ಪರ-ವಿರೊಧ ಕಮೆಂಟ್​ಗಳ ಮಹಾಪೂರ
ಕೆನಡಾ: ಭಾರತೀಯರು ನಮ್ಮ ದೇಶದಲ್ಲಿಯೇ ನಮ್ಮ ಸಾಂಸ್ಕೃತಿಕ ಉಡುಗೆಗಳನ್ನು ತೊಡಲು ಕೀಳರಿಮೆ ಪಟ್ಟುಕೊಳ್ಳುವ ಜನರಿದ್ದಾರೆ. ಆದರೆ ಇತ್ತೀಚಿಗೆ ಭಾರತೀಯ ಮಹಿಳೆಯೊಬ್ಬಳು ಕೆನಡಾದ ಪೌರತ್ವ (Citizenship) ಪಡೆಯುವ ಸಂದರ್ಭದಲ್ಲಿ ಭಾರತೀಯ ಮೂಲದ ಉಡುಗೆಯನ್ನು ತೊಟ್ಟ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್​ ವೈರಲ್​ ಆಗುತ್ತಿದೆ.
ಕೆನಡಾದ ಪೌರತ್ವ ಪ್ರಮಾಣವಚನ ಸಮಾರಂಭದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಅಲೆಯನ್ನು ಸೃಷ್ಟಿಸಿದ್ದು, ಪ್ರಮಾಣವಚನ ಸ್ವೀಕರಿಸುವಾಗ ಮರಾಠಿ ಮಹಿಳೆಯೊಬ್ಬರು ಸಾಂಪ್ರದಾಯಿಕ ನೌವರಿ ಸೀರೆಯನ್ನು ಧರಿಸಿರುವುದನ್ನು ಕಾಣಬಹುದಾಗಿದೆ.
ವೈರಲ್​ ಆಗುತ್ತಿರುವ ವಿಡಿಯೋದ ಶೀರ್ಷಿಕೆಯಲ್ಲಿ, ನಾನು ಎಲ್ಲಿಂದ ಬಂದಿದ್ದೇನೆ ಎಂಬುದನ್ನು ಮರೆಯದೆ ನಾನು ಎಲ್ಲಿದ್ದೇನೆ ಎಂಬುದರ ಬಗ್ಗೆ ಹೆಮ್ಮೆಯಿದೆ. ನನ್ನ ಬೇರುಗಳನ್ನು ಜೀವಂತವಾಗಿರಿಸಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿದೆ. ಈ ರೀಲ್ ತ್ವರಿತವಾಗಿ ಜನರ ಗಮನ ಸೆಳೆದಿದ್ದು, ಅಂತರ್ಜಾಲದಾದ್ಯಂತ ಪ್ರಚಾರ ಪಡೆಯುತ್ತಿದೆ.

ಹೆಮ್ಮೆ ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳು

ಈ ವಿಡಿಯೋವನ್ನು ನೋಡಿದ ಅನೇಕ ವೀಕ್ಷಕರು ಕಾಮೆಂಟ್‌ ವಿಭಾಗವನ್ನು ಅಭಿನಂದನೆಗಳು ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳಿಂದ ತುಂಬಿದ್ದಾರೆ. ಒಬ್ಬ ಬಳಕೆದಾರರು ನನ್ನ ಅಮೆರಿಕ ಪೌರತ್ವ ಸಮಾರಂಭಕ್ಕೆಉಡುಗೆಗಳನ್ನು ಧರಿಸಲು ನೀವು ನನಗೆ ಒಳ್ಳೆಯ ಐಡಿಯಾ ನೀಡಿದ್ದೀರಿ ಎಂದು ಬರೆದರೆ, ಇನ್ನೊಬ್ಬರು ನಿಮ್ಮನ್ನು ಭಾರತ ಮತ್ತು ಕೆನಡಾ ಎರಡೂ ದೇಶಗಳು ನಿಮ್ಮನ್ನು ಮೆಚ್ಚುತ್ತವೆ ಎಂದು ಕಮೆಂಟ್​ ಮಾಡಿದ್ದಾರೆ.

ಇದೊಂದು ಹುಸಿ ದೇಶಭಕ್ತಿ

ಈ ರೀಲ್​ ಹೆಚ್ಚಿನ ವೀಕ್ಷಣೆ ಕಾಣುತ್ತಾ ಟೀಕೆ ಮತ್ತು ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿತು. ನೀವು ನಿಮ್ಮ ಸ್ವಂತ ದೇಶವನ್ನು ಪ್ರೀತಿಸುತ್ತಿದ್ದರೆ, ನಿಮಗೆ ಬೇರೆ ದೇಶದ ಪೌರತ್ವ ಏಕೆ ಬೇಕು" ಎಂದು ಬರೆದರೆ, ಇವೆಲ್ಲಾ ಇವರ ಹುಸಿ ರಾಷ್ಟ್ರಪ್ರೇಮ ಎಂದು ಕಮೆಂಟ್​ ಮಾಡಿದ್ದಾರೆ. ಕಾಮೆಂಟ್‌ಗಳ ವಿಭಾಗವು ಶೀಘ್ರದಲ್ಲೇ ವೀಡಿಯೊದಲ್ಲಿ ಸೆರೆಹಿಡಿಯಲಾದ ಮೂಲ ಕ್ಷಣವನ್ನು ಮರೆತು ವಲಸೆ ಮತ್ತು ದೇಶಭಕ್ತಿಯ ಕುರಿತು ವ್ಯಾಪಕ ಚರ್ಚೆಗೆ ವೇದಿಕೆಯಾಗಿ ಮಾರ್ಪಟ್ಟಿತ್ತು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net