ಹಸೆಮಣೆ ಏರಿದ ಇಮ್ರಾನ್​ ಮಾಜಿ ಪತ್ನಿ: ಐರಿಶ್​ ಮೂಲದ ಕೋಟ್ಯಾಧಿಶನನ್ನು ವರಿಸಿದ ಜೆಮಿಯಾ ಗೋಲ್ಡ್‌ಸ್ಮಿತ್! Jemima Goldsmith

ಐರಿಷ್ ಕೋಟ್ಯಾಧಿಶನನ್ನು ಮದುವೆಯಾದ ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್ ಮಾಜಿ ಪತ್ನಿ ಜೆಮಿಮಾ ಗೋಲ್ಡ್‌ಸ್ಮಿತ್
ಐರಿಷ್ ಕೋಟ್ಯಾಧಿಶನನ್ನು ಮದುವೆಯಾದ ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್ ಮಾಜಿ ಪತ್ನಿ ಜೆಮಿಮಾ ಗೋಲ್ಡ್‌ಸ್ಮಿತ್
Published on
ಇಸ್ಲಾಮಾಬಾದ್​: ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಖ್ಯಾತ ಕ್ರಿಕೆಟ್ ಆಟಗಾರ ಇಮ್ರಾನ್ ಖಾನ್​ ಅವರ ವಿಚ್ಛೇದಿತ ಪತ್ನಿ ಜೆಮಿಮಾ ಗೋಲ್ಡ್‌ಸ್ಮಿತ್ ಈಗ ಐರಿಶ್​ ಮೂಲದ ಕೋಟ್ಯಾಧೀಶ ಕ್ಯಾಮರೂನ್ ಓ'ರೈಲಿ ಎಂಬುವವರ ಜೊತೆ ಮದುವೆಯಾಗಿದ್ದಾರೆಂದು ವರದಿಯಾಗಿದೆ. ಇಮ್ರಾನ್​ ಖಾನ್​ ಜೊತೆಗಿನ ವೈವಾಹಿಕ ಜೀವನ ಕೊನೆಗೊಂಡು ಎರಡು ದಶಕ ಕಳೆದ ನಂತರ ಜೆಮಿಯಾ ಗೋಲ್ಡ್‌ಸ್ಮಿತ್ ಈಗ ಮತ್ತೊಮ್ಮೆ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆಂದು ತಿಳಿದು ಬಂದಿದೆ.
ಜೆಮಿಯಾ ಗೋಲ್ಡ್‌ಸ್ಮಿತ್​ನ ಸಹೋದರನ ಪತ್ನಿ ಜೆಮಿಯಾ ಜೋನ್ಸ್​ ತಮ್ಮ ಸೋಷಿಯಲ್​ ಮೀಡಿಯಾ ವೇದಿಕೆಯಲ್ಲಿ ತನ್ನ ಅತ್ತಿಗೆಯ ಮದುವೆಯಾಗುತ್ತಿರುವ ಕುರಿತು ಫೋಟೊ ಹಂಚಿಕೊಳ್ಳುವ ಮೂಲಕ ಈ ಸುದ್ದಿಗೆ ಪುರಾವೆ ವದಗಿಸಿದ್ದಾರೆ. ಮಾಹಿತಿ ಪ್ರಕಾರ, ಜೆಮಿಯಾ ಗೋಲ್ಡ್‌ಸ್ಮಿತ್​ಗೆ ಈಗ 52 ವರ್ಷವಾದರೆ, ನೂತನ ಪತಿ ಕ್ಯಾಮರೂನ್ ಓ'ರೈಲಿ 62 ವಯಸ್ಸಿನವರೆಂದು ಹೇಳಲಾಗುತ್ತಿದೆ.

ಇಮ್ರಾನ್​ ಜೊತೆ ಮದುವೆ, ವಿಚ್ಛೇದನ!

ಪಾಕಿಸ್ತಾನದ ಖ್ಯಾತ ಕ್ರಿಕೆಟ್​ ಆಟಗಾರ ಹಾಗೂ ದೇಶದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ 1995 ರಲ್ಲಿ ಬ್ರಿಟನ್​ ಮೂಲದ ಟಿವಿ ಪ್ರೊಡ್ಯೂಸರ್​​ ಹಾಗೂ ಸ್ಕ್ರೀನ್​ವ್ರೈಟರ್​ ಆಗಿದ್ದ ಜೆಮಿಯಾ ಗೋಲ್ಡ್‌ಸ್ಮಿತ್​ರನ್ನು ವಿವಾಹವಾಗಿದ್ದರು.
ಆದರೆ, ಅದಾಗಲೇ ಇಮ್ರಾನ್​ ಖಾನ್​ ಎರಡು ಮದುವೆಯಾಗಿದ್ದರು. ಆದರೂ ಜೆಮಿನಾ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಇಮ್ರಾನ್​ ಅವರನ್ನು ವರಿಸಿ, ಸುಲೇಮಾನ್​ ಇಸಾ ಮತ್ತು ಖಾಸಿಮ್​ ಎಂಬ ಇಬ್ಬರು ಗಂಡು ಮಕ್ಕಳನ್ನು ಪಡೆದಿದ್ದರು. ಆದರೆ ಪಾಕಿಸ್ತಾನದಲ್ಲಿ ಜೀವನ ನಡೆಸಲು ಕಷ್ಟವಾದ ಕಾರಣ ಒಂಭತ್ತು ವರ್ಷಗಳ ವೈವಾಹಿಕ ಜೀವನಕ್ಕೆ ಪೂರ್ಣವಿರಾಮ ಇಡಲು ಮುಂದಾಗಿ 2004 ರಲ್ಲಿ ಇಮ್ರಾನ್​ ಖಾನ್​ರಿಂದ ವಿಚ್ಛೇದನ ಪಡೆದು, ಬ್ರಿಟನ್​ಗೆ ಮರಳಿದ್ದರು.

ಜೈಲಿನಲ್ಲಿರುವ ಇಮ್ರಾನ್​!

ಜೆಮಿಯಾ ಗೋಲ್ಡ್‌ಸ್ಮಿತ್ ಹೊಸ ಬದುಕಿಗೆ ಕಾಲಿಡುತ್ತಿದ್ದರೆ, ಇತ್ತ ಇಮ್ರಾನ್​ ಖಾನ್​ ಪಾಕಿಸ್ತಾನದ ಅಡಿಯಾಲಾ ಜೈಲಿನಲ್ಲಿ ಕೊನೆಯ ದಿನಗಳನ್ನು ಕಳೆಯುತ್ತಾ ಕುಳಿತ್ತಿದ್ದಾರೆ. 2018 ರಿಂದ 2024 ರ ವರೆಗೆ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದ ಇಮ್ರಾನ್​ ಖಾನ್​ ನಂತರ ಸೇನಾ ಸಿಬ್ಬಂದಿಗಳ ಮೇಲೆ ಮುನಿಸಿಕೊಂಡ ಪರಿಣಾಮ ಭ್ರಷ್ಟಾಚಾರ ಆರೋಪದ ಹಿನ್ನಲೆ ಜೈಲು ಸೇರಿದರು.
ಮೇ 2023ರಲ್ಲಿ ಮೊದಲಿಗೆ ಬಂಧನಕ್ಕೊಳಗಾಗಿದ್ದ ಇಮ್ರಾನ್ ಖಾನ್ ಮೇಲೆ ತೋಷಖಾನಾ (ಉಡುಗೊರೆಗಳ ಅಕ್ರಮ ಮಾರಾಟ) ಸೇರಿದಂತೆ ಹಲವಾರು ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಎಲ್ಲಾ ಪ್ರಕರಣಗಳು ಕೇವಲ ರಾಜಕೀಯ ಪ್ರೇರಿತವಾಗಿವೆ ಎಂದು ಪಿಟಿಐ ಪಕ್ಷ ಮತ್ತು ಇಮ್ರಾನ್ ಖಾನ್ ಬೆಂಬಲಿಗರು ಆರೋಪಿಸುತ್ತಾ ಬಂದಿದ್ದಾರೆ.
ಸದ್ಯ ಇಮ್ರಾನ್​ ಆರೋಗ್ಯ ಸ್ಥಿತಿ ಕೂಡ ತೀವ್ರವಾಗಿ ಹದಗೆಟ್ಟಿದೆ ಎಂದು ಪಾಕ್​ ಮಾಧ್ಯಮಗಳು ವರದಿ ಮಾಡಿದ್ದವು. ಇಮ್ರಾನ್​ ಖಾನ್​ ಒಬ್ಬ ಶ್ರೇಷ್ಟ ಕ್ರಿಕೆಟ್​ ಆಟಗಾರ, ರಾಜಕೀಯ ಏನೇ ಇದ್ದರು ಅವರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಬೇಕೆಂದು ವಿಶ್ವದ ಕ್ರಿಕೆಟ್​ ದಿಗ್ಗಜರು ಪಾಕ್​ ಪ್ರಧಾನಿಗೆ ಮನವಿ ಮಾಡಿದ್ದರು, (ಏಜೆನ್ಸೀನ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net