ಬಾಲಿವುಡ್ ಹೀರೋ ರೀ-ಎಂಟ್ರಿ, ಬಾಸ್​ ಈಸ್ ಬ್ಯಾಕ್; NVIDIA ಸಿಇಒ ಜೆನ್ಸನ್ ಹುವಾಂಗ್ ಮರುನೇಮಕ; ಇಂಟರ್ನೆಟ್​​ನಲ್ಲಿ ಮೀಮ್ಸ್​ ಹವಾ

ಬಾಲಿವುಡ್ ಹೀರೋ ರೀ-ಎಂಟ್ರಿ, ಬಾಸ್​ ಈಸ್ ಬ್ಯಾಕ್; NVIDIA ಸಿಇಒ ಜೆನ್ಸನ್ ಹುವಾಂಗ್ ಮರುನೇಮಕ; ಇಂಟರ್ನೆಟ್​​ನಲ್ಲಿ ಮೀಮ್ಸ್​ ಹವಾ
Published on: 
  • ಎನ್‌ವಿಡಿಯಾ ಕಂಪನಿಯ ಸಿಇಒ ಆಗಿ ಜೆನ್ಸನ್​ ಹುವಾಂಗ್​ ಮರು ನೇಮಕ.

  • ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತ, ತಮಾಷೆಯ ಮೀಮ್ ಕ್ರಿಯೇಟ್.

  • ಬಾಸ್​ ಈಸ್ ಬ್ಯಾಕ್, ಅಂಡರ್‌ಟೇಕರ್ ಕಮ್‌ಬ್ಯಾಕ್ ಎಂದು ಪೋಸ್ಟ್ ಮಾಡಿದ ನೆಟ್ಟಿಗರು.

ಎನ್‌ವಿಡಿಯಾ ಕಂಪನಿಯ ಅಧ್ಯಕ್ಷ, ಸಿಇಒ ಆಗಿ ಹಾಗೂ ನಿರ್ದೇಶಕರ ಮಂಡಳಿಯ ಸದಸ್ಯರಾಗಿ ಜೆನ್ಸನ್​ ಹುವಾಂಗ್​ ಅವರನ್ನು ಮರು ನೇಮಕ ಮಾಡಿಕೊಂಡ ಬೆನ್ನಲ್ಲೇ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ ನೆಟ್ಟಿಗರು ಹುವಾಂಗ್​ ಅವರು, ಕಂಪನಿಯ ಪ್ರಧಾನ ಕಚೇರಿಗೆ ಮರಳುವ ದೃಶ್ಯಗಳನ್ನು ಕಲ್ಪಿಸಿಕೊಂಡು ಹಾಸ್ಯಮಯ ವಿಡಿಯೋಗಳು, ಮೀಮ್‌ಗಳು ಮತ್ತು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಮರುನೇಮಕಕ್ಕೆ ಸಿಕ್ತು ಸಹಮತ

ಚೀನಾದ ಬೇಹುಗಾರಿಕೆ ಕಾರ್ಯಾಚರಣೆಯೊಂದಿಗೆ ಜೆನ್ಸನ್​ ಹುವಾಂಗ್​ ಅವರಿಗೆ ಸಂಬಂಧವಿದೆ ಎನ್ನುವ ಆರೋಪ, ವಿವಾಹೇತರ ಸಂಬಂಧದ ಕುರಿತು ಸಾಕಷ್ಟು ವಿಚಾರಗಳು ಮುನ್ನೆಲೆಗೆ ಬಂದ ನಂತರ ಅವರು ರಾಜೀನಾಮೆ ಕೊಟ್ಟಿದ್ದರು. ಎನ್‌ವಿಡಿಯಾ ಈ ಹಿಂದೆ ಅವರ ರಾಜೀನಾಮೆಯನ್ನು ಅಂಗೀಕರಿಸಿತ್ತು. ಇದೀಗ ಹುವಾಂಗ್ ಅವರೊಂದಿಗೆ ಸರಣಿ ಮಾತುಕತೆ ನಡೆಸಿದ ನಂತರ ಕಂಪನಿಯ ನಿರ್ದೇಶಕರ ಮಂಡಳಿಯು ಅವರ ಮರುನೇಮಕಕ್ಕೆ ಒಪ್ಪಿಗೆ ಕೊಟ್ಟಿದೆ. ನಿರ್ಧಾರ ಕೈಗೊಳ್ಳುವ ಮುನ್ನ ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿಗಳಿಂದಲೂ ಸಲಹೆ ಪಡೆಯಲಾಗಿದೆ ಎಂದು ಎನ್‌ವಿಡಿಯಾ ತಿಳಿಸಿದೆ ಎನ್ನಲಾಗಿದೆ.

ಮೀಮ್ಸ್​ ಸುರಿಮಳೆ

ಜೆನ್ಸನ್​ ಹುವಾಂಗ್​ ಅವರ ಮರು ನೇಮಕದ ಬಗ್ಗೆ ಮಾಹಿತಿ ವೈರಲ್ ಆಗುತ್ತಲೇ ಎಕ್ಸ್​​ ಸೇರಿದಂತೆ ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​​​​ ಕ್ರಿಯೇಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.

ಎಲಾನ್ ಮಸ್ಕ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇತರರ ಸಮ್ಮುಖದಲ್ಲಿ ಹುವಾಂಗ್ ಭಾಷಣ ಮಾಡುತ್ತಿರುವ ಎಐ-ನಿರ್ಮಿತ ವಿಡಿಯೋವನ್ನು ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಇದರಲ್ಲಿ ಹುವಾಂಗ್ ನಾನು ಎಲ್ಲಿಗೂ ಹೋಗುತ್ತಿಲ್ಲ ಎನ್ನುವಂತೆ ತೋರಿಸಲಾಗಿದ್ದು, "ಜೆನ್ಸನ್ ಹುವಾಂಗ್ ಅಧಿಕೃತವಾಗಿ ಮರಳಿದ್ದಾರೆ, ಇದು ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಮ್‌ಬ್ಯಾಕ್" ಎಂದು ಬರೆಯಲಾಗಿದೆ.

ಪ್ರಧಾನ ಕಚೇರಿಗೆ ಎಂಟ್ರಿ: ವ್ಯಕ್ತಿಯೊಬ್ಬರು ಆತ್ಮವಿಶ್ವಾಸದಿಂದ ಎನ್‌ವಿಡಿಯಾ ಕಚೇರಿಯತ್ತ ಹೆಜ್ಜೆ ಹಾಕುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಮತ್ತೊಬ್ಬ ಬಳಕೆದಾರ, ಇಂದು ಬೆಳಿಗ್ಗೆ ಎನ್‌ವಿಡಿಯಾ ಪ್ರಧಾನ ಕಚೇರಿಗೆ ಜೆನ್ಸನ್ ಹುವಾಂಗ್ ಆಗಮಿಸುತ್ತಿರುವ ದೃಶ್ಯ ಎಂದು ಶೀರ್ಷಿಕೆ ನೀಡಿದ್ದಾರೆ.

ಸೆಕ್ರೇಟ್ರಿ ನೇಮಕದಲ್ಲಿ ಎಚ್ಚರಿಕೆ

ಜೆನ್ಸೆನ್​​​ ಮತ್ತೆ ಕಂಪನಿಗೆ ಮರಳಿದ ನಂತರ ತನ್ನ ಸೆಕ್ರೇಟ್ರಿಯಾಗಿ ನೇಮಕ ಮಾಡುವ ವಿಚಾರದಲ್ಲಿ ಮತ್ತೆ ತಪ್ಪು ಮಾಡೋದಿಲ್ಲ. ಯುವತಿಯರ ಬದಲಿಗೆ ವಯಸ್ಸಾದವರನ್ನು ನೇಮಕ ಮಾಡಿಕೊಳ್ಳುತ್ತಾರೆ ಎನ್ನುವಂತೆ ವಿಡಿಯೋ ಕ್ರಿಯೇಟ್ ಮಾಡಿ ಹಂಚಿಕೊಳ್ಳಲಾಗಿದೆ.

ವೈದ್ಯರ ಸಮವಸ್ತ್ರ ಧರಿಸಿದ ಪಾರಿವಾಳ ಭರ್ಜರಿಯಾಗಿ ಎಂಟ್ರಿ ಕೊಡುವ ವಿಡಿಯೋವನ್ನು ಎಕ್ಸ್ (X) ಬಳಕೆದಾರರೊಬ್ಬರು ಹಂಚಿಕೊಂಡಿದ್ದು,'ಜೆನ್ಸನ್ ಹುವಾಂಗ್ ಅಧಿಕೃತವಾಗಿ ಮರುನೇಮಕಗೊಂಡಿದ್ದಾರೆ. ಈ ಪುನರಾಗಮನ ಅಮೋಘವಾಗಿದೆ' ಎಂದಿದ್ದಾರೆ.

ಹುವಾಂಗ್ ನೃತ್ಯದ ಎಐ ವಿಡಿಯೋ

ಸಾಮಾನ್ಯವಾಗಿ ಯಾವುದೇ ಕ್ರಿಕೆಟ್​ ತಂಡ ಗೆದ್ದಾಗ ಕಪ್​ ಹಿಡಿದು ಟೀಂನತ್ತ ಹೆಜ್ಜೆ ಹಾಕುವ ದೃಶ್ಯವನ್ನು ಎಐ ಸಹಾಯದ ಮೂಲಕ ಕ್ರಿಯೇಟ್ ಮಾಡಲಾಗಿದೆ. ಅದರಲ್ಲಿ ಜೆನ್ಸೆನ್ ಅವರು ನಿಧಾನವಾಗಿ ಹೆಜ್ಜೆ ಇಡುತ್ತಿರುವುದು..ಅವರನ್ನು ನೋಡುತ್ತಾ ಅವರ ತಂಡ ನಿಂತಿರುವ ವಿಡಿಯೋ ಕ್ರಿಯೇಟ್ ಮಾಡಲಾಗಿದೆ.

ಷೇರುದಾರರ ಸಂತಸ

ಸಿನಿಮಾವೊಂದರಲ್ಲಿ ನಟನೊಬ್ಬ ನಗುತ್ತಾ ನಿದ್ದೆಯಿಂದ ಏಳುವ ದೃಶ್ಯವನ್ನು ಹಂಚಿಕೊಂಡಿರುವ ಬಳಕೆದಾರರೊಬ್ಬರು, ಜೆನ್ಸನ್ ಹುವಾಂಗ್ ಮರಳುತ್ತಿರುವ ಸುದ್ದಿ ಕೇಳಿದ ನಂತರ ಎನ್‌ವಿಡಿಯಾ ಷೇರುದಾರರ ಸ್ಥಿತಿ ಎಂದು ತಮಾಷೆ ಮಾಡಿದ್ದಾರೆ.

ಕಚೇರಿಯತ್ತ ಓಡುತ್ತಿರುವ ದೃಶ್ಯ

ಹುವಾಂಗ್ ಎನ್‌ವಿಡಿಯಾ ಕಚೇರಿಗಳತ್ತ ಓಡುತ್ತಿರುವ ಎಐ ವಿಡಿಯೋವನ್ನು ಎಕ್ಸ್ ಪುಟವೊಂದು ಹಂಚಿಕೊಂಡಿದ್ದು, "ಎನ್‌ವಿಡಿಯಾ ಕಚೇರಿಗೆ ಮರಳುತ್ತಿರುವ ಜೆನ್ಸನ್ ಹುವಾಂಗ್ ಅವರ ನೇರ ದೃಶ್ಯಾವಳ" ಎಂದು ಬರೆದುಕೊಂಡಿದೆ. ಹಾಗೆಯೇ ಕಾರ್ಯಕ್ರಮವೊಂದಕ್ಕೆ ವ್ಯಕ್ತಿಯೊಬ್ಬ ಉತ್ಸಾಹದಿಂದ ಪ್ರವೇಶಿಸುವ ವಿಡಿಯೋವನ್ನು ಹಂಚಿಕೊಂಡು, ಹುವಾಂಗ್ ಪುನರಾಗಮನಕ್ಕೆ ಹೋಲಿಸಲಾಗಿದೆ.

ಎಲಾನ್ ಮಸ್ಕ್ ಪ್ರತಿಕ್ರಿಯೆ

ಜೆನ್ಸನ್ ಹುವಾಂಗ್ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮರಳಿ ಕರೆತರುವ ಎನ್‌ವಿಡಿಯಾ ನಿರ್ಧಾರಕ್ಕೆ ಟೆಕ್ ಉದ್ಯಮಿ ಎಲಾನ್ ಮಸ್ಕ್ ಕೂಡ ಪ್ರತಿಕ್ರಿಯಿಸಿದ್ದಾರೆ. ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಮಸ್ಕ್, ತಪ್ಪನ್ನು ಸರಿಪಡಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ