ಸೌದಿ ಮೇಲೆ ಹೂತಿ ಕ್ಷಿಪಣಿ ದಾಳಿ: ರಿಯಾದ್​ ವಿಮಾನ ನಿಲ್ದಾಣಕ್ಕೆ ಅಪ್ಪಳಿಸಿದ ಮಿಸೈಲ್​; 'ಇಸ್ಲಾಮಿಕ್​ ನ್ಯಾಟೋ' ಮುಂದಿನ ನಡೆಯೇನು? Houthi Missile Attack

ಸೌದಿ ಅರೇಬಿಯಾದ ರಿಯಾದ್ ವಿಮಾನ ನಿಲ್ದಾಣ ಗುರಿಯಾಗಿಸಿ ಹೂತಿ ಬಂಡುಕೋರರ ಭೀಕರ ಮಿಸೈಲ್ ದಾಳಿ. ವಿಮಾನ ಹಾರಾಟ ರದ್ದು, ಮೆಕ್ಕಾ ಒಪ್ಪಂದದ 'ಇಸ್ಲಾಮಿಕ್ ನ್ಯಾಟೋ' ಮೈತ್ರಿಕೂಟದ ಮುಂದಿನ ನಡೆಯೇನು? ಸಂಪೂರ್ಣ ವಿವರ ಇಲ್ಲಿದೆ.
Missile attack by Houthi rebels on Riyadh International Airport.
ರಿಯಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹೂತಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿ
Published on: 

ಸೌದಿ ಅರೇಬಿಯಾ: ಕಳೆದ ಕೆಲ ದಿನಗಳಿಂದ ಸೌದಿ ಅರೇಬಿಯಾ ಹಾಗೂ ಒಮನ್​ ಬೆಂಬಲಿತ ಹೂತಿ ಬಂಡುಕೋರ ನಡುವಿನ ಸಂಘರ್ಷಕ್ಕೇರಿದ್ದು, ಗುರುವಾರ (ಅ.8) ರಿಯಾದ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹೂತಿ ಬಂಡುಕೋರರು ವೈಮಾನಿಕ ದಾಳಿ ನಡೆಸಿ ಪರಿಣಾಮ ವಿಮಾನ ಹಾರಟಕ್ಕೆ ಸೌದಿ ಸರ್ಕಾರ ನಿರ್ಭಂದ ಹೇರಿದೆ ಎಂದು ವರದಿಯಾಗಿದೆ.

ಈ ದಾಳಿಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸೌದಿ ಅರೇಬಿಯಾ ಹೇಳುತ್ತಿದ್ದರೂ, ಕೆಲ ಅಂತಾರಾಷ್ಟ್ರೀಯ ಮಾಧ್ಯಮಗಳು ಮೂರು ಜನರ ನಾಗರಿಕರು ಸಾವನ್ನಪ್ಪಿದ್ದಾರೆಂದು ಹೇಳುತ್ತಿವೆ. ಸೌದಿ ಅರೇಬಿಯಾದಲ್ಲಿ ಪರಿಸ್ಥಿತಿ ಉದ್ವಿಗ್ನವಾದ ಹಿನ್ನಲೆ, ರಿಯಾದ್​ಗೆ ಪ್ರಯಾಣ ಬೆಳೆಸಿದ್ದ ಸುಮಾರು 30 ಕ್ಕೂ ಅಧಿಕ ಅಂತರಾಷ್ಟ್ರೀಯ ವಿಮಾನಗಳು ತಮ್ಮ ಹಾರಾಟವನ್ನು ರದ್ದುಪಡಿಸಿದ್ದಾಗಿ ತಿಳಿದದು ಬಂದಿದೆ.

ವಿಮಾನಕ್ಕೆ ಬಡಿದ ಮಿಸೈಲ್​!

ಕೆಲ ಪಾಶ್ಚಿಮಾತ್ಯ ಮಾಧ್ಯಮಗಳ ಪ್ರಕಾರ, ಹೂತಿಗಳ ಮೂಲಕ ಪ್ರಯೋಗಿಸಲ್ಪಟ್ಟ ಮಿಸೈಲ್​, ರಿಯಾದ್​ ಏರ್​ಪೋರ್ಟ್​ನಲ್ಲಿದ್ದ ವಾಣಿಜ್ಯ ವಿಮಾನವೊಂದಕ್ಕೆ ಬಡಿದಿದ್ದು, ಇದರ ಆಸುಪಾಸಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆಂದು ಹೇಳುತ್ತಿವೆ. ಈ ಕುರಿತಂತೆ ಕೆಲ ಫೋಟೊಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸೌದಿ ಅರೇಬಿಯಾ ಮಿಸೈಲ್ ದಾಳಿ ತಡೆಯುವಲ್ಲಿ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ, ಈ ಆರೋಪಗಳನ್ನು ತಳ್ಳಿ ಹಾಕಿರುವ ಸೌದಿ ಸರ್ಕಾರ, ಮಿಸೈಲ್​ ನಮ್ಮ ವಿಮಾನ ನಿಲ್ದಾಣಕ್ಕಲ್ಲ, ಬದಲಿಗೆ ಮೆಡಿಕಲ್ ಕಾಂಪ್ಲೆಂಕ್ಸ್​ವೊಂದಕ್ಕೆ ಬಡಿದಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ. ನಮ್ಮ ಮೇಲೆ ಹೂತಿಗಳು ನಿರಂತರ ವೈಮಾನಿಕ ದಾಳಿ ನಡೆಸುತ್ತಿರುವ ಹಿನ್ನಲೆಯಲ್ಲಿ ವಿಮಾನಯಾನಕ್ಕೆ ನಿಷೇಧ ಹೇರಿದ್ದಾಗಿ ಸ್ಪಷ್ಟನೆ ನೀಡಿದೆ.

Also Read
ವಿದ್ಯಾರ್ಥಿಯ ತಲೆಯನ್ನೇ ‘ತಬಲಾ’ ಮಾಡಿದ ವಿಕೃತ ಶಿಕ್ಷಕ: ವಿಡಿಯೋ ವೈರಲ್ ಬೆನ್ನಲ್ಲೇ ಶಿಕ್ಷಣ ಇಲಾಖೆಯಿಂದ ಗೇಟ್‌ಪಾಸ್! Teacher Suspended
Missile attack by Houthi rebels on Riyadh International Airport.

'ಮೆಕ್ಕಾ ಒಪ್ಪಂದ' ಜಾರಿ ಯಾವಾಗ?

ಹೂತಿಗಳು ಸೌದಿ ಅರೇಬಿಯಾ ಮೇಲೆ ದಾಳಿ ಆರಂಭಿಸುವ ಕೆಲ ತಿಂಗಳುಗಳ ಹಿಂದೆ, ಪಾಕಿಸ್ತಾನ, ಸೌದಿ ಅರೇಬಿಯಾ ಹಾಗೂ ಟರ್ಕಿ ದೇಶಗಳು ನ್ಯಾಟೋ ಮಾದರಿಯಲ್ಲಿ ಇಸ್ಲಾಮಿಕ್ ಮೈತ್ರಿ ಮಾಡಿಕೊಂಡಿದ್ದು, ಇದಕ್ಕೆ ಮೆಕ್ಕಾ ಒಪ್ಪಂದ ಎಂಬ ಹೆಸರನ್ನು ನೀಡಿದ್ದರು. ಈ ಒಪ್ಪಂದದ ಪ್ರಕಾರ, ಮೂರು ದೇಶದಲ್ಲಿ ಯಾವುದೇ ಒಂದು ದೇಶದ ಮೇಲೆ ಮಿಲಿಟರಿ ದಾಳಿ ಸಂಭವಿಸಿದರೆ, ಉಳಿದೆರಡು ದೇಶಗಳು ತಕ್ಷಣ ಸಹಾಯಕ್ಕೆ ದಾವಿಸುವುದೇ ಈ ಮೈತ್ರಿಕೂಟದ ಸ್ಥಾಒನೆ ಉದ್ದೇಶವಾಗಿತ್ತು.

ಆದರೆ, ಒಪ್ಪಂದ ಕೂಡಿಬಂದ ಕೆಲವೇ ತಿಂಗಳನಲ್ಲಿ ಹೂತಿಗಳು ಸೌದಿ ಅರೇಬಿಯಾ ಮೇಲೆ ದಾಳಿ ನಡೆಸಿದರೂ, ಪಾಕಿಸ್ತಾನವಾಗಲೀ, ಟರ್ಕಿಯಾಗಲೀ ಸಹಾಯಕ್ಕೆ ಬರದಿದ್ದದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ದಾರಿಮಾಡಿ ಕೊಟ್ಟಿತ್ತು. ನಂತರ, ಮತ್ತೊಮ್ಮೆ ಈ ಮೂರು ದೇಶದ ಉನ್ನತ ಮಟ್ಟದ ನಾಯಕರು ಸಭೆ ನಡೆಸಿ, ಸೌದಿ ಬೆಂಬಲಕ್ಕೆ ನಾವಿದ್ದು (ಪಾಕಿಸ್ತಾಮ, ಟರ್ಕಿ), ಕೆಲವೇ ದಿಗನಳಲ್ಲಿ ನಮ್ಮ ಸೈನಿಕರು ಸೌದಿ ತಲುಪಿ, ಹೂರತಿಗಳನ್ನು ಮಟ್ಟಹಾಕುತ್ತಾರೆಂದು ಪಾಕಿಸ್ತಾನ ಮತ್ತು ಟರ್ಕಿ ಹೇಳಿಕೊಂಡಿತ್ತು. ಆದರೆ ಈಗ ಮತ್ತೊಮ್ಮೆ ಸೌದಿ ಮೇಲೆ ದಾಳಿ ನಡೆದಿದ್ದು, ಈ ಇಸ್ಲಾಮಿಕ್​ ಮೈತ್ರಿಕೂಟ ಮುಂದಿನ ದಿನಗಳಲ್ಲಿ ಏನು ಮಾಡಲಿದೆ ಎನ್ನುವುದು ಜಗತ್ತನ ಕುತೂಹಲಕ್ಕೆ ಕಾರಣವಾಗಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net