ಲೈಫ್ ಸೈನ್ಸ್ ರಹಸ್ಯ ಭೇದಿಸಿದ ಕಾಗನ್, ಸೋಯೈಗೆ 2026ನೇ ಸಾಲಿನ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ | Nobel Prize In Chemistry

ಈಗಾಗಲೇ ಘೋಷಣೆಯಾಗಿರುವ ಭೌತಶಾಸ್ತ್ರ ಮತ್ತು ವೈದ್ಯಕೀಯ ವಿಭಾಗಗಳ ನಂತರ ರಾಸಾಯನಶಾಸ್ತ್ರದ ನೊಬೆಲ್​ ಪ್ರಶಸ್ತಿ ಅನಾವರಣಗೊಂಡಿದೆ. ಪ್ರಶಸ್ತಿಯ 1.2 ಮಿಲಿಯನ್ ಡಾಲರ್ ಬಹುಮಾನದ ಮೊತ್ತವನ್ನು ಇಬ್ಬರೂ ವಿಜ್ಞಾನಿಗಳು ಸಮಾನವಾಗಿ ಹಂಚಿಕೊಳ್ಳಲಿದ್ದಾರೆ.
Nobel Prize In Chemistry
ಲೈಫ್ ಸೈನ್ಸ್ ರಹಸ್ಯ ಭೇದಿಸಿದ ಕಾಗನ್, ಸೋಯೈಗೆ 2026ನೇ ಸಾಲಿನ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ | Nobel Prize In Chemistry
Published on: 

Nobel Prize In Chemistry: ಜೀವಜಗತ್ತಿನ ಶತಮಾನಗಳಷ್ಟು ಹಳೆಯ ವೈಜ್ಞಾನಿಕ ರಹಸ್ಯವೊಂದನ್ನು ಭೇದಿಸಿದ ಫ್ರೆಂಚ್ ವಿಜ್ಞಾನಿ ಹೆನ್ರಿ ಬಿ. ಕಾಗನ್ (Henri B. Kagan) ಮತ್ತು ಜಪಾನ್‌ನ ಸಂಶೋಧಕ ಕೆನ್ಸೊ ಸೋಯೈ (Kenso Soai) ಅವರಿಗೆ ಪ್ರಸಕ್ತ ಸಾಲಿನ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಲಭಿಸಿದೆ.

ಅಸಮಪಾರ್ಶ್ವದ ಜೈವಿಕ ಸಂಶ್ಲೇಷಣೆಯಲ್ಲಿ (Asymmetric Organic Synthesis) 'ರೇಖಾತ್ಮಕರಹಿತ ಪರಿಣಾಮಗಳು' ಮತ್ತು 'ಸ್ವಯಂ-ಪ್ರೇರಿತ ರಸಾಯನಿಕ ಕ್ರಿಯೆಗಳನ್ನು' (Autocatalysis) ಆವಿಷ್ಕಾರಕ್ಕಾಗಿ ಈ ಇಬ್ಬರು ವಿಜ್ಞಾನಿಗಳಿಗೆ ವಿಶ್ವದ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ಈಗಾಗಲೇ ಘೋಷಣೆಯಾಗಿರುವ ಭೌತಶಾಸ್ತ್ರ ಮತ್ತು ವೈದ್ಯಕೀಯ ವಿಭಾಗಗಳ ನಂತರ ರಾಸಾಯನಶಾಸ್ತ್ರದ ನೊಬೆಲ್​ ಪ್ರಶಸ್ತಿ ಅನಾವರಣಗೊಂಡಿದೆ. ಪ್ರಶಸ್ತಿಯ 1.2 ಮಿಲಿಯನ್ ಡಾಲರ್ ಬಹುಮಾನದ ಮೊತ್ತವನ್ನು ಇಬ್ಬರೂ ವಿಜ್ಞಾನಿಗಳು ಸಮಾನವಾಗಿ ಹಂಚಿಕೊಳ್ಳಲಿದ್ದಾರೆ.

ಏನಿದು 'ಕನ್ನಡಿ ಮಾದರಿಯ ಅಣುಗಳ' ರಹಸ್ಯ?

ಈ ಮಹತ್ವದ ಸಂಶೋಧನೆಯನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ನಮ್ಮ ಎರಡೂ ಕೈಗಳನ್ನು ಉದಾಹರಣೆಯನ್ನಾಗಿ ನೋಡಬಹುದು. ನಮ್ಮ ಎಡ ಮತ್ತು ಬಲಗೈಗಳು ಪರಸ್ಪರ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಂತಿರುತ್ತವೆ. ಆದರೆ, ಒಂದರ ಮೇಲೊಂದನ್ನು ಇಟ್ಟಾಗ ಅವುಗಳು ಸಂಪೂರ್ಣವಾಗಿ ಒಂದಕ್ಕೊಂದು ಸಮನಾಗಿ ಕುಳಿತುಕೊಳ್ಳುವುದಿಲ್ಲ. ಅಂತೆಯೇ, ನಿಸರ್ಗದಲ್ಲಿರುವ ಜೈವಿಕ ರಚನೆಗಳು ಮತ್ತು ಅಮೈನೋ ಆ್ಯಸಿಡ್‌ಗಳು ಕೂಡ ಎಡ ಮತ್ತು ಬಲಗೈ ಮಾದರಿಯ 'ಕನ್ನಡಿ ರೂಪದ' ಅಣುಗಳನ್ನು ಹೊಂದಿರುತ್ತವೆ. ಆದರೆ, ಆಶ್ಚರ್ಯವೆಂದರೆ ಜೀವಕೋಶಗಳು ತಮ್ಮ ಪ್ರೋಟೀನ್‌ಗಳಲ್ಲಿ ಕೇವಲ ಒಂದೇ ಒಂದು ಮಾದರಿಯ ಅಣುಗಳನ್ನು ಮಾತ್ರ ಬಳಸಿಕೊಳ್ಳುತ್ತವೆ. ನಿಸರ್ಗದ ಈ ವಿಶೇಷ ಗುಣವನ್ನು ವಿಜ್ಞಾನದ ಭಾಷೆಯಲ್ಲಿ 'ಹೋಮೋಚಿರಲಿಟಿ' (Homochirality) ಎಂದು ಕರೆಯಲಾಗುತ್ತದೆ.

ಸಾಮಾನ್ಯವಾಗಿ ಪ್ರಯೋಗಾಲಯಗಳಲ್ಲಿ ರಾಸಾಯನಿಕ ಕ್ರಿಯೆ ನಡೆಸಿದಾಗ ಎರಡೂ ಮಾದರಿಯ ಅಣುಗಳು ಶೇ.50-50ರಷ್ಟು ಸಮನಾಗಿ ಉತ್ಪತ್ತಿಯಾಗುತ್ತಿದ್ದವು. ನಿಸರ್ಗವು ಹೇಗೆ ಕೇವಲ ಒಂದೇ ಮಾದರಿಯ ಅಣುವನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದು ನೂರಕ್ಕೂ ಹೆಚ್ಚು ವರ್ಷಗಳಿಂದ ವಿಜ್ಞಾನಿಗಳಿಗೆ ದೊಡ್ಡ ಸವಾಲಾಗಿತ್ತು. ಆದರೆ, ಅದನ್ನು ಈ ಇಬ್ಬರೂ ನೀರು ಕುಡಿದಷ್ಟು ಸುಲಭ ಎನ್ನುವಂತೆ ಕಂಡುಕೊಂಡಿರುವುದು ಸದ್ಯ ಹಲವರ ಹುಬ್ಬೇರಿಸಿದೆ. ಇನ್ನು, ಅಕ್ಟೋಬರ್ 6ರಂದು ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗಳನ್ನು ಪ್ರಕಟಿಸಿದರೆ, ನಂತರದಲ್ಲಿ ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಸಾಹಿತ್ಯ ಮತ್ತು ಶಾಂತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗುವುದು. ಈ ವರ್ಷದ ಡಿಸೆಂಬರ್ 10ರಂದು ನಡೆಯುವ ಸಮಾರಂಭದಲ್ಲಿ ಪುರಸ್ಕೃತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

Also Read
ಅ.17ರಂದು ಶುಕ್ರಾದಿತ್ಯ ರಾಜಯೋಗ ಸೃಷ್ಟಿ: ಈ 4 ರಾಶಿಯವರಿಗೆ ಶುಕ್ರದೆಸೆ ಆರಂಭ, ಹರಿದುಬರಲಿದೆ ಅನಿರೀಕ್ಷಿತ ಆದಾಯ! Astrology
Nobel Prize In Chemistry

ಯಾರ ಹೆಸರಿನಲ್ಲಿ ಈ ಪ್ರಶಸ್ತಿ?

1901ರಿಂದ, ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರ ಆಶಯಗಳಿಗೆ ಅನುಗುಣವಾಗಿ ಮಾನವಕುಲಕ್ಕೆ ಮಹತ್ತರವಾದ ಪ್ರಗತಿ, ಕೊಡುಗೆಗಳನ್ನು ನೀಡಿದ ಪುರುಷರು, ಮಹಿಳೆಯರು ಮತ್ತು ಸಂಸ್ಥೆಗಳಿಗೆ ಈ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅಂತೆಯೇ, 2026ರ ಪ್ರಶಸ್ತಿ ಪ್ರಕಟಣೆ ಕೂಡ ನಡೆಯುತ್ತಿದೆ. ಪ್ರತಿಯೊಬ್ಬ ನೊಬೆಲ್ ಪ್ರಶಸ್ತಿ ವಿಜೇತರಿಗೆ 11 ಮಿಲಿಯನ್ ಸ್ವೀಡಿಷ್ ಕ್ರೋನರ್ (ಅಂದರೆ ಸುಮಾರು 1.2 ಮಿಲಿಯನ್ ಡಾಲರ್​) ದೊರೆಯಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net