Grok AI ಅಶ್ಲೀಲ ವಿವಾದ: ಬಳಕೆದಾರರಿಗೆ ಶಾಕ್ ನೀಡಿದ ಎಲಾನ್ ಮಸ್ಕ್; ಹೊಸ ರೂಲ್ಸ್ ಏನು ಹೇಳುತ್ತೆ? Elon Musk
ಎಲಾನ್ ಮಸ್ಕ್, ಗ್ರೋಕ್ ಎಐ
Published on:
Copied
Follow Us
ಅಮೆರಿಕ: ಎಲಾನ್ ಮಸ್ಕ್(Elon MUsk) ಒಡೆತನದ AI ಪರಿಕರವಾದ ಗ್ರೋಕ್ನಲ್ಲಿ ಲೈಂಗಿಕ ಚಿತ್ರಗಳ ಉತ್ಪಾದನೆ ಹೆಚ್ಚಳವಾದ ಹಿನ್ನಲೆ ಇಮೇಜ್ ಎಡಿಟಿಂಗ್ನ್ನು ಪೇಯ್ಡ್ ಬಳಕೆದಾರರಿಗೆ ಮಾತ್ರ ಸೀಮಿತಗೊಳಿಸಿದೆ ಎಂದು ತಿಳಿದುಬಂದಿದೆ.
ಜನರು, ಮುಖ್ಯವಾಗಿ ಮಹಿಳೆಯರ ಫೋಟೋಗಳನ್ನು ಬಿಕಿನಿಯಲ್ಲಿ ತೋರಿಸಲು ಗ್ರೋಕ್ನ್ನು ಬಳಸಿಕೊಂಡಿದ್ದರಿಂದ ಇತ್ತೀಚೆಗೆ ಟೀಕೆಗೆ ಗುರಿಯಾಗಿದ್ದು, ಕೆಲವರು ಇನ್ನೂ ಮುಂದೆ ಹೋಗಿ, ಮಹಿಳೆಯರ ಮತ್ತು ಮಕ್ಕಳ ಲೈಂಗಿಕ ಚಿತ್ರಗಳನ್ನು ನಿರ್ಮಿಸಿದ ಕುರಿತು ವರದಿಯಾಗಿತ್ತು.
ಭಾರತ ಸರ್ಕಾರದ ಪತ್ರ
ಅಶ್ಲೀಲ, ನಗ್ನ, ಅಸಭ್ಯ ಮತ್ತು ಲೈಂಗಿಕತೆಗೆ ಸಂಬಂಧಿಸಿದ ವಿಷಯಗಳನ್ನು ತಕ್ಷಣವೇ ತೆಗೆದುಹಾಕಲು ಮತ್ತು ನಿಷ್ಕ್ರಿಯಗೊಳಿಸಲು ಕೇಂದ್ರ ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆ X (ಟ್ವಿಟರ್) ಗೆ ಆದೇಶಿಸಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಲೋನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆಯ ಮುಖ್ಯ ಅನುಸರಣಾ ಅಧಿಕಾರಿಗೆ ಬರೆದ ಪತ್ರದಲ್ಲಿ, ಗ್ರೋಕ್‌ನ ಸಮಗ್ರ ಪರಿಶೀಲನೆಯನ್ನು ಕೈಗೊಂಡು ಕಾನೂನುಬಾಹಿರ ವಿಷಯಗಳನ್ನು ತೆಗೆದುಹಾಕುವಂತೆ ಸೂಚಿಸಿತ್ತು.
ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಈ ಚಿತ್ರಗಳನ್ನು "ನಾಚಿಕೆಗೇಡು" ಎಂದು ಕರೆದರು ಮತ್ತು ಬ್ರಿಟಿಷ್ ನಿಯಂತ್ರಕ ಆಫ್‌ಕಾಮ್ ಸರ್ಕಾರವು ಕ್ರಮ ಕೈಗೊಳ್ಳಲು ಸಂಪೂರ್ಣ ಬೆಂಬಲ ಇದೆ ಎಂದು ಭರವಸೆ ನೀಡಿದರು.
ಯುರೋಪಿಯನ್ ಒಕ್ಕೂಟ ಸಹ ಗ್ರೋಕ್‌ಗೆ ಸಂಬಂಧಿಸಿದ ಆಂತರಿಕ ದಾಖಲೆಗಳನ್ನು ವರ್ಷದ ಅಂತ್ಯದವರೆಗೆ ಸಂರಕ್ಷಿಸುವಂತೆ ಸೂಚಿಸಿತು. EU ಈ ಹಿಂದೆ ಮಕ್ಕಳ ಕೆಲವು ಲೈಂಗಿಕವಾಗಿ ಸ್ಪಷ್ಟವಾದ ಚಿತ್ರಗಳನ್ನು ಕಾನೂನುಬಾಹಿರ ಎಂದು ಖಂಡಿಸಿತ್ತು.
ಎಲೋನ್ ಮಸ್ಕ್ ಪ್ರತಿಕ್ರಿಯೆ
ಎಲೋನ್ ಮಸ್ಕ್ ಕಳೆದ ವಾರ X ನಲ್ಲಿ ಪೋಸ್ಟ್ ಮಾಡಿ, ಅಕ್ರಮ ವಿಷಯವನ್ನು ಸೃಷ್ಟಿ ಮಾಡಲು ಗ್ರೋಕ್ನ್ನು ಬಳಸುವವರು ಕಾನೂನುಬಾಹಿರ ವಿಷಯವನ್ನು ಅಪ್‌ಲೋಡ್ ಮಾಡಿದರೆ ಪರಿಣಾಮಗಳನ್ನು ಅನುಭವಿಸುತ್ತಾರೆ ಎಂದು ಹೇಳಿದ್ದರು,(ಏಜನ್ಸೀಸ್).