"ಕೈಗೆ ಕೋಳ ತೊಟ್ಟು ಬಾಂಗ್ಲಾ ಪ್ರವೇಶ": ಶೇಖ್ ಹಸೀನಾ ವಿರುದ್ಧ ಸಚಿವ ಹುಮಾಯೂನ್ ಕಬೀರ್ ಕಿಡಿ! Sheikh Hasina

Bangladeshi Minister Humayun Kabir warns against Sheikh Hasina
ಶೇಖ್ ಹಸೀನಾ ವಿರುದ್ಧ ಬಾಂಗ್ಲಾ ಸಚಿವ ಹುಮಾಯೂನ್ ಕಬೀರ್ ಎಚ್ಚರಿಕೆ
Published on: 

ಢಾಕಾ: 2024 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ಹಿಂಸಾBangladesh ಚಾರದ ಸಂದರ್ಭದಲ್ಲಿ ಅಧಿಕಾರದಿಂದ ಪದಚ್ಯುತರಾಗಿ, ದೇಶ ತೊರೆದು ಭಾರತ ಸೇರಿಕೊಂಡಿದ್ದ ಮಾಜಿ ಪ್ರಧಾನಿ ಶೇಖ್​ ಹಸೀನಾ ಈಗ ತಮ್ಮ ತವರಿಗೆ ಮರಳಲು ಸಿದ್ಧರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಹಸೀನಾ ಡಿ. 16 ರಂದು ಬಂಗ್ಲಾದೇಶಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆಂದು ತಿಳಿದು ಬರುತ್ತಿದೆ. ಶೇಖ್​ ಹಸೀನಾ ಅವರ ಈ ಬೆಳವಣಿಗೆಯಿಂದ ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಹಿಂಸಾಚಾರ ಆರಂಭವಾಗಿದ್ದು, ಬಾಂಗ್ಲಾದ ವಿದೇಶಾಂಗ ಸಚಿವರು ಮಾಜಿ ಪ್ರಧಾನಿ ವಿರುದ್ಧ ಹರಿಹಾಯ್ದಿದ್ದಾರೆ.

ಬೇಡಿ ತೊಟ್ಟು ಬಾಂಗ್ಲಾ ಪ್ರವೇಶ!

ಇನ್ನು ಶೇಖ್​ ಹಸೀನಾ ಬಾಂಗ್ಲಾದೇಶಕ್ಕೆ ಮರಳುತ್ತಿದ್ದಾರೆಂಬ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಬಾಂಗ್ಲಾ ವಿದೇಶಾಂಗ ಖಾತೆ ರಾಜ್ಯ ಸಚಿವ ಹುಮಾಯೂನ್​ ಕಬೀರ್​, ನಾವು ಹಸೀನಾಗೆ ಯಾವುದೇ ವಿಮಾನ ವ್ಯವಸ್ಥೆ ಮಾಡಲ್ಲ, ಆಕೆಯ ಯಾವುದೇ ಬೇಡಿಕೆಗಳಿಗೆ ನಮ್ಮ ಒಪ್ಪಿಗೆ ಇಲ್ಲವೇ ಇಲ್ಲ. ಅವಳು ಭಾರತದಿಂದ ಗಡಿಪಾರಾಗಿ ಬಂದರೆ ಮಾತ್ರ ಬಾಂಗ್ಲಾದೇಶಕ್ಕೆ ಪಾದಾರ್ಪಣೆ ಮಾಡಬಹುದು. ಇಲ್ಲದಿದ್ದರೆ, ಆಕೆ ತನ್ನ ಕೈಗೆ ಕೋಳವನ್ನು ತೊಟ್ಟು ದೇಶಕ್ಕೆ ಕಾಲಿಡಲಿದ್ದಾಳೆಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಯಾವುದೇ ಬೇಡಿಕೆ ಒಪ್ಪಲ್ಲ!

ಇನ್ನು ಬಾಂಗ್ಲಾ ಪ್ರವೇಶಕ್ಕೂ ಮುನ್ನ, 2024 ರಲ್ಲಿ ಹಿಂಸಾಚಾರ ನಡೆದ ಸಂದರ್ಭದಲ್ಲಿ ಹಸೀನಾ ಅವರನ್ನು ಬಾಂಗ್ಲಾದೇಶದ ವಿಮಾನದ ಮೂಲಕವೇ ಭಾರತಕ್ಕೆ ರವಾನೆ ಮಾಡಲಾಗಿತ್ತು. ಹೀಗಾಗಿ ಡಿ. 16 ರಂದು ದೇಶಕ್ಕೆ ಮರಳಲಿರುವ ಆಕೆಯನ್ನು ಬಾಂಗ್ಲಾದ ವಿಮಾನದ ಮೂಲಕವೇ ಸ್ವಾಗತಿಸಬೇಕೆಂದು ಹಸೀನಾ ಆಪ್ತ ಸೈಯದ್ ಮೊಜಮ್ಮೆಲ್ ಅಲಿ ಹೇಳಿಕೆ ನೀಡಿದ್ದರು.

ಈ ಮನವಿಯನ್ನು ನೇರವಾಗಿ ತಿರಸ್ಕಾರ ಮಾಡಿರುವ ಬಾಂಗ್ಲಾ ಸರ್ಕಾರ, ಅವರ ವಿರುದ್ಧ ಪ್ರಜೆಗಳು ರೊಚ್ಚಿಗೆದ್ದರು. ಅಧಿಕಾರದಿಂದ ಕಿತ್ತೊಗೆದರು. ಆಕೆ ದೇಶ ಬಿಟ್ಟು ಓಡಿಹೋದಳು. ಇಂತವಳಿಗಾಗಿ ಬಾಂಗ್ಲಾ ಯಾವುದೇ ಸಹಕಾರ ನೀಡುವುದಿಲ್ಲ.

ಆಕೆಯ ಯಾವುದೇ ಮನವಿಯನ್ನು, ಬೇಡಿಕೆಯನ್ನು ನಾವು ಒಪ್ಪಲ್ಲ. ಆಕೆಯ ವಿರುದ್ಧ ದೇಶದಲ್ಲಿ ಅನೇಕ ಪ್ರಕರಣಗಳು ನಡೆಯುತ್ತಿವೆ. ಕೆಲವೊಂದರಲ್ಲಿ ಶಿಕ್ಷೆಯೂ ಪ್ರಕಟವಾಗಿದೆ. ಹೀಗಾಗಿ ಆಕೆ ಬಾಂಗ್ಲಾ ನೆಲಕ್ಕೆ ಕಾಲಿಡುತ್ತಲೇ ಮೊದಲು ಬಂಧನವಾಗುತ್ತದೆ ಎಂದು ತಿಳಿಸಿದ್ದಾರೆ.

Also Read
ಪಾಕಿಸ್ತಾನದಲ್ಲಿ ಪ್ರತ್ಯೇಕ 'ಸಿಂಧುದೇಶ'ದ ಕೂಗು: ಕರಾಚಿಯಲ್ಲಿ ಲಕ್ಷಾಂತರ ಜನರಿಂದ ಬೃಹತ್ ಪ್ರತಿಭಟನೆ! Sindhudesh
Bangladeshi Minister Humayun Kabir warns against Sheikh Hasina

ಹಿಂಸಾಚಾರ ಮಾಡುತ್ತಿರುವವರು ಭಯೋತ್ಪಾದಕರು!

ಇನ್ನು ಶೇಖ್​ ಹಸೀನಾ ಬಾಂಗ್ಲಾಗೆ ಮರಳುವ ಸುದ್ದಿ ಹರಿದಾಡಿದ ಕೆಲವೇ ದಿನಗಳಲ್ಲಿ ಬಾಂಗ್ಲಾದ ಬೀದಿಗಳಲ್ಲಿ ಮತ್ತೆ ಹಿಂಸಾಚಾರ ಪ್ರಾರಂಭವಾಗಿದೆ. ಶೇಖ್​ ಹಸೀನಾ ಅವರ ಆವಾಮಿ ಲೀಗ್​ ಬೆಂಬಲಿಗರು ಗೋಪಾಲ್‌ಗಂಜ್​ನಲ್ಲಿ ಪೊಲೀಸರ ವಾಹನಕ್ಕೆ ಬೆಂಕಿ ಹಚ್ಚುವ ಮೂಲಕ ಉದ್ವಿಗ್ನ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ.

ಇನ್ನು ಈ ಘಟನೆಗೆ ಪ್ರತಿಕ್ರಿಯೆ ನೀಡಿರುವ ಹುಮಾಯೂನ್​ ಕಬೀರ್​, ಆಕೆಯ ಆಗಮನದಿಂದ ಮತ್ತೆ ದೇಶದಲ್ಲಿ ಹಿಂಸಾಚಾರ ಆರಂಭವಾಗಲಿದೆ. ದೇಶದಲ್ಲಿಗ ಆವಾಮಿ ಲೀಗ್​ನ ಭಯೋತ್ಪಾದಕರು, ಉದ್ವಗ್ನ ವಾತಾವರಣವನ್ನು ನಿರ್ಮಿಸಲು ಮುಂದಾಗಿದ್ದಾರೆ. ಅವರ ವಿರುದ್ಧ ನಾವು ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತೇವೆಂದು ಅವರು ತಿಳಿಸಿದ್ದಾರೆ, (ಏಜೆನ್ಸೀಸ್​).