ಯೂನಿಟ್ರಿ G1 ವೇಗದ, ಚುರುಕಾದ ಚಲನೆಗಳಿಗೆಂದೇ ಡಿಸೈನ್ ಮಾಡಲಾದ ಹ್ಯೂಮನಾಯ್ಡ್ ರೋಬೋಟ್‌ಗಳು ಇದಾಗಿದ್ದು. ಈಗಾಗಲೇ ಹಲವು ಪ್ರದರ್ಶನಗಳ ಮೂಲಕ ನಡೆಯಲು, ಓಡಲು, ಡಾನ್ಸ್ ಮತ್ತು ಇತರೆ ಕೌಶಲ್ಯ ತೋರಿಸುವಲ್ಲಿ ಯಶಸ್ವಿಯಾಗಿವೆ. ಆದಾಗ್ಯೂ, 'ಅಮೆರಿಕಾಸ್ ಗಾಟ್ ಟ್ಯಾಲೆಂಟ್' ವೇದಿಕೆಯಲ್ಲಿ, ಈ ರೋಬೋಟ್‌ಗಳು ತನ್ನದೇ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಬದಲಿಗೆ, ಮುಂಚಿತವಾಗಿಯೇ ಪ್ರೋಗ್ರಾಮಿಂಗ್ ಮಾಡಿ, ಹಲವು ರೀತಿಯ ಆ್ಯಕ್ಷನ್ ಮಾಡುವಂತೆ ಸೆಟ್ ಮಾಡಿದ್ದಾಗಿ ವಿವರಿಸಲಾಗಿದೆ,(ಏಜೆನ್ಸೀಸ್).