ತೈವಾನ್​ನಲ್ಲಿ ಮತ್ತೆ 7.0 ತೀವ್ರತೆಯ ಪ್ರಬಲ ಭೂಕಂಪನ; ಸಾವು ನೋವಿನ ಬಗ್ಗೆ ಇನ್ನೂ ವರದಿಯಾಗಿಲ್ಲ | earthquake

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Earthquake: ತೈವಾನ್​ ಯಿಲಾನ್ ಕೌಂಟಿ ಬಳಿ ಇಂದು(ಡಿ. 27) ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.0ರಷ್ಟು ತೀವ್ರತೆ ದಾಖಲಾಗಿದೆ ಎಂದು ಸ್ಥಳೀಯ ಹವಾಮಾನ ಸಂಸ್ಥೆ ತಿಳಿಸಿದೆ.
ತೈವಾನ್​ ಸಮಯ ಪ್ರಕಾರ ಇಂದು ರಾತ್ರಿ 11.05ಕ್ಕೆ ಭೂಕಂಪನ ಸಂಭವಿಸಿದೆ. ಯಿಲಾನ್ ಕೌಂಟಿ ಹಾಲ್‌ನಿಂದ ಪೂರ್ವಕ್ಕೆ 32.3 ಕಿ.ಮೀ ದೂರದಲ್ಲಿ, 72.8 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ.
ಇನ್ನೂ ಭೂಕಂಪನದಿಂದಾಗಿ ಯಾವುದೇ ಹಾನಿ ಸಂಭವಿಸಿದ ಬಗ್ಗೆ ಇನ್ನೂ ವರದಿಯಾಗಿಲ್ಲ (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net