ಒಪ್ಪಂದ ಉಲ್ಲಂಘಿಸಿ ಬಾಲ ಬಿಚ್ಚಿದ್ರೆ..ಸಂಪೂರ್ಣ ನಾಶ ಮಾಡಿಬಿಡ್ತೇವೆ ಹುಷಾರ್: ಇರಾನ್​ಗೆ Donald Trump​ ಶಾಕಿಂಗ್​ ವಾರ್ನಿಂಗ್​

Donald Trump​
Donald Trump​
Published on
ವಾಷಿಂಗ್ಟನ್: ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್​ ಇರಾನ್​ ಮೇಲೆ ವಾಯುದಾಳಿ ನಡೆಸಿತ್ತು. ಸಾಕಷ್ಟು ಸಾವು- ನೋವು, ಆಸ್ತಿ-ಪಾಸ್ತಿ ನಾಶ ಕಂಡ ಹಲವು ವಾರಗಳ ನಂತರ ಏಪ್ರಿಲ್​.7ರಂದು ಟ್ರಂಪ್​ ಎರಡು ವಾರಗಳ ಕದನ ವಿರಾಮ ಘೋಷಣೆ ಮಾಡಿದ್ದರು. ಆ ಬೆನ್ನಲ್ಲೇ ಮತ್ತೊಂದು ಶಾಕಿಂಗ್​​​​ ವಾರ್ನಿಂಗ್​ ಅನ್ನು America president Donald Trump ಟ್ರುತ್​ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಟ್ರಂಪ್​ ವಾರ್ನಿಂಗ್ ಏನು?

ಇರಾನ್​ ಜೊತೆಗಿನ ಶಾಂತಿ ಒಪ್ಪಂದದ ಮಧ್ಯೆಯೇ ಮತ್ತೆ ಯುದ್ಧದ ಆತಂಕವನ್ನು ಅಮೆರಿಕ ನೀಡಿದೆ. ಹೌದು ಟ್ರಂಪ್​ ಹಂಚಿಕೊಂಡಿರುವ ಪೋಸ್ಟ್​ನಲ್ಲಿ ಇರಾನ್ ಮೇಲೆ ಅಮೆರಿಕದ ಸೇನಾ ಹಿಡಿತ ಮುಂದುವರಿಯಲಿದೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ 'ನೈಜ ಒಪ್ಪಂದ'ವನ್ನು ಇರಾನ್ ಸಂಪೂರ್ಣವಾಗಿ ಪಾಲಿಸದಿದ್ದರೆ ಹಿಂದೆಂದೂ ಕಾಣದ ರೀತಿಯಲ್ಲಿ ಯುದ್ಧ ಆರಂಭವಾಗಲಿದೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಟ್ರಂಪ್ ಪೋಸ್ಟ್​ನಲ್ಲಿ ಏನಿದೆ?

ಒಪ್ಪಂದವನ್ನು ಸಂಪೂರ್ಣವಾಗಿ ಪಾಲನೆ ಮಾಡುವವರೆಗೂ, ಇರಾನ್​ ಮೇಲೆ ಇರುವ ಅಮೆರಿಕದ ಸೇನಾ ಹಿಡಿತ ಸಂಪೂರ್ಣವಾಗಿ ಮುಂದುವರೆಯಲಿದೆ. ಈಗಾಗಲೇ ಮಾಡಿಕೊಂಡಿರುವ ನೈಜ ಒಪ್ಪಂದವನ್ನು ಉಲ್ಲಂಘಿಸಿದರೆ ಮತ್ತೆ ಯುದ್ಧ ಆರಂಭವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ವೇದಿಕೆಯಾದ 'ಟ್ರೂತ್ ಸೋಶಿಯಲ್'ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಅಮೆರಿಕದ ಮಿಲಿಟರಿ ಸಿಬ್ಬಂದಿ ಶಸ್ತ್ರಾಸ್ತ್ರಗಳೊಂದಿಗೆ, ನಮ್ಮ ಎಲ್ಲ ಹಡಗು, ವಿಮಾನ, ಮದ್ದುಗುಂಡು ಮದ್ದುಗುಂಡುಗಳೊಂದಿಗೆ ಇರಾನ್​ ಸುತ್ತಮುತ್ತ ಬೀಡು ಬಿಟ್ಟಿರುತ್ತಾರೆ. ಒಪ್ಪಂದ ಮುರಿದರೆ ಈಗಾಗಲೇ ಸಾಕಷ್ಟು ನಾಶದಿಂದ ದುರ್ಬಲಗೊಂಡಿರುವ ಶತ್ರುವನ್ನು ನಾಶ ಪಡಿಸಲು ಹೆಚ್ಚು ಕಾಲ ಬೇಕಾಗುವುದಿಲ್ಲ. ಇಲ್ಲಿಯವರೆಗೂ ನಡೆದ ಭೀಕರ ಯುದ್ಧಕ್ಕಿಂತ ಈ ಬಾರಿ ಭಯಾನಕವಾಗಿ ಇರಲಿದೆ. ಇದಕ್ಕಾಗಿ ನಮ್ಮ ಸೇನೆ ಎಲ್ಲ ಸಿದ್ಧತೆಯೊಂದಿಗೆ ಸಜ್ಜಾಗಿ ನಿಂತಿದೆ ಎಂದು ಬರೆದದುಕೊಂಡಿದ್ದಾರೆ.

ನಿಮ್ಮ ನಾಶಕ್ಕೆ ಸಜ್ಜಾಗಿದ್ದೇವೆ

ಹಿಂದೆಯೇ ಒಪ್ಪಂದ ಮಾಡಿಕೊಂಡಂತೆ ಮತ್ತು ಸುಳ್ಳು ಮಾತುಗಳ ಹೊರತಾಗಿಯೂ - ಯಾವುದೇ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವಂತಿಲ್ಲ. ಹೊರ್ಮುಜ್ ಜಲಸಂಧಿಯು ವ್ಯಾಪಾರ ವಹಿವಾಟುಗಳಿಗೆ ಮುಕ್ತ ಹಾಗೂ ಸುರಕ್ಷಿತವಾಗಿರುತ್ತದೆ. ಈ ಮಧ್ಯೆ, ನಮ್ಮ ಸೈನ್ಯವು ಮುಂದಿನ ವಿಜಯಕ್ಕಾಗಿ ಕಾಯುತ್ತಾ, ಮದ್ದುಗುಂಡುಗಳನ್ನು ತುಂಬಿಸಿಕೊಂಡು ವಿಶ್ರಾಂತಿ ಪಡೆಯುತ್ತಿದೆ. ಅಮೆರಿಕ ಮತ್ತೆ ಪುಟಿದೆದ್ದಿದೆ ಎಂದು ಪೋಸ್ಟರ್​ನಲ್ಲಿದೆ, (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net