ಯುದ್ಧದ ಅಂತ್ಯ ನಿರ್ಧರಿಸೋದು ನಾವು, ಟ್ರಂಪ್​ಗೆ ಆ ಅಧಿಕಾರವಿಲ್ಲ: ಅಮೆರಿಕಕ್ಕೆ ಇರಾನ್ ಟಾಂಗ್...America-Iran War

ಯುದ್ಧದ ಅಂತ್ಯ ನಿರ್ಧರಿಸೋದು ನಾವು, ಟ್ರಂಪ್​ಗೆ ಆ ಅಧಿಕಾರವಿಲ್ಲ: ಅಮೆರಿಕಕ್ಕೆ ಇರಾನ್ ಟಾಂಗ್...America-Iran War
ಯುದ್ಧದ ಅಂತ್ಯ ನಿರ್ಧರಿಸೋದು ನಾವು, ಟ್ರಂಪ್​ಗೆ ಆ ಅಧಿಕಾರವಿಲ್ಲ: ಅಮೆರಿಕಕ್ಕೆ ಇರಾನ್ ಟಾಂಗ್...America-Iran War
Published on

ಪ್ರಮುಖ ಮುಖ್ಯಾಂಶಗಳು

  • ಇರಾನ್​ ಮೇಲಿನ ಸೇನಾದಾಳಿ ಶೀಘ್ರವೇ ಕೊನೆಗಾಣಲಿದೆ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್
  • ಇರಾನ್ ಬಾಲ ಬಿಚ್ಚಿದ್ರೆ ಇಡೀ ದೇಶವನ್ನೇ ಸರ್ವನಾಶ ಮಾಡ್ತೇವೆ ಎಂದ ಟ್ರಂಪ್
  • ಯುದ್ಧ ಅಂತ್ಯ ಕಾಣುವ ಬಗ್ಗೆ ನಿರ್ಧಾರ ಮಾಡುವುದು ಟೆಹ್ರಾನ್ ಅಮೆರಿಕ ಅಲ್ಲ ಎಂದು ಟ್ರಂಪ್​ಗೆ ಟಾಂಗ್
  • ಒಂದು ಲೀಟರ್​ ತೈಲ ರಫ್ತು ಮಾಡೋಕೆ ಬಿಡೋಲ್ಲ ಹುಷಾರ್ ಎಂದು ಎಚ್ಚರಿಕೆ ಕೊಟ್ಟ ಇರಾನ್
ಟೆಹ್ರಾನ್: ಇರಾನ್​ ಮೇಲೆ ನಡೆಸುತ್ತಿರುವ ಸೇನಾ ಕಾರ್ಯಾಚರಣೆ(America-Iran War) ಆದಷ್ಟು ಬೇಗನೆ ಕೊನೆಗಾಣಲಿದೆ. ಬಾಲಬಿಚ್ಚಿದ್ರೆ ಅಮೆರಿಕ ಇಡೀ ರಾಷ್ಟ್ರವನ್ನೇ ಧೂಳಿಪಟ ಮಾಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​​ ಹೇಳಿಕೆ ಕೊಟ್ಟ ಬೆನ್ನಲ್ಲೇ ಇರಾನ್​ ಟಾಂಗ್​ ಕೊಟ್ಟಿದೆ. ಯುದ್ಧ ನಿಲ್ಲಿಸಬೇಕೋ ಅಥವಾ ಬೇಡವೋ ಎಂದು ನಿರ್ಧಾರ ಮಾಡುವುದು ಟೆಹ್ರಾನ್, ಅಮೆರಿಕಕ್ಕೆ ಆ ಅಧಿಕಾರ ಇಲ್ಲ ಎಂದು ಇರಾನ್​ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGS) ಹೇಳಿದೆ.
ಇರಾನ್​ ಮೇಲೆ ಅಮೆರಿಕ ನಡೆಸುತ್ತಿರುವ ಸೇನಾ ದಾಳಿಯನ್ನು ವಿಹಾರ ಎಂದು ಕರೆಯಲಾಗುತ್ತಿದ್ದು, ಇದನ್ನು ಶೀಘ್ರವೇ ಕೊನೆಗಾಣಿಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ. ಇರಾನ್​ ಮೇಲೆ ನಡೆಸಿದ ದಾಳಿ ತೃಪ್ತಿಕರ ವಿಚಾರ ಸದ್ಯ ಈ ಸಂಘರ್ಷವನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇವೆ. ಇರಾನ್​ ಬಳಿ ನೌಕಾಪಡೆ, ವಾಯುಪಡೆಯಿಲ್ಲ. ಅವರು ಮತ್ತೆ ಬಾಲ ಬಿಚ್ಚಿದ್ರೆ ನಾವು ಇಡೀ ಇರಾನ್ ಸರ್ವನಾಶ ಮಾಡುತ್ತೇವೆ ಎಂದು ಹೇಳಿದ್ದರು.
ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ ವಿರುದ್ಧ ಇರಾನ್​ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGS) ಕಿಡಿಕಾರಿದೆ. `ಯುದ್ಧದ ಅಂತ್ಯವನ್ನು ನಿರ್ಧರಿಸುವುದು ನಾವು. ಅಮೆರಿಕ ಸೇನಾ ಪಡೆ ಯುದ್ಧ ಕೊನೆಗಾಣಿಸೋದಿಲ್ಲ. ಅವರ ಭವಿಷ್ಯ ನಮ್ಮ ಸಶಸ್ತ್ರ ಪಡೆ ಕೈನಲ್ಲಿದೆ' ಎಂದು ಇರಾನ್​ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿಕೊಂಡಿದೆ.

ಮಾಧ್ಯಮಗಳ ಮುಂದೆ ಟ್ರಂಪ್ ಹೇಳಿದ್ದಿಷ್ಟು..

`ನಾವು ಇರಾನ್​ನಲ್ಲಿ ಈಗಾಗಲೇ ಗೆಲುವು ಪಡೆದುಕೊಂಡಿದ್ದೇವೆ. ಆದರೆ, ಇನ್ನೂ ಸಾಕಷ್ಟು ಗಳಿಸಬೇಕಾದದ್ದು ಇದೆ. ಸಂಘರ್ಷವನ್ನು ಅಂತ್ಯಗೊಳಿಸಬೇಕೆಂದುಕೊಂಡಿದ್ದಂತೂ ನಿಜ. ಆದರೆ, ಸಂಪೂರ್ಣ ನಿಲ್ಲಿಸಲ್ಲ. ಇರಾನ್​ನನ್ನು ಸರ್ವನಾಶ ಮಾಡುವವರೆಗೆ ನಮ್ಮ ದಾಳಿ ಮುಂದುವರೆಯುತ್ತದೆ' ಎಂದು ರಿಪಬ್ಲಿಕ್ ಪಾರ್ಟಿಯ ಸದಸ್ಯರ ಸಮ್ಮೇಳನದಲ್ಲಿ ಅವರು ಮಾತನಾಡಿದ್ದಾರೆ ಎನ್ನಲಾಗಿದೆ.

ಇರಾನ್​ ಎಚ್ಚರಿಕೆ ಕೊಟ್ಟಿದ್ದೇನು?

ಈ ಹೇಳಿಕೆ ವಿರುದ್ಧ ಇರಾನ್ ಕಿಡಿಕಾರಿದೆ. ಇರಾನ್​ ನೆಲ ಎಲ್ಲರಿಗೂ ಸೇರಿದ್ದಾಗಿದೆ ಮತ್ತು ಯಾರಿಗೂ ಸೇರಿದ್ದಲ್ಲ ಅಕಸ್ಮಾತ್ ಅಮೆರಿಕ ಯುದ್ಧ ಮುಂದುವರೆಸಿ, ಹುಚ್ಚಾಟ ಮೆರೆದರೆ ಇಲ್ಲಿಂದ ಒಂದು ಲೀಟರ್ ತೈಲವನ್ನು ಸಾಗಿಸೋಕೆ ಆಗೋದಿಲ್ಲ. ಇನ್ನು ಕೊಲ್ಲಿಯ ಮೂಲಕ ಇಂಧನ ಸಾಗಣೆ ಮುಂದಿನ ದಿನಗಳಲ್ಲಿ ಕಷ್ಟಕರವಾಗಬಹುದು. ಎಂದು ಐಜಿಆರ್​ಸಿಯ ವಕ್ತಾರ ಹೇಳಿಕೊಂಡಿದ್ದಾರೆ.
ಇರಾನ್​ ಯುದ್ಧವನ್ನು ಎದುರಿಸುವ ಶಕ್ತಿಯನ್ನು ಹೊಂದಿದೆ. ಟೆಹ್ರಾನ್​​ ಕ್ರೂಸ್ ಕ್ಷಿಪಣಿ, ಡ್ರೋನ್​, ದಾಳಿ ನಡೆಸುವ ಹಡಗುಗಳನ್ನು ಹೊಂದಿದೆ. ಕನಿಷ್ಠ ಆರುತಿಂಗಳ ಕಾಲ ಯುದ್ಧವನ್ನು ಎದುರಿಸುತ್ತದೆ. ಇರಾನ್​ ಈ ಆರುತಿಂಗಳ ಒಳಗಗೆ ಯುದ್ಧವನ್ನು ಎದುರಿಸಲು ಬೇಕಾಗುವ ಹೊಸತಂತ್ರಗಳನ್ನು ಪರಿಚಯಿಸುತ್ತದೆ. ಹೆಚ್ಚು ಸುಧಾರಿತ ಕ್ಷಿಪಣಿಗಳನ್ನು ಅಖಾಡಕ್ಕೆ ಇಳಿಸಲು ಸಿದ್ಧತೆ ಮಾಡಿಕೊಳ್ಳುತ್ತದೆ ಎಂದು ಐಜಿಆರ್​ಸಿ ಹೇಳಿದೆ.
ಇರಾನ್​ನಲ್ಲಿ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ದಾಳಿಯಿಂದಾಗಿ 1,332 ಜನರು ಸಾವನಪ್ಪಿದ್ದಾರೆ. ಇನ್ನೂ ಈ ಸಂಘರ್ಷದಿಂದಾಗಿ ಸಾವಿರಕ್ಕೂ ಹೆಚ್ಚು ಮನೆಗಳು, ವಾಣಿಜ್ಯ ಕಟ್ಟಡಗಳು ನಾಶವಾಗಿದೆ ಎಂದು ರೆಡ್ ಕ್ರೆಸೆಂಟ್ ಸೊಸೈಟಿ ಹೇಳಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net