ಮಧ್ಯ ಪೆರುವಿನಲ್ಲಿ 6.9 ತೀವ್ರತೆಯ ಭೂಕಂಪನ; ಭಯದಿಂದ ಜನರು ಮನೆಯಿಂದ ಹೊರಗೆ ಓಡಿ ಬಂದ ವಿಡಿಯೋ ವೈರಲ್..Peru

ಮಧ್ಯ ಪೆರುವಿನಲ್ಲಿ 6.9 ತೀವ್ರತೆಯ ಭೂಕಂಪನ; ಭಯದಿಂದ ಜನರು ಮನೆಯಿಂದ ಹೊರಗೆ ಓಡಿ ಬಂದ ವಿಡಿಯೋ ವೈರಲ್..Peru
Published on: 
  • ಮಧ್ಯ ಪೆರುವಿನಲ್ಲಿ 6.9 ತೀವ್ರತೆಯ ಭೂಕಂಪನ.

  • ಜೂನಿನ್ ನಗರದ ಉತ್ತರಕ್ಕೆ 34 ಕಿ.ಮೀ ದೂರದಲ್ಲಿ ಹಾಗೂ ಭೂಮಿಯ 108 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದು.

  • ರಾಜಧಾನಿ ಲಿಮಾದಲ್ಲೂ ಭೂಮಿ ಕಂಪಿಸಿದ ಅನುಭವ, ಭಯದಿಂದ ಬೀದಿಗಿಳಿದ ಜನರು.

ಲಿಮಾ (ಪೆರು): ಮಧ್ಯ ಪೆರುವಿನ ಪರ್ವತ ಪ್ರದೇಶದಲ್ಲಿ ಶುಕ್ರವಾರ ಸಂಜೆ 6.9 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ. ಭಾರತೀಯ ಕಾಲಮಾನದ ಪ್ರಕಾರ ಶನಿವಾರ ಬೆಳಿಗ್ಗೆ ಭೂಕಂಪ ಸಂಭವಿಸಿವೆ.

ಭೂಕಂಪದ ಪ್ರಭಾವ ರಾಜಧಾನಿ ಲಿಮಾವರೆಗೂ ಕಂಡುಬಂದಿದ್ದರಿಂದ ಜನರು ಭಯಭೀತರಾಗಿ ಮನೆಗಳಿಂದ ಹೊರಕ್ಕೆ ಓಡಿ ಬಂದಿರುವ ದೃಶ್ಯಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿವೆ. ಭೂಕಂಪನದಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿರುವ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ನೀಡಿರುವ ಮಾಹಿತಿಯ ಪ್ರಕಾರ, ಸ್ಥಳೀಯ ಕಾಲಮಾನ ಶುಕ್ರವಾರ ಸಂಜೆ 7:09ಕ್ಕೆ ಭಾರತೀಯ ಕಾಲಮಾನದ ಪ್ರಕಾರ ಶನಿವಾರ ಬೆಳಿಗ್ಗೆ ಭೂಮಿ ಕಂಪಿಸಿದೆ. ಜೂನಿನ್ ನಗರದ ಉತ್ತರಕ್ಕೆ 34 ಕಿಲೋಮೀಟರ್ ದೂರದಲ್ಲಿರುವ ಆಂಡಿಸ್ ಪರ್ವತ ಪ್ರದೇಶದಲ್ಲಿ, ಭೂಮಿಯ 108 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ.

ಭೂಕಂಪದ ತೀವ್ರತೆ ಪೆರುವಿನ ರಾಜಧಾನಿ ಲಿಮಾದಲ್ಲೂ ಅನುಭವಕ್ಕೆ ಬಂದಿದ್ದು, ಭಯಭೀತರಾದ ನಿವಾಸಿಗಳು ತಮ್ಮ ಮನೆಗಳಿಂದ ಹೊರಬಂದು ಬೀದಿಗಳಲ್ಲಿ ಜಮಾಯಿಸಿದರು. ಆದರೆ, ಇದುವರೆಗೆ ಯಾವುದೇ ಹಾನಿ ಅಥವಾ ಸಾವುನೋವು ಸಂಭವಿಸಿಲ್ಲ ಎಂದು ಪೆರುವಿನ ಜಿಯೋಫಿಸಿಕಲ್ ಸಂಸ್ಥೆ ಸ್ಪಷ್ಟಪಡಿಸಿದೆ.

ಪೆರು ದೇಶವು ಪೆಸಿಫಿಕ್ ಜಲಾನಯನ ಪ್ರದೇಶದ ಸುತ್ತಲೂ 40,000 ಕಿಲೋಮೀಟರ್ (25,000 ಮೈಲು) ವ್ಯಾಪ್ತಿಯಲ್ಲಿ ಹರಡಿರುವ ಜ್ವಾಲಾಮುಖಿಗಳು ಮತ್ತು ಭೂಪದರಗಳ ಬಿರುಕುಗಳ ಪ್ರದೇಶವಾದ "ರಿಂಗ್ ಆಫ್ ಫೈರ್" ವ್ಯಾಪ್ತಿಯಲ್ಲಿ ಬರುತ್ತದೆ. ವಿಶ್ವದ ಬಹುಪಾಲು ಭೂಕಂಪಗಳು ಇದೇ ಪ್ರದೇಶದಲ್ಲಿ ಸಂಭವಿಸುತ್ತವೆ, (ಏಜೆನ್ಸೀಸ್).