ಪಿಸ್ತೂಲ್ ಆಕಾರದ ಲೈಟರ್ ತೋರಿಸಿ ಜನರನ್ನು ಹೆದರಿಸುತ್ತಿದ್ದ ಭಾರತ ಮೂಲದ ವ್ಯಕ್ತಿ ಬಂಧನ! ವಿಡಿಯೋ ವೈರಲ್​ Bangkok

untitled-design-2025-10-19t110608758-68f478db73ee8
Published on

ಥೈಲ್ಯಾಂಡ್​ : ಭಾರತೀಯ ಮೂಲದ ವ್ಯಕ್ತಿಯೊಬ್ಬನು ಪಿಸ್ತೂಲ್​ ಆಕಾರದ ಲೈಟರ್​ನಿಂದ ದಾರಿಯಲ್ಲಿ ಹೋಗುತ್ತಿರುವವರಿಗೆ ಬೆದರಿಕೆ ಹಾಕುತ್ತಿದ್ದ ಎಂಬ ಆರೋಪದಡಿ ಬಂಧನಕ್ಕೀಡಾಗಿರುವ ಘಟನೆ ಬ್ಯಾಂಕಾಕ್‌ನ ( Bangkok ) ಸಿಯಾಮ್​ನಲ್ಲಿ ನಡೆದಿದೆ.

ವಿಡಿಯೋದಲ್ಲೇನಿದೆ?

ಆರೋಪಿಯನ್ನು ಸಾಹಿಲ್ ರಾಮ್ ಥಡಾನಿ ಎಂದು ಗುರುತಿಸಲಾಗಿದ್ದು. ಈ ವ್ಯಕ್ತಿ ರಸ್ತೆಯಲ್ಲಿ ನೃತ್ಯ ಮಾಡುತ್ತಾ ಅವಾಚ್ಯ ಶಬ್ದದಲ್ಲಿ ದಾರಿಹೋಕರನ್ನು ನಿಂದಿಸುತ್ತಿದ್ದಾನೆ. ಹಾಗೆಯೇ ತನ್ನ ಬಳಿ ಇರುವ ಪಿಸ್ತೂಲ್​ ಆಕಾರದ ಲೈಟರ್​ನ್ನು ಅವರ ಕಡೆ ತೋರಿಸಿ ಕೂಗುತ್ತಿರುವುದನ್ನು ವಿಡಿಯೋದಲ್ಲಿ ಕಂಡು ಬಂದಿದೆ.

ಈ ವೇಳೆ ಅಲ್ಲಿನ ಗಾರ್ಡ್​ಗಳು ಆತನಲ್ಲಿರುವ ಲೈಟರ್​ ಪಿಸ್ತೂಲ್​ನ್ನು ವಶಪಡಿಸಿಕೊಂಡಿದ್ದು, ಆತನನ್ನು ಆ ರಸ್ತೆಯಿಂದ ಎದ್ದೇಳಲು ತಿಳಿಸಿದ್ದಾರೆ. ಆದರೂ ಅವನು ಎದ್ದೇಳದ ಕಾರಣ ಬಲವಂತವಾಗಿ ಎಳೆದುಕೊಂಡು ಹೋಗುತ್ತಿದ್ದು, ವ್ಯಕ್ತಿಯು ತನ್ನ ತಪ್ಪಿಗೆ ಕ್ಷಮೆಯಾಚಿಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ವಿಚಾರಣೆ ನಡೆಸಲು ಪಾತುಮ್​ ವಾನ್​ ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಗಾಂಜಾ ಸೇವನೆಯಿಂದ ಈ ರೀತಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net