ದೆಹಲಿ ಐಐಟಿಯ ರೋಗ ಪತ್ತೆ ಪರೀಕ್ಷಾ ವಿಧಾನಕ್ಕೆ ಐಸಿಎಂಆರ್​ ಅನುಮೋದನೆ

IIT
Published on

ನವದೆಹಲಿ: ಪಿಸಿಆರ್​ ಆಧಾರಿತ ರೋಗ ಪತ್ತೆ ಮಾಡುವ ವಿಧಾನ ಅಭಿವೃದ್ಧಿಪಡಿಸಿ ಐಸಿಎಂಆರ್​ ಅನುಮೋದನೆ ಪಡೆದ ಮೊದಲ ಶೈಕ್ಷಣಿಕ ಸಂಸ್ಥೆ ದೆಹಲಿ ಐಐಟಿ ಆಗಿದೆ.

ಕೋವಿಡ್​ -19 ಪತ್ತೆ ಹಚ್ಚುವ ಪರೀಕ್ಷಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ಹಾಗೂ ದೇಶದ ಹೆಚ್ಚಿನ ಜನಸಂಖ್ಯೆಗೆ ಕೈಗೆಟುಕುವಂತೆ ಮಾಡುವ ವಿಧಾನ ಇದಾಗಿದ್ದು, ಇದನ್ನು ಅಭಿವೃದ್ಧಿಗೊಳಿಸಿದ ದೆಹಲಿ ಐಐಟಿಗೆ ಐಸಿಎಂಅರ್​ ಅನುಮೋದನೆ ನೀಡಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ರೋಗ ಪತ್ತೆ ಪರೀಕ್ಷಾ ವಿಧಾನದ ಶೇ.100 ರಷ್ಟು ಖಚಿತತೆ ಹಾಗೂ ಸೂಕ್ಷ್ಮತೆಯನ್ನು ಐಸಿಎಂಆರ್​ನಲ್ಲಿ ಮೌಲ್ಯೀಕರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net