‘ನಾನು ಒಪ್ಪುತ್ತೇನೆ’! ನೆಹಾ ಬೋರಾ ನನಗಿಂತ ಟ್ಯಾಲೆಂಟೆಡ್ ಎಂದ ಅಭಿಜೀತ್ ದೀಪ್ಕೆ | Abhijeet Dipke

ನೆಹಾ ಬೋರಾ ತಮ್ಮಗಿಂತ ಹೆಚ್ಚು ಪ್ರತಿಭಾವಂತೆ ಎಂಬ ಎಕ್ಸ್‌ ಪೋಸ್ಟ್‌ಗೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ‘ನಾನು ಒಪ್ಪುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.
Abhijit Deepke on Neha Bora
ನನಗಿಂತ ನೆಹಾ ಬೋರಾ ಟ್ಯಾಲೆಂಟೆಡ್ ಎಂದ ಅಭಿಜೀತ್ ದೀಪ್ಕೆ
Published on: 

Delhi protest: ವಿದ್ಯಾರ್ಥಿ ನಾಯಕಿ ನೆಹಾ ಬೋರಾ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ಹೋಲಿಸಿ ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್‌ವೊಂದು ಗಮನ ಸೆಳೆದಿದೆ. ಈ ಪೋಸ್ಟ್‌ಗೆ ದೀಪ್ಕೆ ನೀಡಿದ ಚುಟುಕು ಪ್ರತಿಕ್ರಿಯೆಯೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಎಕ್ಸ್‌ ಬಳಕೆದಾರರೊಬ್ಬರು, “ನೆಹಾ ಬೋರಾ ಅಭಿಜೀತ್ ದೀಪ್ಕೆಗಿಂತ ಹೆಚ್ಚು ಪ್ರತಿಭಾವಂತೆ. ಅವರು ಸಂಪೂರ್ಣ ಜೆನ್‌-ಜಿ ಐಕಾನ್” ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ದೀಪ್ಕೆ “ನಾನು ಒಪ್ಪುತ್ತೇನೆ” ಎಂದು ಚುಟುಕಾಗಿ ಪ್ರತಿಕ್ರಿಯಿಸಿದ್ದಾರೆ.

ದೀಪ್ಕೆ ಅವರ ಪ್ರತಿಕ್ರಿಯೆಗೆ ಮತ್ತೊಬ್ಬ ಬಳಕೆದಾರ ‘ಲೆಜೆಂಡ್ಸ್ ಒಬ್ಬರನ್ನೊಬ್ಬರು ಗುರುತಿಸುತ್ತಾರೆ’ ಎಂದು ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ಎಕ್ಸ್‌ನಲ್ಲಿನ ಇವರಿಬ್ಬರ ನಡುವಿನ ಸಣ್ಣ ಸಂಭಾಷಣೆ ಗಮನ ಸೆಳೆದಿದೆ.

ಪ್ರತಿಭಟನೆಗಳಲ್ಲಿ ನೆಹಾ ಬೋರಾ

ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್‌ (AISA) ರಾಷ್ಟ್ರೀಯ ಅಧ್ಯಕ್ಷೆ ನೆಹಾ ಬೋರಾ ಇತ್ತೀಚೆಗೆ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ಗೆ ಸಂಬಂಧಿಸಿದ ಪ್ರತಿಭಟನೆಗಳಲ್ಲಿ ಸಕ್ರಿಯರಾಗಿದ್ದಾರೆ.

ಇದನ್ನೂ ಓದಿ: ಮದುವೆ ವಿಚಾರಕ್ಕೆ ಗಲಾಟೆ; ಪ್ರೇಯಸಿಗೆ ಮಾರಕಾಸ್ತ್ರದಿಂದ ಹಲ್ಲೆ, ಬಳಿಕ ಪ್ರಿಯಕರ ಸೂಸೈಡ್​ | Vijayawada Murder Attempt

ನಿನ್ನೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ನೆಹಾ ಬೋರಾ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕವೂ ಜಂತರ್ ಮಂತರ್‌ನಲ್ಲಿ ಮತ್ತೆ ಸೇರಿ ಪ್ರತಿಭಟನೆ ಮುಂದುವರಿಸುವಂತೆ ಬೋರಾ ಕರೆ ನೀಡಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net