VIDEO: ಕರೊನಾ ಆತಂಕ ಬೇಡ...ಎಲ್ಲರೂ ಸೇರಿ ಯುದ್ಧ ಗೆಲ್ಲೋಣ; ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಪ್ರವಚನ ಸಾರಾಮೃತದಲ್ಲಿದೆ ಸಾಂತ್ವನ...

Guruji 19 Epril 20
Published on

ಕರೊನಾ ವೈರಸ್​ ವಿರುದ್ಧದ ಯುದ್ಧದಲ್ಲಿ ನಾವು ಗೆಲ್ಲಲೇ ಬೇಕಾಗಿದೆ. ಇದೊಂದು ಭೂಲೋಕದ ವಾಸಿಗಳಿಗೆ ಬಂದೊದಗಿದ ಯುದ್ಧ. ಪ್ರಪಂಚಕ್ಕೆ ಎದುರಾದ ಆಂತರಿಕ ಯುದ್ಧ. ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂದು ಶ್ರೀ ಅವಧೂತ ದತ್ತಪೀಠದ ಪೀಠಾಧಿಪತಿಗಳಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದ್ದಾರೆ.

ಸ್ವಾಮೀಜಿಯವರು ತಮ್ಮ ಪ್ರವಚನ ಸಾರಾಮೃತದಲ್ಲಿ ಕರೊನಾ ವೈರಸ್​ ದಾಳಿಯಿಂದ ಈ ವೇಳೆಯಲ್ಲಿ ಜನಜೀವನ ಹೇಗಿರಬೇಕು ಎಂಬುದನ್ನು ಹೇಳಿದ್ದಾರೆ. ಇಂದು ಮುಂಜಾನೆ ದಿಗ್ವಿಜಯ ನ್ಯೂಸ್​ 24×7ನಲ್ಲಿ ಪ್ರಸಾರವಾದ ಪ್ರವಚನದ ಸಾರಾಂಶ ಹೀಗಿದೆ.

ಈ ಹಿಂದೆ ಅನೇಕ ಯುದ್ಧಗಳು ನಡೆದವು. ಸಾವು-ನೋವುಗಳಾದವು. ಯುದ್ಧ ಮಾಡಿದ ದೇಶಗಳೂ ಚೇತರಿಸಿಕೊಂಡವು. ಆದರೆ ಈ ಕರೊನಾ ಪರಿಸ್ಥಿತಿಯಲ್ಲಿ ಹಿಂಸಾತ್ಮಕವಾಗಿ ಪ್ರಾಣನಷ್ಟವಾಗುತ್ತಿದೆ. ಹೆದರಿಕೆ ರೀತಿಯಲ್ಲಿ ಪ್ರಾಣ ನಷ್ಟವಾಗುತ್ತಿದೆ. ಎಲ್ಲವೂ ನಮ್ಮ ಎದುರು ಇದ್ದರೂ ಅದನ್ನು ಅನುಭವಿಸಲಾಗದ ಪರಿಸ್ಥಿತಿಯಲ್ಲಿ ಜನರಿದ್ದಾರೆ.

ಲಾಕ್​ಡೌನ್ ಆದ ಮೇಲೆ ಜನರಿಗೆ ಪ್ರಪಂಚ ನೋಡುವ ಆಸೆ ಹೆಚ್ಚಾಗಿದೆ. ಬೀದಿ ನೋಡಬೇಕು ಎನ್ನಿಸುತ್ತಿದೆ. ಹಾಗಾಗಿ ಲಾಕ್​ಡೌನ್​ಗೆ ಸುಮಾರು ಜನ ಸಹಕರಿಸುತ್ತಿಲ್ಲ. ಸುಮ್ಮನೆ ಕಾರು, ಸ್ಕೂಟರ್​, ಸೈಕಲ್​ ತೆಗೆದುಕೊಂಡು ಹೋಗುವುದು, ಪೊಲೀಸರ ಜತೆ, ವೈದ್ಯರು, ನರ್ಸ್​​ಗಳ ಜತೆ ಜಗಳಕ್ಕಿಳಿಯುವುದು ಮಾಡುತ್ತಿದ್ದಾರೆ. ಬೀದಿಯ ಕಸ ಗುಡಿಸುವವರ ಬಳಿಯೂ ಜಗಳ ಮಾಡುತ್ತಾರೆ. ಆದರೆ ಹಲವು ಜನರು ಅನಿವಾರ್ಯ ಇದ್ದರೂ ಮನೆಯಿಂದ ಹೊರಗೆ ಬೀಳುತ್ತಿಲ್ಲ. ಅಂಥವರನ್ನು ನಾವು ಮೆಚ್ಚಲೇಬೇಕು.

ಆದರೆ ಕರೊನಾ ವಿರುದ್ಧ ಯುದ್ಧ ಗೆಲ್ಲಲು ಮನೆಯಲ್ಲಿ ಇರುವುದೇ ದೊಡ್ಡ ಅಸ್ತ್ರ. ತೀರ ವೈದ್ಯಕೀಯ ಸೇರಿ ಬೇರೆ ಯಾವುದಾದರೂ ಅನಿವಾರ್ಯತೆ ಆದಾಗ ಮಾತ್ರ ಮನೆಯಿಂದ ಹೊರಹೋಗಬೇಕು. ನಮ್ಮ ಅವಶ್ಯಕತೆಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಹೊಂದಾಣಿಕೆ ಹೆಚ್ಚಿಸಿಕೊಳ್ಳಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಕರೊನಾವನ್ನು ಗೆಲ್ಲೋಣ ಎಂಬ ಸಂದೇಶವನ್ನು ಇಂದಿನ ಪ್ರವಚನದಲ್ಲಿ ಗುರೂಜಿ ನೀಡಿದ್ದಾರೆ.

ಶ್ರೀಗಳು ನೀಡುವ ಪ್ರವಚನದ ಸಾರಾಮೃತವು ದಿಗ್ವಿಜಯ ನ್ಯೂಸ್ 24×7ನಲ್ಲಿ ಮೇ 3ರ ವರೆಗೆ ಪ್ರತಿದಿನ ಬೆಳಗ್ಗೆ 7.45ಕ್ಕೆ ಶ್ರೀಗುರುವಾಣಿ ಹೆಸರಿನಲ್ಲಿ ಪ್ರಸಾರವಾಗಲಿದೆ. ಲೋಕಕಲ್ಯಾಣಕ್ಕಾಗಿ ಸದಾ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳುವ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಈ ನೂತನ ಕಾರ್ಯಕ್ರಮ ಕರೊನಾದಿಂದ ಆತಂಕಕ್ಕೆ ಒಳಗಾದವರಿಗೆ ಸಮಾಧಾನ ನೀಡುವುದರಲ್ಲಿ ಸಂದೇಹವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net