ಭಿನ್ನಾಭಿಪ್ರಾಯ ಮರೆತು ಸಂಘಟನೆಗೆ ಶ್ರಮಿಸಿ

hhr lad
ಕಾರ್ಮಿಕ ಸಚಿವ ಸಂತೋಷ್ ಲಾಡ್‌ಗೆ ಶಿವಮೊಗ್ಗ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಸಂಘದಿಂದ ಗೌರವಿಸಲಾಯಿತು. ಸಚಿನ್ ಸಿಂದ್ಯಾ, ಯಶವಂತ್ ರಾವ್ ಘೋರ್ಪಡೆ, ಬಸವರಾಜ್ ಇತರರಿದ್ದರು.
Published on

ಹೊಳೆಹೊನ್ನೂರು: ರಾಜ್ಯದಲ್ಲಿರುವ ಕನ್ನಡಿಗ ಮರಾಠಿಗರು ಕನ್ನಡ ಭಾಷಾ ಪ್ರೇಮಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಭದ್ರಾವತಿಯಲ್ಲಿ ಮಂಗಳವಾರ ಛತ್ರಪತಿ ಸಹಕಾರ ಸಂಘದಲ್ಲಿ ಸಮಾಜದ ಸಭೆ ಬಳಿಕ ಮರಾಠ ಮುಖಂಡರ ಭೇಟಿ ವೇಳೆ ಮಾತನಾಡಿದರು.

ಸಮುದಾಯದವರು ಗುಡಿ ಗೋಪುರಗಳಿಗೆ ಅನುದಾನ ಕೇಳುವ ಬದಲಿಗೆ ಸಮಾಜದ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿ. ಮರಾಠಿಗರು ಬಾಡೂಟ ಸವಿದು ಸುಮ್ಮನಾಗಬಾರದು. ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣ ಮಾಡುವತ್ತ ಗಮನ ಹರಿಸಬೇಕು. ಭಿನ್ನಾಭಿಪ್ರಾಯ ಬದಿಗಿಟ್ಟು ಸಮಾಜ ಮುಖಂಡರು ಒಂದಾದರೆ ಮಾತ್ರ ಉನ್ನತಿ ಸಾಧ್ಯ ಎಂದರು.

ಸಮಾಜದ ಪೂರ್ವಜರ ಇತಿಹಾಸವನ್ನು ಸರಿಯಾಗಿ ತಿಳಿಯಬೇಕಿದೆ. ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿ ಎಂದು ಬಿಂಬಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆ. ಇನ್ನಾದರು ಸಮಾಜದವರು ಎಚ್ಚೆತ್ತುಕೊಳ್ಳಬೇಕು. ನಮ್ಮವರಿಗೆ ಬುದ್ಧಿ ಬರುವಷ್ಟರಲ್ಲಿ ಪೂರ್ವಿಕರ ಇತಿಹಾಸವೇ ತಲೆಕೆಳಗಾಗಿರುತ್ತದೆ ಎಂದು ಎಚ್ಚರಿಸಿದರು.

ಚುನಾವಣೆಯಲ್ಲಿ ಯಾರಿಗಾದರೂ ಮತ ಚಲಾಯಿಸಿ. ಆದರೆ ಸಮಾಜದ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬೇಡಿ. ಯಾವುದೇ ಸರ್ಕಾರ ಬಂದರೂ ಸಮಾಜದ ಕೆಲಸಗಳಿಗೆ ಉತ್ಸುಕರಾಗಿರಿ. ಅಂದುಕೊಂಡಿದ್ದನ್ನು ಸಾಧಿಸಲು ಮರಳಿ ಯತ್ನ ಮಾಡುವುದನ್ನು ಕೈಬಿಡಬಾರದು. ಜಿಲ್ಲೆಯಲ್ಲಿ ಮರಾಠ ಸಮುದಾಯದ ಜನಸಂಖ್ಯೆ ಉತ್ತಮವಾಗಿದೆ. ಸಮಾಜದ ಕೆಲಸ ಕಾರ್ಯಗಳಿಗಾಗಿ ಪ್ರತಿ ಎರಡು ತಿಂಗಳಿಗೊಮ್ಮೆ ಭೇಟಿ ನೀಡಲಾಗುವುದು ಎಂದರು.

ಜಿಲ್ಲಾ ಕ್ಷತ್ರಿಯ ಮರಾಠ ಸಂಘದ ಅಧ್ಯಕ್ಷ ಸಚಿನ್ ಸಿಂದ್ಯಾ, ತಾಲೂಕು ಅಧ್ಯಕ್ಷ ಲೋಕೇಶ್ ರಾವ್, ಕವಿತಾ ಸಿಂದ್ಯಾ, ಯಶೋದಾ ಬಾಯಿ, ಆರ್.ನಾಗರಾಜ್ ರಾವ್, ಯಶವಂತ ರಾವ್ ಘೋರ್ಪಡೆ, ಗೀತಾ ಸತೀಶ್, ಕವಿತಾ ತೊರತ್, ಪ್ರವಿಣ್‌ಕುಮಾರ್, ಮಲ್ಲೇಶ್, ಯು.ಬಸವರಾಜ್, ಕಿರಣ್ ಮೋರೆ, ರಾಮು, ಮಂಜುನಾಥ್ ರಾವ್, ಸಂಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net