

Pimple free face: ಇಂದಿನ ದಿನಗಳಲ್ಲಿ ಮೊಡವೆಗಳಿಂದ ಹಲವಾರು ಜನರು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಹಾಗೆಯೇ ಈ ಸಮಸ್ಯೆ ಯೌವನದಲ್ಲಿ ಮಾತ್ರ ಬರುತ್ತದೆ ಎಂದು ಭಾವಿಸಿರುತ್ತಾರೆ. ಹಾಗಾಗಿ ಮುಖವನ್ನು ಕಾಂತಿಯುತವಾಗಿ ಕಾಣುವಂತೆ ಅನೇಕರು ಹಲವಾರು ಕ್ರೀಮ್ಗಳನ್ನು ಬಳಸುತ್ತಾರೆ. ಆದರೆ, ಇದು ಯಾವುದು ಕೂಡ ಮೊಡವೆಯನ್ನು ಕಡಿಮೆ ಮಾಡಲು ಸಹಕರಿಸುವುದಿಲ್ಲ. ಅದರಿಂದ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ ಇವು ನಿಮ್ಮ ಮೊಡವೆಗಳನ್ನು ಕಡಿಮೆ ಮಾಡಲು ಸಹಕರಿಸುತ್ತವೆ.
ನಾವು ಸೇವಿಸುವಂತಹ ಆಹಾರದಲ್ಲಿ ಹೆಚ್ಚು ಸಕ್ಕರೆ, ಹುರಿದ ಆಹಾರಗಳು, ಮಸಾಲೆಯುಕ್ತ ಪದಾರ್ಥಗಳು ಮತ್ತು ಹೆಚ್ಚಿನ ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ಇವು ನಮ್ಮ ಚರ್ಮದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಇದರಿಂದ ಮೊಡವೆಗಳಾಲು ಪ್ರಾರಂಭಿಸುತ್ತವೆ. ಹಾಗಾಗಿ ಆದಷ್ಟು ಹಣ್ಣುಗಳು, ತರಕಾರಿ, ದೇಹಕ್ಕೆ ಬೇಕಾದ ಸಾಕಷ್ಟು ನೀರನ್ನು ಕುಡಿಯಿರಿ. ಇವು ನಿಮ್ಮ ಚರ್ಮವನ್ನು ಸುರಕ್ಷಿತದಿಂದ ಕಾಪಾಡಲು ಸಹಾಯ ಮಾಡುತ್ತದೆ.
ದೇಹಕ್ಕೆ ಸರಿಯಾದ ನಿದ್ರೆಯನ್ನು ಒದಗಿಸದಿದ್ದರೆ ಚರ್ಮಕ್ಕೆ ವಿಶ್ರಾಂತಿ ಸಿಗದೆ, ಮೊಡವೆಗಳು ಹೆಚ್ಚಾಗಿಸುತ್ತವೆ. ಹಾಗಾಗಿ ಪ್ರತಿದಿನ 7-8 ಗಂಟೆಗಳ ಆಳವಾದ ನಿದ್ರೆಯನ್ನು ಮಾಡುವುದರಿಂದ ದೇಹವು ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ. ಚರ್ಮವನ್ನು ಪುನಃ ಯೌವನಗೊಳಿಸುವಂತೆ ಮಾಡುವುದರ ಜೊತೆಗೆ ಮೊಡವೆಗಳನ್ನು ತೆಗೆದುಹಾಕುವಂತೆ ಮಾಡುತ್ತದೆ. ಆದಷ್ಟು ರಾತ್ರಿಯ ಸಮಯದಲ್ಲಿ ಮೊಬೈಲ್, ಟಿವಿ ನೋಡುವುದನ್ನು ಕಡಿಮೆ ಮಾಡಿ. ಇಲ್ಲದಿದ್ದರೆ, ಇವು ನಿದ್ರೆಯ ಹಾರ್ಮೋನ್ಗಳಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ.
ಪ್ರತಿನಿತ್ಯ ನಿಮ್ಮ ಕೈಗಳನ್ನು ಉನ್ನತ ಸಾಬೂನುಗಳಿಂದ ತೊಳೆಯಿರಿ. ಏಕೆಂದರೆ ನೀವೇನಾದರೂ, ಅಶುಚಿತ್ವ ಕೈಗಳಿಂದ ನಿಮ್ಮ ಮುಖವನ್ನು ಮುಟ್ಟಿಕೊಂಡರೆ ಇವು ಚರ್ಮದಲ್ಲಿ ಮೊಡವೆಗಳಾಗುವಂತೆ ಮಾಡುತ್ತದೆ. ಅದಲ್ಲದೇ ಪ್ರತಿ ಎರಡು - ಮೂರು ದಿನಗಳಿಗೊಮ್ಮೆ ದಿಂಬಿನ ಕವರ್ ಹಾಗೂ ಟವೆಲ್ಗಳನ್ನು ಬದಲಾಯಿಸಿ ಇದು ಚರ್ಮಕ್ಕೆ ಆಗುವ ತೊಂದರೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಸೂರ್ಯನ ಬೆಳಕು ಚರ್ಮಕ್ಕೆ ಹಾನಿಕರವಾಗಿದೆ. ಯಾರಾದರು ಚರ್ಮದಲ್ಲಿ ಮೊಡವೆಗಳನ್ನು ಹೊಂದಿದ್ದರೆ ಅಂತವರು ಸೂರ್ಯನ ಬೆಳಕಿಗೆ ಹೋದಾಗ ಅದರ ಗಾಢವಾದ ಕಿರಣಗಳು ಚರ್ಮದ ಮೇಲೆ ಬಿದ್ದು, ಮೊಡವೆಗಳು ಕಲೆಯಾಗಿ ಉಳಿದುಕೊಳ್ಳುವಂತೆ ಮಾಡುತ್ತದೆ. ಹಾಗಾಗಿ ಹೊರಗಡೆ ಹೋಗುವಾಗ ಎಣ್ಣೆ ರಹಿತ ಸನ್ಸ್ಕ್ರೀನ್ ಗಳನ್ನು ಹಚ್ಚಿರಿ. ಇವು ಆದಷ್ಟು ಚರ್ಮದ ಮೇಲೆ ಪ್ರಭಾವ ಬೀರುವ ಕಿರಣಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ನಡೆಯುವುದು, ಓಡುವುದು, ಯೋಗ, ಜಿಮ್ ನಂತಹ ಸಣ್ಣ ವ್ಯಾಯಾಮಗಳನ್ನು ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ವ್ಯಾಯಾಮ ಮಾಡಿ ಅದರಿಂದ ಬರುವ ಬೆವರು ದೇಹದಲ್ಲಿರುವ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿದಿನ 30 ನಿಮಷಗಳ ವ್ಯಾಯಾಮ ಮಾಡುವುದರಿಂದ ಇವು ನಿಮ್ಮ ಚರ್ಮದಲ್ಲಾಗುವ ಮೊಡವೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. (ಏಜೆನ್ಸೀಸ್)