ಸಮಾಜ ಸುಧಾರಕರ ಮಾರ್ಗ ಅನುಸರಿಸಿ

kaivara
ಸಾಗರದ ತಹಸೀಲ್ದಾರ್ ಕಚೇರಿಯಲ್ಲಿ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ನಗರ ಸಭೆ ಉಪಾಧ್ಯಕ್ಷೆ ಸವಿತಾ ವಾಸು, ಮಂಜುಳಾ ಭಜಂತ್ರಿ, ವಿ.ಟಿ.ಸ್ವಾಮಿ, ಆರ್.ಸತೀಶ್ ಇತರರಿದ್ದರು.
Published on

ಸಾಗರ: ಶರಣರು, ದಾರ್ಶನಿಕರು, ಸಂತರು ಸಮಾಜ ಸುಧಾರಣೆಗೆ ಹಾಕಿಕೊಟ್ಟಿರುವ ಮಾರ್ಗವನ್ನು ನಾವು ಪರಿಪಾಲಿಸಬೇಕು ಎಂದು ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು ಹೇಳಿದರು

ಸಾಗರದ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಯೋಗಿ ನಾರೇಯಣ ಯತೀಂದ್ರ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜ ಸುಧಾರಣೆಗೆ ಪ್ರತಿಯೊಬ್ಬರೂ ನೀಡಿದ ಕೊಡುಗೆ ಅಮೂಲ್ಯವಾದುದು. ಮಹನೀಯರು ತಮ್ಮದೇ ಮಾರ್ಗದಲ್ಲಿ ಸತ್ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ತತ್ವಾಮೃತದ ಮೂಲಕ ಪ್ರೇರಣೆಯಾಗಿದ್ದಾರೆ. ಕೈವಾರ ತಾತಯ್ಯ ಅವರ ಬದುಕು ಎಲ್ಲರಿಗೂ ಆದರ್ಶ ಎಂದು ಹೇಳಿದರು.

ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿ, ಕಾಲಜ್ಞಾವನ್ನು ಬಲ್ಲವರಾಗಿದ್ದ ಕೈವಾರ ತಾತಯ್ಯ ಅವರು ಮನುಜ ಕುಲದ ಶ್ರೇಯಸ್ಸಿಗಾಗಿ ಶ್ರಮಿಸಿದವರು. ಮಾನವ ಕುಲದ ಏಳಿಗೆಗೆ ತಮ್ಮ ಇಡೀ ಬದುಕನ್ನು ಮುಡಿಪಾಗಿಟ್ಟಿದ್ದರು. ಅವರ ಸಂದೇಶಗಳು ಸಾರ್ವಕಾಲಿಕ ಅನುಕರಣೀಯ ಎಂದರು.

ಉಪ ತಹಸೀಲ್ದಾರ್ ಮಂಜುಳಾ ಭಜಂತ್ರಿ, ತಾಲೂಕು ಬಲಿಜ ಸಮಾಜದ ಅಧ್ಯಕ್ಷ ಆರ್.ಸತೀಶ್, ಶಾಂತಮ್ಮ, ಮೋಹನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net