Fact Check: ಎಮ್ಮೆ ಹೊಟ್ಟೆಯಲ್ಲಿ ಹಸುವಿನ ಕರು ಹುಟ್ಟಿದ್ಯಾ? ಈ ಅಚ್ಚರಿ ಘಟನೆಯ ಹಿಂದಿನ ಸತ್ಯವೇನು?

ಯಾದಗಿರಿಯಲ್ಲಿ ಕಪ್ಪು ಎಮ್ಮೆಗೆ ಬಿಳಿ ಬಣ್ಣದ ಕರು ಜನಿಸಿದೆ ಎಂಬ ಸುದ್ದಿ ವೈರಲ್ ಆಗಿದೆ. ಎಮ್ಮೆ ಹೊಟ್ಟೆಯಲ್ಲಿ ಹಸುವಿನ ಕರು ಹುಟ್ಟಿದೆ ಎಂಬುದರ ಹಿಂದಿನ ವೈಜ್ಞಾನಿಕ ಕಾರಣವೇನು?
White calf for buffalo
ಕಪ್ಪು ಎಮ್ಮೆಗೆ ಬಿಳಿ ಬಣ್ಣದ ಕರು ಜನಿಸಿದೆ ಎಂಬ ಸುದ್ದಿ ವೈರಲ್
Published on: 

White calf for buffalo: ಕಪ್ಪು ಎಮ್ಮೆಯೊಂದು ಬಿಳಿ ಬಣ್ಣದ ಕರು ಹಾಕಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಮ್ಮೆ ಹೊಟ್ಟೆಯಲ್ಲಿ ಹಸುವಿನ ಕರು ಹುಟ್ಟಿದೆ ಎಂದು ಕೆಲವರು ಹೇಳುತ್ತಿದ್ದು, ಈ ಅಪರೂಪದ ಘಟನೆ ಕಂಡು ಗ್ರಾಮಸ್ಥರು ಅಚ್ಚರಿಪಟ್ಟಿದ್ದಾರೆ. ಕರುವಿನ ಬಣ್ಣ ವಿಭಿನ್ನವಾಗಿರುವುದೇ ಈ ಚರ್ಚೆಗೆ ಕಾರಣವಾಗಿದೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ಘಟನೆ ನಡೆದಿದೆ. ಗ್ರಾಮದ ರೈತ ಪರಶುರಾಮ ಅವರಿಗೆ ಸೇರಿದ ಕಪ್ಪು ಎಮ್ಮೆ ಬಿಳಿ ಬಣ್ಣದ ಕರುಗೆ ಜನ್ಮ ನೀಡಿದೆ. ಹೊಲದಲ್ಲಿ ಎಮ್ಮೆ ಮತ್ತು ಹೋರಿಯನ್ನು ಒಂದೇ ಕಡೆ ಕಟ್ಟುತ್ತಿದ್ದ ಕಾರಣ, ಹೋರಿಯ ಸಂಪರ್ಕದಿಂದಲೇ ಈ ರೀತಿ ಆಗಿರಬಹುದು ಎಂದು ರೈತರು ಊಹಿಸಿದ್ದಾರೆ. ಅಪರೂಪದ ಕರುವನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಪರಶುರಾಮ ಅವರ ಮನೆಗೆ ಬರುತ್ತಿದ್ದಾರೆ.

ಎಮ್ಮೆ ಹೊಟ್ಟೆಯಲ್ಲಿ ಹಸು ಹುಟ್ಟೋಕೆ ಸಾಧ್ಯನಾ?

ಹಸು ಮತ್ತು ಎಮ್ಮೆ ಬೇರೆ ಬೇರೆ ಪ್ರಾಣಿ ಪ್ರಭೇದಗಳಿಗೆ ಸೇರಿವೆ. ಹೀಗಾಗಿ, ಎಮ್ಮೆಗೆ ಹಸುವಿನ ಕರು ಜನಿಸಿದೆ ಎಂಬ ಹೇಳಿಕೆಗೆ ವೈಜ್ಞಾನಿಕ ಆಧಾರವಿಲ್ಲ. ಕರು ಬಿಳಿ ಅಥವಾ ಕಂದು ಬಣ್ಣದಲ್ಲಿದೆ ಎಂಬುದಷ್ಟೇ ಅದು ಹಸುವಿನ ಕರು ಎಂಬುದಕ್ಕೆ ಸಾಕ್ಷಿಯಲ್ಲ.

ಕರುವಿನ ಬಣ್ಣ ಬದಲಾಗಲು ಕಾರಣವೇನು?

ಪ್ರಾಣಿಗಳ ಚರ್ಮದ ಬಣ್ಣ ಅವುಗಳಲ್ಲಿರುವ ಜೀನ್‌ಗಳು ಮತ್ತು ವರ್ಣದ್ರವ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಜೀನ್‌ಗಳಲ್ಲಿನ ವ್ಯತ್ಯಾಸ ಅಥವಾ ವರ್ಣದ್ರವ್ಯದ ಕೊರತೆಯಿಂದಾಗಿ ಸಾಮಾನ್ಯವಾಗಿ ಕಾಣುವ ಬಣ್ಣಕ್ಕಿಂತ ಭಿನ್ನವಾದ ಬಣ್ಣದಲ್ಲಿ ಕರು ಜನಿಸಬಹುದು.

ಇದನ್ನೂ ಓದಿ: AP Polls: ನಾಮಪತ್ರ ಸಲ್ಲಿಕೆ ಗಡುವು ವಿಸ್ತರಣೆಗೆ ಸೂಚನೆ! ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ

ಹೀಗಾಗಿ, ವೈರಲ್ ಆಗುತ್ತಿರುವ ಸುದ್ದಿಯಲ್ಲಿ ಹೇಳಿರುವಂತೆ ಎಮ್ಮೆಯ ಹೊಟ್ಟೆಯಲ್ಲಿ ಹಸುವಿನ ಕರು ಹುಟ್ಟಿದೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಕರುವಿನ ಬಣ್ಣ ವಿಭಿನ್ನವಾಗಿರುವುದರಿಂದಲೇ ಅದು ಬೇರೆ ಪ್ರಾಣಿಯ ಕರು ಎಂದು ಹೇಳುವುದು ಸರಿಯಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net