ಬೆಂಗಳೂರು: (delivery-focused kitchens) ವಾಸುದೇವ್ ಅಡಿಗಾಸ್ ಸ್ವಾಧೀನಪಡಿಸಿಕೊಂಡ ನಂತರ ಕೌಝಿನಾ ಫುಡ್ ಟೆಕ್, ರಾಜಧಾನಿ ಬೆಂಗಳೂರಿನಾದ್ಯಂತ 55 ಡೆಲಿವರಿ ಕೇಂದ್ರಿತ ಕಿಚನ್ಗಳನ್ನು ವಿಸ್ತರಿಸಿದೆ. ವಾಸುದೇವ್ ಅಡಿಗಾಸ್ ಅನ್ನು ವಿಶ್ವಾಸಾರ್ಹ ದಕ್ಷಿಣ ಭಾರತೀಯ ಹೆಸರನ್ನಾಗಿ ಮಾಡಿರುವ ರುಚಿ ಮತ್ತು ಪರಿಚಿತತೆ ಉಳಿಸಿಕೊಂಡಿದೆ.
ಎಲ್ಲ 55 ಕಿಚನ್ಗಳು ಕೌಝಿನಾದ ಫ್ರಾಂಚೈಸಿ ನೆಟ್ವರ್ಕ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಡೆಲಿವರಿ-ಕೇಂದ್ರಿತವಾಗಿವೆ. ಮುಂದಿನ ಹಂತದ ಬೆಳವಣಿಗೆಗಾಗಿ, ಕೌಝಿನಾ ಬೆಂಗಳೂರಿನ ಸ್ಥಾಪಿತ ರೆಸ್ಟೋರೆಂಟ್ಗಳು ಮತ್ತು ಕಮರ್ಷಿಯಲ್ ಕಿಚನ್ ಆಪರೇಟರ್ಗಳನ್ನು ತಮ್ಮ ಅಸ್ತಿತ್ವದಲ್ಲಿರುವ ಪರವಾನಗಿ ಹೊಂದಿರುವ ಕಿಚನ್ಗಳಲ್ಲಿ ವಾಸುದೇವ್ ಅಡಿಗಾಸ್ನ ಮೆನು ಮತ್ತು ಬ್ರ್ಯಾಂಡ್ ಅನ್ನು ಸೇರಿಸಲು ಆಹ್ವಾನಿಸುತ್ತಿದೆ.
ನಗರದ ಇನ್ನಷ್ಟು ಬಲಿಷ್ಠ ರೆಸ್ಟೋರೆಂಟ್ ಆಪರೇಟರ್ಗಳು ನಮ್ಮೊಂದಿಗೆ ಬೆಳೆಯಬೇಕೆಂದು ನಾವು ಬಯಸುತ್ತೇವೆ ಎಂದು ಕೌಝಿನಾ ಫುಡ್ ಟೆಕ್ನ ಶ್ರೀಕಾಂತ್ ಹೇಳಿದರು.
ರೆಸ್ಟೋರೆಂಟ್ಗಳು ಮತ್ತು ಪರವಾನಗಿ ಹೊಂದಿರುವ ಕಮರ್ಷಿಯಲ್ ಕಚನ್ಗಳಿಗಾಗಿ ರೂಪಿಸಲಾಗಿದೆ. ಇವುಗಳು ಉತ್ತಮ ಆಹಾರ ಗುಣಮಟ್ಟ ಮತ್ತು ಕಾರ್ಯಾಚರಣಾ ಮಾನದಂಡಗಳನ್ನು ಹೊಂದಿರಬೇಕು. ಆಯ್ಕೆಯಾದ ಪಾಲುದಾರರು ತಮ್ಮ ಅಸ್ತಿತ್ವದಲ್ಲಿರುವ ಕಿಚನ್ ಸಾಮರ್ಥ್ಯ ಬಳಸಿಕೊಂಡು ಹೊಸ ಪಾಕಪದ್ಧತಿ ಮತ್ತು ಆದಾಯದ ಮಾರ್ಗವನ್ನು ಸೇರಿಸಬಹುದು. ವಾಸುದೇವ್ ಅಡಿಗಾಸ್ನ ಆಹಾರ ರುಚಿಗೆ ಪ್ರಸಿದ್ಧವಾಗಿದೆ. ಗ್ರಾಹಕರಿಗೆ ಗುಣಮಟ್ಟದ ಆಹಾರ ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎನ್ನುತ್ತಾರೆ ಕೌಝಿನಾ ಫುಡ್ ಟೆಕ್ನ ಗೀತಿಕಾ ಆನಂದ್ ಗುಪ್ತಾ,