

ಶಿಕಾರಿಪುರ: ಜೀವ ಉಳಿಸುವ ಶಕ್ತಿ ಭಗವಂತನಿಗೆ ಬಿಟ್ಟರೆ ಸಾಂದರ್ಭಿಕವಾಗಿ ವೈದ್ಯರಿಗಿದೆ. ಹೀಗಾಗಿ ವೈದ್ಯೋ ನಾರಾಯಣೋ ಹರಿ ಎನ್ನುತ್ತಾರೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಶಿವಾನಂದ್ ಹೇಳಿದರು.
ನಗರದ ಶಿವಗಿರಿ ಕಲ್ಯಾಣ ಮಂದಿರದಲ್ಲಿ ಬಾಪೂಜಿ ಇನ್ಸ್ಟಿಟ್ಯೂಟ್‌ನ ಅಂತಿಮ ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಿಮ್ಮ ಕಾರ್ಯ ಯಾರೂ ಮಾಡಲಾರದ ಸೇವೆ. ಅದು ನೆಮ್ಮದಿ, ಸಂತಸ ತಂದು ಕೊಡುತ್ತದೆ. ಸೇವೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ರೋಗಿಗಳು ಚಿಕಿತ್ಸೆಗಿಂತ ನಾವು ಕೊಡುವ ವಿಶ್ವಾಸ ಮತ್ತು ಧೈರ್ಯದಿಂದಲೇ ಬೇಗ ಗುಣಮುಖರಾಗುತ್ತಾರೆ ಎಂದರು.
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಉಮೇಶ್ ಮಾತನಾಡಿ, ವೈದ್ಯಕೀಯ ವೃತ್ತಿಗೆ ಗೌರವಯುತ ಸ್ಥಾನವಿದೆ. ನಿಮ್ಮ ಸೇವೆ ಅನನ್ಯ. ಶಿಕಾರಿಪುರದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಪ್ಯಾರಾಮೆಡಿಕಲ್ ಕೋರ್ಸ್ ಪ್ರಾರಂಭ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ರಘು, ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪಿ.ಆರ್.ಪವಿತ್ರಾ, ಸಾಹಿತ್ಯ ಪರಿಷತ್‌ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹುಚ್ಚರಾಯಪ್ಪ, ಬಾಪೂಜಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಬಿ.ಪಾಪಯ್ಯ, ಪ್ರಾಚಾರ್ಯ ಮುಸ್ತ್ಾ, ಜಿ.ರತ್ನಮ್ಮ, ಪಲ್ಲವಿ ಇತರರಿದ್ದರು.