Psychology: ರೂಪ ನೋಡಿ ವ್ಯಕ್ತಿತ್ವ ಅಳೆಯುತ್ತೀರಾ? ನಿಮ್ಮ ಮನಸ್ಸಿನ ಮೋಸದ ಆಟವೇ ಹ್ಯಾಲೋ ಎಫೆಕ್ಟ್!

ಹೊರನೋಟ ನೋಡಿ ವ್ಯಕ್ತಿಯ ಗುಣ ನಿರ್ಧರಿಸೋದು ಯಾಕೆ? ಹಾಲೋ ಎಫೆಕ್ಟ್‌, ಮೆದುಳಿನ ತ್ವರಿತ ನಿರ್ಧಾರ ಮತ್ತು ಸೋಷಿಯಲ್ ಮೀಡಿಯಾ ಪ್ರಭಾವದ ಹಿಂದಿನ ಮನಃಶಾಸ್ತ್ರ ತಿಳಿಯಿರಿ.
Halo Effect Psychology
ಸೌಂದರ್ಯ ನೋಡಿ ವ್ಯಕ್ತಿತ್ವ ಅಳೆಯುವ ಮನಸ್ಥಿತಿಗೆ ಹೆಸರೇನು ಗೊತ್ತಾ?
Published on: 

Halo Effect Psychology: ‘ಡೋಂಟ್ ಜಡ್ಜ್ ಎ ಬುಕ್ ಬೈ ಇಟ್ಸ್ ಕವರ್’ ಎನ್ನುವ ಮಾತನ್ನು ಎಲ್ಲರೂ ಕೇಳಿರುತ್ತೇವೆ.. ಅಂದ್ರೆ, ಹೊರನೋಟ ನೋಡಿ ಯಾರ ಬಗ್ಗೆಯೂ ತೀರ್ಮಾನಕ್ಕೆ ಬರಬಾರದು ಅಂತ ಅರ್ಥ. ಆದ್ರೆ ನಿಜ ಜೀವನದಲ್ಲಿ ಯಾರನ್ನಾದ್ರೂ ಮೊದಲ ಬಾರಿ ನೋಡಿದಾಗ ಅವರ ಲುಕ್‌, ಡ್ರೆಸ್‌ ಅಥವಾ ಮಾತಿನ ಶೈಲಿ ನೋಡಿ ಅವರ ಬಗ್ಗೆ ಒಂದು ಅಭಿಪ್ರಾಯಕ್ಕೆ ಬಂದುಬಿಡ್ತೀವಿ.

ಇನ್ನು, ಅವರ ಗುಣ, ಬುದ್ಧಿವಂತಿಕೆ ಏನೂ ಗೊತ್ತಿಲ್ಲದಿದ್ರೂ ಹೊರನೋಟಕ್ಕೆ ಮಾರುಹೋಗ್ತೀವಿ. ಇದಕ್ಕೆ ನಮ್ಮ ಮೆದುಳು ಕೆಲಸ ಮಾಡೋ ರೀತಿ ಮತ್ತು ಮನಃಶಾಸ್ತ್ರದ ಕೆಲವು ಕಾರಣಗಳಿವೆ.

ಹೊರನೋಟಕ್ಕೆ ಯಾಕಿಷ್ಟು ಬೆಲೆ?

ಮೊದಲ ನೋಟದ ಪ್ರಭಾವ: ಒಬ್ಬರನ್ನ ಮೊದಲ ಬಾರಿ ನೋಡಿದಾಗ ಅವರ ಮುಖಭಾವ, ಉಡುಗೆ ಮತ್ತು ದೇಹಭಾಷೆ ಗಮನಿಸಿ ಮೆದುಳು ತಕ್ಷಣವೇ ಅವರ ಬಗ್ಗೆ ಒಂದು ಅಭಿಪ್ರಾಯ ರೂಪಿಸಿಕೊಳ್ಳುತ್ತೆ. ಆದ್ರೆ ಈ ಮೊದಲ ಅಭಿಪ್ರಾಯ ಯಾವಾಗಲೂ ಸರಿಯಾಗಿರುತ್ತೆ ಅಂತ ಹೇಳಕ್ಕಾಗಲ್ಲ.

ಹಾಲೋ ಎಫೆಕ್ಟ್‌: ಮನಃಶಾಸ್ತ್ರದಲ್ಲಿ ಇದನ್ನ ‘ಹಾಲೋ ಎಫೆಕ್ಟ್‌’ ಅಂತಾರೆ. ಅಂದ್ರೆ, ಒಬ್ಬರು ನೋಡೋಕೆ ಆಕರ್ಷಕವಾಗಿದ್ರೆ ಅವರು ಬುದ್ಧಿವಂತರು, ಪ್ರತಿಭಾವಂತರು ಅಥವಾ ಒಳ್ಳೆಯ ಗುಣದವರು ಅಂತ ಭಾವಿಸುವ ಸಾಧ್ಯತೆ ಇರುತ್ತೆ. ಆದ್ರೆ ಹೊರಗಿನ ಸೌಂದರ್ಯಕ್ಕೂ ಒಳಗಿನ ಗುಣಕ್ಕೂ ನೇರ ಸಂಬಂಧ ಇರಲ್ಲ.

ಮೆದುಳಿನ ಶಾರ್ಟ್‌ಕಟ್‌: ಒಬ್ಬರನ್ನ ಸರಿಯಾಗಿ ಅರ್ಥಮಾಡಿಕೊಳ್ಳೋಕೆ ಸಮಯ ಬೇಕು. ಅದಕ್ಕಿಂತ ಅವರ ಲುಕ್‌ ನೋಡಿ ಬೇಗ ಒಂದು ತೀರ್ಮಾನಕ್ಕೆ ಬರೋದು ಸುಲಭ. ಹೀಗಾಗಿ ಮೆದುಳು ಕೆಲವೊಮ್ಮೆ ಪೂರ್ಣ ಮಾಹಿತಿ ಇಲ್ಲದಿದ್ದರೂ ತಕ್ಷಣ ನಿರ್ಧಾರ ಮಾಡಿಬಿಡುತ್ತೆ.

ಸೋಷಿಯಲ್ ಮೀಡಿಯಾ ಪ್ರಭಾವ: ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ನಲ್ಲಿ ಆಕರ್ಷಕ ಫೋಟೋಗಳು, ಫ್ಯಾಷನ್‌ ಮತ್ತು ಪರಿಪೂರ್ಣ ಸೌಂದರ್ಯದ ಚಿತ್ರಣಗಳೇ ಹೆಚ್ಚಾಗಿ ಕಾಣಿಸುತ್ತವೆ. ಇದರಿಂದ ಕೆಲವರು ಹೊರನೋಟಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡೋಕೆ ಶುರು ಮಾಡಬಹುದು.

Judging personality based on outward appearance
ಹೊರನೋಟದಿಂದ ವ್ಯಕ್ತಿತ್ವ ಅಳೆಯುವುದು

ಡ್ರೆಸ್‌, ಸ್ವಚ್ಛತೆ ಮುಖ್ಯವೇ? ಖಂಡಿತಾ, ಅಚ್ಚುಕಟ್ಟಾದ ಉಡುಗೆ, ಸ್ವಚ್ಛತೆ ಮತ್ತು ಆತ್ಮವಿಶ್ವಾಸದ ದೇಹಭಾಷೆ ಮೊದಲ ಅಭಿಪ್ರಾಯದ ಮೇಲೆ ಪರಿಣಾಮ ಬೀರುತ್ತವೆ. ಆದ್ರೆ ಇವನ್ನಷ್ಟೇ ನೋಡಿ ಒಬ್ಬರ ಸಂಪೂರ್ಣ ವ್ಯಕ್ತಿತ್ವವನ್ನ ಅಳೆಯೋಕೆ ಆಗಲ್ಲ.

ಹೊರನೋಟವೇ ಎಲ್ಲವೂ ಅಲ್ಲ

ನೋಡೋಕೆ ಚೆನ್ನಾಗಿರೋ ಪ್ರತಿಯೊಬ್ಬರೂ ಒಳ್ಳೆಯ ಗುಣ ಹೊಂದಿರುತ್ತಾರೆ ಅಂತೇನಿಲ್ಲ. ಹಾಗೆಯೇ ಸರಳವಾಗಿ ಕಾಣುವ ವ್ಯಕ್ತಿಯಲ್ಲೂ ಅಪಾರ ಜ್ಞಾನ, ಪ್ರತಿಭೆ ಮತ್ತು ಮಾನವೀಯತೆ ಇರಬಹುದು.

ಇದನ್ನೂ ಓದಿ: ಹುಟ್ಟಿದ ತಕ್ಷಣವೇ ಫುಲ್ ಕೂಲ್! ಈಜಿಪ್ಟ್ ಮಗುವಿನ ಸ್ಟೈಲ್‌ಗೆ ಫಿದಾ ಆದ ನೆಟ್ಟಿಗರು | Relaxed Newborn Baby

ಹಾಗಾಗಿ, ಯಾರನ್ನಾದ್ರೂ ಮೊದಲ ನೋಟದಲ್ಲೇ ಜಡ್ಜ್‌ ಮಾಡೋ ಬದಲು ಅವರ ಆಲೋಚನೆ, ನಡವಳಿಕೆ ಮತ್ತು ಇತರರ ಜತೆ ನಡೆದುಕೊಳ್ಳುವ ರೀತಿಯನ್ನ ಗಮನಿಸಬೇಕು. ಹೊರನೋಟ ಪರಿಚಯಕ್ಕೆ ಆರಂಭವಾಗಬಹುದು; ಆದ್ರೆ ವ್ಯಕ್ತಿತ್ವ ಗೊತ್ತಾಗೋದು ಅವರ ಗುಣಗಳಿಂದ ಮಾತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net