

ಚಿಕ್ಕೋಡಿ: ಬುದ್ಧಿಮಾಂದ್ಯ ಮಗುವಿನಲ್ಲಿರುವ ಕ್ರೀಡೋತ್ಸಾಹ ಗುರುತಿಸಿ ಅವಕಾಶ ಕೊಡುವುದೇ ವಿಶೇಷ ಒಲಿಂಪಿಕ್ಸ್ ಭಾರತ ಸಂಸ್ಥೆಯ ಪ್ರಮುಖ ಧ್ಯೇಯ ಎಂದು ಭಾರತೀಯ ವಿಶೇಷ ಒಲಿಂಪಿಕ್ಸ್‌ನ ರಾಜ್ಯ ಅಧ್ಯಕ್ಷೆ ಶಶಿಕಲಾ ಜೊಲ್ಲೆ ಹೇಳಿದರು.
ಪಟ್ಟಣದ ಸಂಸದರ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಬುದ್ಧಿಮಾಂದ್ಯ ಮಕ್ಕಳ ಸಮೀಕ್ಷೆ ಕಾರ್ಯ ಬಾಕಿ ಉಳಿದಿದ್ದು, ಶೀಘ್ರ ಸಮೀಕ್ಷೆಗೆ ಕ್ರಮ ಕೈಗೊಳ್ಳಲಾಗುವುದು. ವಿಶೇಷ ಒಲಿಂಪಿಕ್ಸ್ ರಾಷ್ಟ್ರೀಯ ಅಧ್ಯಕ್ಷೆ ಮಲ್ಲಿಕಾ ನಡ್ಡಾ ನೇತತ್ವದಲ್ಲಿ ಸಂಸ್ಥೆಯು ಹೆಮ್ಮರವಾಗಿ ಬೆಳೆಯುತ್ತಿದೆ. ಕಲ್ಯಾಣ ಕರ್ನಾಟಕ ಸೇರಿ ರಾಜ್ಯದ 4 ವಿಭಾಗಗಳಲ್ಲಿ ತರಬೇತಿ ಕೇಂದ್ರ ತೆರೆಯಲಾಗುವುದು. ಮೊದಲ ಹಂತವಾಗಿ ಬೆಳಗಾವಿಯಲ್ಲಿ ತರಬೇತಿ ಕೇಂದ್ರ ಪ್ರಾರಂಭಿಸಲಾಗುತ್ತಿದ್ದು, ಜೊಲ್ಲೆ ಗ್ರೂಪ್ ಅದಕ್ಕೆ ಸಹಾಯ ಮಾಡುತ್ತಿದೆ ಎಂದರು.
2023ರ ಸೆಪ್ಬೆಂಬರ್ 26 ರಂದು ಬರ್ಲಿನ್‌ನಲ್ಲಿ ಜರುಗಿದ ವಿಶೇಷ ಒಲಿಂಪಿಕ್ಸ್ ಭಾರತ ತಂಡದ ರಾಜ್ಯದ 9 ಜನ ಭಾಗಿಯಾಗಿ, 13 ಚಿನ್ನ, 2 ಬೆಳ್ಳಿ ಪದಕ ತಂದಿದ್ದಾರೆ. ಅ.8 ರಂದು ಚಿಕ್ಕೋಡಿ ಪಟ್ಟಣದ ಆರ್.ಡಿ. ಹೈಸ್ಕೂಲ್ ಮೈದಾನದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಜನ್ಮದಿನಾಚರಣೆ ವೇದಿಕೆಯಲ್ಲಿ ಸನ್ಮಾನಿಸಲಾಗುವುದು ಎಂದರು.
ಒಲಿಂಪಿಕ್ಸ್‌ನ ರಾಜ್ಯ ನಿರ್ದೇಶಕ ಅಮರೇಂದ್ರ ಎ. ಮಾತನಾಡಿದರು. ಶಶಿಕಲಾ ಜೊಲ್ಲೆ ಅವರನ್ನು ಸನ್ಮಾನಿಸಲಾಯಿತು. ವಿಶೇಷ ಒಲಿಂಪಿಕ್ಸ್‌ನ ಭೌದ್ಧಿಕ ತಜ್ಞೆ ಶಾಂತಲಾ ಭಟ್, ಹೀರಾವತಿ ಸೇರಿ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಪದಾಧಿಕಾರಿಗಳಿದ್ದರು.