

ಮೇಷ: ಔತಣ ಕೂಟಕ್ಕೆ ಅಧಿಕ ಖರ್ಚು ವೆಚ್ಚ. ಕುಟುಂಬದಲ್ಲಿ ಒಗ್ಗಟ್ಟಿನ ಕೊರತೆ. ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆ. ಶುಭಸಂಖ್ಯೆ: 5
ವೃಷಭ: ಕೆಲಸದ ಒತ್ತಡದಿಂದ ಹೊರಬನ್ನಿ. ಗೃಹ ನಿರ್ವಣದ ಕೆಲಸಗಳನ್ನು ಮುಗಿಸುವಿರಿ. ಸಮಾಜದಲ್ಲಿ ಗೌರವದ ಮುನ್ನಡೆ ಗಳಿಸುವಿರಿ.ಶುಭಸಂಖ್ಯೆ: 1
ಮಿಥುನ: ನಿರ್ಧಾರಗಳಲ್ಲಿ ಆತ್ಮವಿಶ್ವಾಸವಿರಲಿ. ಕಚೇರಿಯಲ್ಲಿ ದುಡುಕುತನ ಬೇಡ. ಸಾರ್ವಜನಿಕವಾಗಿ ಸಹನೆ ಯಿಂದ ವರ್ತಿಸುವುದು ಸೂಕ್ತ. ಶುಭಸಂಖ್ಯೆ: 9
ಕಟಕ: ಮಕ್ಕಳ ಭವಿಷ್ಯದ ಚಿಂತೆ. ಕಾರ್ಯಗಳನ್ನು ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆತ್ಮಸ್ಥೈರ್ಯ ಅಗತ್ಯ. ಶುಭಸಂಖ್ಯೆ:3
ಸಿಂಹ: ಹೊಸ ಉದ್ಯೋಗದಲ್ಲಿ ಒತ್ತಡ. ವಿವಾಹದ ವಿಷಯ ದಲ್ಲಿ ದೃಢ ತೀರ್ಮಾನ ತೆಗೆದುಕೊಳ್ಳಿ. ರಿಯಲ್ ಎಸ್ಟೇಟ್ನವರಿಗೆ ಆದಾಯ. ಶುಭಸಂಖ್ಯೆ: 3
ಕನ್ಯಾ: ಒಳ್ಳೆಯತನದ ದುರುಪಯೋಗವಾದೀತು. ಮಹಿಳೆ ಯರಿಗೆ ವಿರಕ್ತ ಭಾವನೆ. ಚಲನಚಿತ್ರ ನಟಿಯರಿಗೆ ಅನಿರೀಕ್ಷಿತ ಧನಾಗಮನ. ಶುಭಸಂಖ್ಯೆ: 8
ತುಲಾ:ತಂದೆಯ ಆರೋಗ್ಯದ ವಿಚಾರದಲ್ಲಿ ಎಚ್ಚರ. ವಿದೇಶ ಪ್ರವಾಸ ಕೈಗೊಳ್ಳುವಿರಿ. ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 3
ವೃಶ್ಚಿಕ: ಕಲಾವಿದರಿಗೆ ಆತ್ಮಶಕ್ತಿಯ ಕೊರತೆ. ಕುಟುಂಬದಲ್ಲಿ ಸಾಮರಸ್ಯವಿರುತ್ತದೆ. ಸಾಲ ತೀರಿಸಲು ಆತ್ಮೀಯರ ಸಹಕಾರ ಸಿಗಲಿದೆ. ಶುಭಸಂಖ್ಯೆ:7
ಧನುಸ್ಸು: ಹಣಕಾಸಿನ ವಿಚಾರದಲ್ಲಿ ಎಚ್ಚರ. ಲೆಕ್ಕಪರಿಶೋಧಕ ಕ್ಷೇತ್ರದ ವಿದ್ಯಾರ್ಥಿಗಳಿಗೆ ಜಯ. ಕಟ್ಟಡ ಸಾಮಗ್ರಿಗಳ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 3
ಮಕರ: ಉದರ ಬಾಧೆ ಕಾಡಲಿದೆ. ಸೇವಾನಿರತ ವೃತ್ತಿಯವರಿಗೆ ಆದಾಯವಿದೆ. ಕೈಗೊಂಡ ನಿರ್ಧಾರಗಳಿಗೆ ಬದ್ಧರಾಗಿ ವ್ಯವಹರಿಸಿ. ಶುಭಸಂಖ್ಯೆ:1
ಕುಂಭ: ಆಸ್ತಿ ವಿಚಾರದಲ್ಲಿ ಸಹೋದರರ ಮನ ಒಲಿಸುವಲ್ಲಿ ಸಫಲತೆ. ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಳ್ಳಿ. ಆರ್ಥಿಕ ಸ್ಥಿತಿ ಉತ್ತಮ. ಶುಭಸಂಖ್ಯೆ: 4
ಮೀನ: ಭೂಮಿ ವ್ಯವಹಾರದಲ್ಲಿ ಲಾಭ . ಹೈನುಗಾರಿಕೆಯಲ್ಲಿ ಉತ್ತಮ ಆದಾಯ. ಪೂಜಾ ಸಾಮಗ್ರಿಗಳ ವ್ಯಾಪಾರಸ್ಥರಿಗೆ ನಿರೀಕ್ಷಿತ ಪ್ರಗತಿ. ಶುಭಸಂಖ್ಯೆ:7