ಶಿಷ್ಯ ವೇತನ ನೆಪದಲ್ಲಿ ಸೈಬರ್ ವಂಚನೆ

ಪಾಲಕರ ಖಾತೆಯಲ್ಲಿ ₹1.5 ಲಕ್ಷ ಗುಳುಂ, ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲು
cyber fraud
cyber fraud
Published on: 

ಬೆಂಗಳೂರು: ಮಗನ ಶಿಷ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಗೂಗಲ್ ಮೂಲಕ ಸಂಪರ್ಕಿಸಿದ್ದ ವ್ಯಕ್ತಿಯೋರ್ವನಿಂದ ಲಕ್ಷಾಂತರ ರೂ. ವಂಚನೆಯಾಗಿದೆ.

ಮಲ್ಲೇಶ್ವರ ನಿವಾಸಿ ಎಸ್. ಗಿರಿಜಮ್ಮ ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಗಿರಿಜಮ್ಮ, ತನ್ನ ಮಗನ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದರು. ಆಗವರಿಗೆ ಅಪರಿಚಿತ ವ್ಯಕ್ತಿಯ ೆನ್ ನಂಬರ್ ಸಿಕ್ಕಿದೆ. ಆತನನ್ನು ಸಂಪರ್ಕಿಸಿ, ಹಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರುದಾರರು ಮತ್ತು ಆರೋಪಿಯ ನಡುವೆ ವಾಟ್ಸ್‌ಅಪ್ ಸಂಭಾಷಣೆ ಏರ್ಪಟ್ಟಿತ್ತು. ಆರೋಪಿ, ಗಿರಿಜಮ್ಮಳ ಆಧಾರ್, ಬ್ಯಾಂಕ್ ಖಾತೆ ಸೇರಿ ಕೆಲ ಮಾಹಿತಿ ಕೇಳಿ ಸಂಗ್ರಹಿಸಿದ್ದ. ಕೆಲ ನಿಮೀಷಗಳ ಬಳಿಕ ವಾಟ್ಸ್‌ಅಪ್‌ನಲ್ಲಿ ರೆರನ್ಸ್ ಬಂದಿದ್ದು, ಅದರ ಸ್ಕ್ರೀನ್ ಶಾಟ್ ಕಳುಹಿಸಿ ಎಂದಿದ್ದ. ಗಿರಿಜಮ್ಮ ಕಳುಹಿಸಿದ್ದಳು. ಈ ಪ್ರಕ್ರಿಯೆ ಮುಗಿದು ಕೆಲವೇ ನಿಮೀಷಗಳಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ 1.50 ಲಕ್ಷ ರೂ. ಕಡಿತವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಣ ವರ್ಗಾವಣೆಯಾದ ಖಾತೆಯ ವಿವರ, ಗಿರಿಜಮ್ಮ ಸಂಪರ್ಕಿಸಿದ್ದ Phone ನಂಬರ್ ಸಹಾಯದಿಂದ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿಗೆ ಬಂಧಿಸಲಿದ್ದಾರೆ.

ವಿದ್ಯಾರ್ಥಿಗಳ ಮೇಲೂ ಸೈಬರ್ ವಂಚಕರ ಕಣ್ಣು:

ಸೈಬರ್ ವಂಚಕರ ಜಾಲ ವಿಸ್ತರಣೆ ಗೊಂಡಿದೆ. ಎಲ್ಲ ವಲಯದ ಮೂಲಕವೂ ಜನರಿಗೆ ಕೊಟ್ಯಂತರ ರೂ. ವಂಚಿಸುತ್ತಿದ್ದಾರೆ. ಇದೀಗ ಶಿಷ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದ. ಪಾಲಕರ ಖಾತೆಗೂ ಕಣ್ಣು ಹಾಕಿದ್ದಾರೆ. ಘಟನೆಯಿಂದಾಗಿ ಎಲ್ಲರಲ್ಲಿ ಆತಂಕ ಸೃಷ್ಟಿಯಾಗಿದೆ. ಯಾವುದೇ ಸರ್ಕಾರಿ ಯೋಜನೆಯಾಗಲಿ ಅಧಿಕೃತ ವೆಬ್‌ಸೈಟ್ ಮೂಲಕ ಖಚಿತ ಮಾಹಿತಿ ಪಡೆದು, ಮುಂದುವರಿಯಬೇಕು. ಮಧ್ಯವರ್ತಿಗೆ ನಂಬಿದರೆ ಮೋಸ ಹೋಗುವುದು ಗ್ಯಾರಂಟಿ ಎಂದು ಸೈಬರ್ ತಜ್ಞರು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net