ಐಐಟಿ ಹೈದರಾಬಾದ್‌ನಲ್ಲಿ ದೇಶದ ಮೊದಲ ‘ಸದ್ಗುಣ’ ಕ್ರೆಡಿಟ್ ಕೋರ್ಸ್ ಆರಂಭ- IIT Hyderabad

ಕೋರ್ಸ್‌ಗೆ ಆಯ್ಕೆಗೆ ಯಾವುದೇ ಪೂರ್ವ ಅರ್ಹತೆಯ ಅಗತ್ಯವಿಲ್ಲ. ಬಿ.ಟೆಕ್‌ನ ಒಂದರಿಂದ ನಾಲ್ಕನೇ ವರ್ಷದ ವಿದ್ಯಾರ್ಥಿಗಳು ಹಾಗೂ ಬಿ.ಡಿಸೈನ್ ವಿದ್ಯಾರ್ಥಿಗಳು ಸೇರಿ ಎಲ್ಲ ಪದವಿಪೂರ್ವ ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಸೇರಬಹುದು. ಈಗಾಗಲೇ 140ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದಾರೆ.
ಸದ್ಗುಣ’ ಕ್ರೆಡಿಟ್ ಕೋರ್ಸ್ ಆರಂಭ
ಐಐಟಿ ಹೈದರಾಬಾದ್‌
Published on: 

ಬೆಂಗಳೂರು: (credit course launched) ಶೈಕ್ಷಣಿಕ ಮತ್ತು ವೃತ್ತಿಪರ ಕೌಶಲಗಳಿಗೆ ಮೀರಿದ ವ್ಯಕ್ತಿತ್ವ, ಜವಾಬ್ದಾರಿ ಹಾಗೂ ವೈಯಕ್ತಿಕ ಬೆಳವಣಿಗೆಯತ್ತ ಗಮನ ಹರಿಸುವ ಉದ್ದೇಶದಿಂದ ಭಾರತೀಯ ತಂತ್ರಜ್ಞಾನ ಸಂಸ್ಥೆ ಹೈದರಾಬಾದ್ (ಐಐಟಿ ಹೈದರಾಬಾದ್) ‘ಸದ್ಗುಣ: ವ್ಯಕ್ತಿತ್ವ, ಜವಾಬ್ದಾರಿ ಮತ್ತು ಬದುಕಿನ ಸರ್ವತೋಮುಖ ವಿಕಸನ ಕೋರ್ಸ್ ಆರಂಭಿಸಿದೆ. ಇದು ದೇಶದ ಮೊದಲ ಶೈಕ್ಷಣಿಕ ಕ್ರೆಡಿಟ್ ಕೋರ್ಸ್ ಇದಾಗಿದೆ.

ಕೋರ್ಸ್‌ಗೆ ಆಯ್ಕೆಗೆ ಯಾವುದೇ ಪೂರ್ವ ಅರ್ಹತೆಯ ಅಗತ್ಯವಿಲ್ಲ. ಬಿ.ಟೆಕ್‌ನ ಒಂದರಿಂದ ನಾಲ್ಕನೇ ವರ್ಷದ ವಿದ್ಯಾರ್ಥಿಗಳು ಹಾಗೂ ಬಿ.ಡಿಸೈನ್ ವಿದ್ಯಾರ್ಥಿಗಳು ಸೇರಿ ಎಲ್ಲ ಪದವಿಪೂರ್ವ ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಸೇರಬಹುದು. ಈಗಾಗಲೇ 140ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದಾರೆ.

ಒಟ್ಟಾರೆ ಏಳು ಕಲಿಕಾ ಅವಧಿಗಳಲ್ಲಿ ನಡೆಯುವ ಈ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ಸದ್ಗುಣ ಸೂಚ್ಯಂಕದ (‘ಗುಡ್‌ನೆಸ್ ಇಂಡೆಕ್ಸ್ ) ಚೌಕಟ್ಟು, ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆಯಾಮಗಳ ಮೂಲಕ ಬದುಕಿನ ಸಾರ್ಥಕತೆ, ವ್ಯಕ್ತಿತ್ವ ನಿರ್ಮಾಣದ ಅಡಿಪಾಯ, ಉತ್ತಮ ವ್ಯಕ್ತಿತ್ವದಿಂದ ದೊರೆಯುವ ಪ್ರಯೋಜನಗಳು, ವೈಯಕ್ತಿಕ ಸಾಮಾಜಿಕ ಜವಾಬ್ದಾರಿ (ಪಿಎಸ್‌ಆರ್‌) ಹಾಗೂ ಸದ್ಗುಣ ಮತ್ತು ‘ವಿಕಸಿತ ಭಾರತ’ದ ನಡುವಣ ಸಂಬಂಧದ ಕುರಿತು ಅಧ್ಯಯನ ಮಾಡಲಿದ್ದಾರೆ.

Also Read
ಜಿಯೋ IPO ಖರೀದಿಗೆ ಮುಗಿಬಿದ್ದ ಹೂಡಿಕೆದಾರರು: 1 ಕೋಟಿ ಅರ್ಜಿ ಸಲ್ಲಿಕೆ; ವಿಶ್ವದಾಖಲೆ ಬರೆದ ಮುಕೇಶ್ ಅಂಬಾನಿ! Jio IPO
ಸದ್ಗುಣ’ ಕ್ರೆಡಿಟ್ ಕೋರ್ಸ್ ಆರಂಭ

ಇನ್‌ಸ್ಟಿಟ್ಯೂಟ್ ಆಫ್ ಗುಡ್‌ನೆಸ್‌ನ ಸಂಸ್ಥಾಪಕ ರವಿ ಶರ್ಮಾ ಮಾತನಾಡಿ, “ಇನ್‌ಸ್ಟಿಟ್ಯೂಟ್ ಆಫ್ ಗುಡ್‌ನೆಸ್‌ನಲ್ಲಿ, ಒಳ್ಳೆಯತನವೇ ದೀರ್ಘಕಾಲೀನ ಸಂತೋಷದ ಅಡಿಪಾಯ ಮತ್ತು ಯಶಸ್ಸಿನ ನೈಜ ಮಾನದಂಡ ಎಂದು ನಾವು ನಂಬುತ್ತೇವೆ. ಸದ್ಗುಣವನ್ನು ಕಲಿಸಬಹುದಾದ ಹಾಗೂ ಮುಖ್ಯವಾಹಿನಿಯ ಶಿಕ್ಷಣದ ಅವಿಭಾಜ್ಯ ಅಂಗವನ್ನಾಗಿ ಮಾಡುವುದು ನಮ್ಮ ಧೋರಣೆಯಾಗಿದೆ. ಐಐಟಿ ಹೈದರಾಬಾದ್‌ನಲ್ಲಿ ಆರಂಭಿಸಿರುವ ಈ ಮಹತ್ವದ ಕ್ರೆಡಿಟ್ ಕೋರ್ಸ್, ಯಶಸ್ಸಿನ ವ್ಯಾಖ್ಯಾನವನ್ನು ಮರುರೂಪಿಸುವ ನಿಟ್ಟಿನಲ್ಲಿನ ಮಹತ್ವದ ಹೆಜ್ಜೆಯಾಗಿದೆ ಎಂದರು.

ಐಐಟಿ ಹೈದರಾಬಾದ್‌ನ ಸನ್‌ಶೈನ್ ಕೌನ್ಸೆಲಿಂಗ್ ಸೆಲ್‌ನ ಉಸ್ತುವಾರಿ ಅಧ್ಯಾಪಕ ಡಾ. ನೀರಜ್ ಕುಮಾರ್ ಮಾತನಾಡಿ, “ಮಾನಸಿಕಸ್ಥೈರ್ಯ ಮತ್ತು ಸದ್ಗುಣಗಳು ಪರಸ್ಪರ ಬಲವರ್ಧನೆಗೊಳಿಸುತ್ತವೆ. ಒತ್ತಡ ನಿರ್ವಹಿಸಲು ಮತ್ತು ಅಗತ್ಯವಿದ್ದಾಗ ಸಹಾಯ ಪಡೆಯಲು ಸಮರ್ಥರಾಗಿರುವ ವಿದ್ಯಾರ್ಥಿಗಳು ಇತರರ ಬಗ್ಗೆ ಕಾಳಜಿ ವಹಿಸಲು ಹೆಚ್ಚು ಸಿದ್ಧರಾಗಿರುತ್ತಾರೆ.ವಿದ್ಯಾರ್ಥಿಗಳು ವೃತ್ತಿಪರರಾಗಿ ಮಾತ್ರವಲ್ಲದೆ ಉತ್ತಮ ವ್ಯಕ್ತಿಗಳಾಗಿಯೂ ಬೆಳೆಯುವುದಕ್ಕೆ ಕೋರ್ಸ್​​ ಸಹಾಯವಾಗಲಿದೆ ಎಂದು ಮಾಹಿತಿ ನೀಡಿದರು.

“ಶಿಕ್ಷಣವು ಜ್ಞಾನ ಮತ್ತು ವೃತ್ತಿಪರ ಸಾಮರ್ಥ್ಯ ಬೆಳೆಸುವುದಕ್ಕೆ ಮಾತ್ರ ಸೀಮಿತವಾಗಿರಬಾರದು. ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ, ಜವಾಬ್ದಾರಿಗಳು ಮತ್ತು ಸಮಾಜಕ್ಕೆ ನೀಡಬಹುದಾದ ಕೊಡುಗೆಗಳ ಕುರಿತು ಚಿಂತನೆ ನಡೆಸುವಂತೆಯೂ ಅದು ಪ್ರೇರೇಪಿಸುವಂತಿರಬೇಕು. ಗುಡ್‌ನೆಸ್ ಕೋರ್ಸ್ ಮೂಲಕ, ಅರ್ಥಪೂರ್ಣ ಜೀವನವನ್ನು ನಡೆಸುವುದರ ನಿಜವಾದ ಅರ್ಥವೇನು ಮತ್ತು ತಮ್ಮ ಆಯ್ಕೆಗಳು ಹಾಗೂ ಕಾರ್ಯಗಳ ಮೂಲಕ ಉತ್ತಮ ಸಮಾಜ ಮತ್ತು ವಿಕಸಿತ ಭಾರತ ನಿರ್ಮಾಣಕ್ಕೆ ಹೇಗೆ ಕೊಡುಗೆ ನೀಡಬಹುದು ಎಂಬುದರ ಕುರಿತು ವಿದ್ಯಾರ್ಥಿಗಳು ಕಲಿಯುತ್ತಾರೆ ಎಂದು ಐಐಟಿ ಹೈದರಾಬಾದ್‌ನ ನಿರ್ದೇಶಕ ಪ್ರೊ. ಬಿ.ಎಸ್. ಮೂರ್ತಿ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net