

ನವದೆಹಲಿ: ಅಹಮದಾಬಾದ್ಗೆ ಡೊನಾಲ್ಡ್ ಟ್ರಂಪ್ ಇಂದು ಬೆಳಗ್ಗೆ ಬಂದಿಳಿದಿದ್ದಾರೆ. ಇಡೀ ದೇಶದ ಗಮನ ಆ ಕಡೆಗೆ ಇದ್ದರೆ ಇತ್ತ ದೆಹಲಿಯ ಭಜನ್‌ಪುರ, ಮೌಜ್‌ಪುರ ಮತ್ತು ಜಾಫರಾಬಾದ್ಗಳಲ್ಲಿ ಸಿಎಎ ಪರ ಮತ್ತು ವಿರೋಧಿ ಪ್ರತಿಭಟನಾಕಾರರ ನಡುವೆ ಸಂಘರ್ಷ ನಡೆದಿದ್ದು, ಅದು ಹಿಂಸಾಚಾರಕ್ಕೆ ತಿರುಗಿದೆ.
ಹಿಂಸಾಚಾರದ ವಿಡಿಯೋಗಳು ವೈರಲ್ ಆಗಿವೆ. ವಾಹನ, ಆಟೋ ರಿಕ್ಷಾಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದನ್ನು ಒಂದು ವಿಡಿಯೋದಲ್ಲಿ ನೋಡಬಹುದು. ಹಾಗೇ ಇನ್ನೊಂದು ವಿಡಿಯೋದಲ್ಲಿ ಕೆಂಪು ಶರ್ಟ್ ಹಾಕಿಕೊಂಡವನೋರ್ವ ಪೊಲೀಸರತ್ತ ಗನ್ ತೋರಿಸುವುದನ್ನು ನೋಡಬಹುದು. ಪರಿಸ್ಥಿತಿ ನಿಯಂತ್ರಣದ ವೇಳೆ ಪೊಲೀಸ್ ಮುಖ್ಯಪೇದೆಯೋರ್ವರು ಮೃತರಾಗಿದ್ದಾಗಿ ವರದಿಯಾಗಿದೆ.
ಮೌಜ್ಪುರದ ಮೆಟ್ರೋ ಸ್ಟೇಶನ್ನ ಕಬೀರ್ ನಗರದಲ್ಲಿ ಸಿಎಎ ಪರ ಮತ್ತು ವಿರೋಧಿ ಹೋರಾಟಗಾರರು ಪರಸ್ಪರ ಕಲ್ಲು ತೂರಾಟ ನಡೆಸಿದ್ದು ವರದಿಯಾಗಿದೆ. ಇದಕ್ಕೆ ಸಂಬಂಧಪಟ್ಟ ಫೋಟೋಗಳು, ವಿಡಿಯೋಗಳು ವೈರಲ್ ಆಗಿವೆ.
ರಸ್ತೆಯಲ್ಲಿ ನಿರ್ಮಿಸಲಾದ ಕಾಂಕ್ರೀಟ್ ಡಿವೈಡರ್ಗಳನ್ನೆಲ್ಲ ಒಡೆದು ಚೂರು ಮಾಡಿದ ಎರಡೂ ಗುಂಪುಗಳ ಪ್ರತಿಭಟನಾಕಾರರು ಪರಸ್ಪರರಿಗೆ ಹೊಡೆದುಕೊಂಡಿದ್ದಾರೆ. ಅದರಲ್ಲಿ ಕೆಲವರು ಜೈಶ್ರೀರಾಮ್ ಎಂದು ಕೂಗುತ್ತಿದ್ದರು ಎನ್ನಲಾಗಿದೆ. ಮೆಟ್ರೋ ಸ್ಟೇಶನ್ಗಳ ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿಯಾಗಿದೆ. ಉದ್ರಿಕ್ತರ ಗುಂಪೊಂದು ಸಿಕ್ಕಸಿಕ್ಕವರಿಗೆ ಹೊಡೆಯುತ್ತ, ಮನೆಗಳಿಗೆಲ್ಲ ಬೆಂಕಿ ಇಡುತ್ತಿದೆ.
ಶನಿವಾರ ಸಂಜೆಯಿಂದ ಸುಮಾರು 1000 ಮಹಿಳೆಯರು ಜಾಫರಾಬಾದ್ನಲ್ಲಿ ಕುಳಿತು ಶಾಂತಿಯುತವಾಗಿ ಕುಳಿತು ಸಿಎಎ, ಎನ್ಆರ್ಸಿ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರ ವಿರುದ್ಧ ಧರಣಿ ನಡೆಸುತ್ತಿದ್ದರು. ಇಲ್ಲಿ ಭಾನುವಾರ ಮಧ್ಯಾಹ್ನ ಕಲ್ಲು ತೂರಾಟ ನಡೆದಿತ್ತು. ಅದೇ ಸಂಘರ್ಷ ಇಂದು ಮುಂಜಾನೆಯಿಂದ ತಾರಕಕ್ಕೆ ಏರಿದೆ.
ಪರಸ್ಪರ ಸಂಘರ್ಷದಲ್ಲಿ ತೊಡಗಿದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ದಾಳಿ ನಡೆಸಿದ್ದಾರೆ. ಇಲ್ಲಿಗೆ ಪ್ಯಾರಾಮಿಲಿಟರಿ ಸಿಬ್ಬಂದಿಯೂ ಆಗಮಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮೂಲಕ ಈ ಪ್ರತಿಕ್ರಿಯೆ ನೀಡಿದ್ದು, ಇದು ತುಂಬ ಯಾತನಾಮಯ ಸನ್ನಿವೇಶ ಎಂದಿದ್ದಾರೆ. ದೆಹಲಿಯಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಿ ಎಂದು ಗೃಹಸಚಿವ ಅಮಿತ್ ಷಾ ಅವರನ್ನು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮೂಲಕ ಈ ಪ್ರತಿಕ್ರಿಯೆ ನೀಡಿದ್ದು, ಇದು ತುಂಬ ಯಾತನಾಮಯ ಸನ್ನಿವೇಶ ಎಂದಿದ್ದಾರೆ. ದೆಹಲಿಯಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಿ ಎಂದು ಗೃಹಸಚಿವ ಅಮಿತ್ ಷಾ ಅವರನ್ನು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)