

ನವದೆಹಲಿ: ರಾಜಸ್ತಾನದ ಬಿಲ್ವಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಪರವಾಗಿ ನಡೆದ ಬೃಹತ್ ಮೆರವಣಿಗೆಯ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆಗಳು ತೀವ್ರಗೊಂಡ ವೇಳೆ ಸಾಮಾಜಿಕ ಜಾಲ ತಾಣಗಳಲ್ಲಿ ಕಾಯ್ದೆಯ ಪರವಾಗಿ ನಡೆದ ಮೆರವಣಿಗೆಗಳಲ್ಲಿ ರಾಜಸ್ತಾನದ ಬಿಲ್ವಾರ ನಗರದಲ್ಲಿ ನಡೆದ ಬೃಹತ್ ಮೆರವಣಿಗೆ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಆದರೆ ಇದು ನಕಲಿ ಎಂದು ಫ್ಯಾಕ್ಟ್ಚೆಕ್ನಿಂದ ಪತ್ತೆಯಾಗಿದೆ.
ರಾಜಸ್ತಾನದ ಬಿಲ್ವಾರ ನಗರದಲ್ಲಿ ಸಾವಿರಾರು ಮಂದಿ ನಾಗರಿಕರು ಕೇಸರಿ ಧ್ವಜ ಹಿಡಿದು ಕಾಯ್ದೆ ಪರವಾಗಿ ಪ್ರತಿಭಟನೆ ನಡೆಸಿದರು ಎಂದು ಫೇಸ್‌ಬುಕ್ ಸೇರಿದಂತೆ ಇತರೆ ಜಾಲತಾಣಗಳಲ್ಲಿ ವಿಡಿಯೋ ಹಾಗೂ ಫೊಟೋಗಳು ಹರಿದಾಡಿದವು.
ಫೇಸ್‌ಬುಕ್ ಪುಟದಲ್ಲಿ '' ಹಿಂದಿಯಲ್ಲಿ ಶೀರ್ಷಿಕೆ ಬರೆದು ವಿಡಿಯೋ ಒಂದನ್ನು ಹಂಚಿಕೆ ಮಾಡಲಾಗಿತ್ತು. ಸಿಎಎ ಮತ್ತು ಎನ್‌ಆರ್‌ಸಿಯನ್ನು ಬೆಂಬಲಿಸಿ ಬಿಲ್ವಾರಾದಲ್ಲಿ ಇಂದು ನಡೆದ ಮೆರವಣಿಗೆ. ನಗರದಲ್ಲಿ ಜೈ ಜೈ ಶ್ರೀ ರಾಮ್ ಎಂಬ ವಾತಾವರಣವಿದೆ. ಮೋದಿ ಜಿ ಯಾವುದೇ ಕಾರಣಕ್ಕೂ ಕಾಯ್ದೆ ಜಾರಿ ಮಾಡದೆ ಹಿಂದೆ ಸರಿಯಬೇಡಿ. ನಿಮ್ಮೊಂದಿಗೆ ನಾವು ಇದ್ದೇವೆ ಎಂದು ಬರೆದು ಪೋಸ್ಟ್ ಮಾಡಲಾಗಿತ್ತು. ಇದನ್ನು 4 ಸಾವಿರ ಮಂದಿ ಮರು ಹಂಚಿಕೆ ಮಾಡಿದ್ದರು.
ಇಂಡಿಯಾ ಟುಡೇ (ಎಎಫ್‌ಡಬ್ಲ್ಯೂಎ) ಇದು ನಕಲಿ ವಿಡಿಯೋ ಎಂಬುದನ್ನು ಬಯಲಿಗೆ ಎಳೆದಿದೆ. ಈ ವಿಡಿಯೋ ಕರ್ನಾಟಕದ ಕಲಬುರಗಿಯಲ್ಲಿ 2018ರಲ್ಲಿ ರಾಮನವಮಿ ವೇಳೆ ನಡೆದ ಶೋಭಾ ಯಾತ್ರೆಯ ವಿಡಿಯೋ ಎಂಬುದನ್ನು ಪತ್ತೆ ಮಾಡಿದೆ. ಹೀಗಾಗಿ ವೈರಲ್ ಆದ ವಿಡಿಯೋಗೂ ಮೆರವಣಿಗೆಗೂ ಯಾವುದೇ ಸಂಬಂಧ ಇಲ್ಲ ಎಂಬುದು ಗೊತ್ತಾಗಿದೆ. (ಏಜೆನ್ಸೀಸ್)