ಬದಲಾದ ಒಳಾಂಗಣ ವಿನ್ಯಾಸ: ಹೊಸ ಮಾದರಿ ಪೀಠೋಪಕರಣಗಳಿಗೆ ಬೇಡಿಕೆ- Changing Interior Design

ಬೆಂಗಳೂರಿನ ಹೌಸ್ ಆಫ್ ರೆಹೌ, ಶೇಖರಣಾ ವ್ಯವಸ್ಥೆಗಳು ಮತ್ತು ಒಳಾಂಗಣ ಪರಿಹಾರಗಳು ಏಕೀಕೃತ ಅನುಭವದ ಭಾಗವಾಗಿ ಒಟ್ಟಾಗಿ ಸೇರುವ ವಿಶೇಷ ತಾಣವನ್ನು ಸೃಷ್ಟಿಸಿದೆ. ವರ್ತೂರು-ಸರ್ಜಾಪುರ ರಸ್ತೆಯ ಸಮೀಪ 2 ಸಾವಿರ ಚದರ ಅಡಿಯಲ್ಲಿ ಸುಸಜ್ಜಿತ ಹೌಸ್ ಆಫ್ ರೆಹೌ ಶೋರೂಂ ತೆರೆಯಲಾಗಿದೆ ಎಂದರು
ಬದಲಾದ ಒಳಾಗಂಣ ವಿನ್ಯಾಸ
ಹೊಸ ವಿನ್ಯಾಸ
Published on: 

ಬೆಂಗಳೂರು: ಆಧುನಿಕ ಯುಗದಲ್ಲಿ ಅಪಾರ್ಟ್‌ಮೆಂರ್ಟ್, ಗಗನಚುಂಬಿ ಕಟ್ಟಡ, ವಿಲ್ಲಾ, ಗೃಹ, ಕಚೇರಿಗಳ ಒಳಾಂಗಣ ವಿನ್ಯಾಸ ಮತ್ತು ಪೀಠೋಪಕರಣಗಳ ಆಯ್ಕೆಯಲ್ಲಿ ಜನರ ಒಲವು ದಿನದಿಂದ ದಿನಕ್ಕೆ ಬದಲಾಗುತ್ತಿದೆ.

ಮನೆಯ ಅಂದಕ್ಕೆ ಮಾತ್ರವಲ್ಲದೆ, ತಾಜಾ ಗಾಳಿ ಮತ್ತು ನೈಸರ್ಗಿಕ ಬೆಳಕಿಗೆ ಜನರು ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ, ಜೀವನಶೈಲಿ ಬದಲಾದಂತೆ ಜನರು ಮನೆಗಳ ವಿನ್ಯಾಸವೂ ಬದಲಾಗುತ್ತಿದೆ. ಬಜೆಟ್ ಆಧಾರದಲ್ಲಿ ಮನೆಗಳ ವಿನ್ಯಾಸ ಮಾಡಲಾಗುತ್ತಿದೆ. ಗಗನಚುಂಬಿ ಕಟ್ಟಡಗಳು ವಾಣಿಜ್ಯ ಉದ್ದೇಶಕ್ಕೆ ಮಾತ್ರವಲ್ಲದೆ ವಸತಿ, ವಾಣಿಜ್ಯ, ಆತಿಥ್ಯ ಉದ್ದೇಶಗಳಿಗೂ ಬಳಸುವ ಸಲುವಾಗಿ ವಿನ್ಯಾಸ ರಚಿಸಲಾಗುತ್ತಿದೆ. ಕಟ್ಟಡಗಳ ಒಳಗೆ ವಿಶಾಲವಾದ ಜಾಗ, ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮ ಸೇರಿ ಜಾಗದ ಅಗತ್ಯಕ್ಕೆ ತಕ್ಕಂತೆ ವಿನ್ಯಾಸಮೂಲಕ ಕಟ್ಟಡ ನಿರ್ಮಿಸಲಾಗುತ್ತಿದೆ.

ಜಪಾನಿನ ಸರಳತೆ ಮತ್ತು ಸ್ಕ್ಯಾಂಡಿನೇವಿಯನ್ ದೇಶಗಳ ಉಷ್ಣತೆಯನ್ನು ಒಳಗೊಂಡ ‘ಜಪಾನ್ಡಿ’ ವಿನ್ಯಾಸಕ್ಕೆ ಈಗ ಭಾರಿ ಬೇಡಿಕೆಯಿದೆ. ಮನೆಯಲ್ಲಿ ಗೀಚು-ಗೀಚು ಇರದೆ, ವಿಶಾಲ ಮತ್ತು ಶಾಂತವಾಗಿ ಕಾಣುವಂತೆ ಮಾಡಲು ಜನರು ಇಷ್ಟಪಡುತ್ತಿದ್ದಾರೆ. ಬಯೋಫಿಲಿಕ್ ವಿನ್ಯಾಸವೂ ಹೆಚ್ಚು ಗಮನ ಸೆಳೆಯುತ್ತಿದೆ.

ಪ್ರಸ್ತುತ ಇಂಟೀರಿಯರ್ ಕ್ಷೇತ್ರದಲ್ಲಿ ಹೊಸ ಮಾದರಿಯ ವಿನ್ಯಾಸ ಮತ್ತು ಪೀಠೋಪಕರಣಗಳಿಗೆ ಜನರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಭಾರತದ ಫರ್ನಿಚರ್ ಕ್ಷೇತ್ರದಲ್ಲಿ ಬೆಂಗಳೂರು ಪ್ರಮುಖ ಪಾತ್ರ ವಹಿಸಿದೆ. ಜರ್ಮನ್ ತಂತ್ರಜ್ಞಾನದ ಒಳಾಂಗಣ ವಿನ್ಯಾಸ, ಪೀಠೋಪಕರಣಗಳಿಗೆ ಬೇಡಿಕೆ ಇದೆ. ರೆಹಾವ್ ಇಂಟೀರಿಯರ್ ಸಲ್ಯೂಷನ್ಸ್, ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ವಿನ್ಯಾಸ ಮತ್ತು ಪೀಠೋಪಕರಣಗಳಿಗೆ ಮಳಿಗೆಗಳಿವೆ. ಗೃಹ ಮತ್ತು ಕಚೇರಿ ವಾತಾವರಣದಲ್ಲಿ ಒಳಾಂಗಣದ ಉತ್ಪನ್ನಗಳು ಹೇಗೆ ಕಾಣಿಸುತ್ತವೆ ಎಂಬುದನ್ನು ಗ್ರಾಹಕರು ನೇರವಾಗಿ ತಿಳಿದುಕೊಳ್ಳುವ ಅವಕಾಶವೂ ಇದೆ ಎನ್ನುತ್ತಾರೆ ರೆಹಾವ್ ಇಂಟೀರಿಯರ್ ಸಲ್ಯೂಷನ್ಸ್ ಸಿಇಒ ಡಾ. ಥಾಮಸ್ ಟ್ರೋಗರ್.

ಬೆಂಗಳೂರಿನ ಹೌಸ್ ಆಫ್ ರೆಹೌ, ಶೇಖರಣಾ ವ್ಯವಸ್ಥೆಗಳು ಮತ್ತು ಒಳಾಂಗಣ ಪರಿಹಾರಗಳು ಏಕೀಕೃತ ಅನುಭವದ ಭಾಗವಾಗಿ ಒಟ್ಟಾಗಿ ಸೇರುವ ವಿಶೇಷ ತಾಣವನ್ನು ಸೃಷ್ಟಿಸಿದೆ. ವರ್ತೂರು-ಸರ್ಜಾಪುರ ರಸ್ತೆಯ ಸಮೀಪ 2 ಸಾವಿರ ಚದರ ಅಡಿಯಲ್ಲಿ ಸುಸಜ್ಜಿತ ಹೌಸ್ ಆಫ್ ರೆಹೌ ಶೋರೂಂ ತೆರೆಯಲಾಗಿದೆ ಎಂದರು.

ಹೊಸ ಆಕರ್ಷಣೆ ಪೀಠೋಪಕರಣ:ಇಂದಿನ ಅಪಾರ್ಟ್‌ಮೆಂಟ್‌ಗಳ ಜಾಗದ ಅಭಾವಕ್ಕೆ ತಕ್ಕಂತೆ ಮಡಚಬಹುದಾದ ಬೆಡ್‌ಗಳು, ಗೋಡೆಗೆ ಅಂಟಿಕೊಳ್ಳುವ ಸ್ಟಡಿ ಟೇಬಲ್‌ಗಳು ಮತ್ತು ಹೆಚ್ಚಿನ ಸ್ಟೋರೇಜ್ ಹೊಂದಿರುವ ವಾರ್ಡ್‌ರೋಬ್‌ಗಳು ಗಮನ ಸೆಳೆಯುತ್ತಿವೆ. ಹಳೆಯ ಚೌಕಾಕಾರದ ಸೋಫಾಗಳ ಬದಲಾಗಿ ಈಗ ರೌಂಡ್ ಎಡ್ಜ್ ಇರುವ ಅಥವಾ ವಕ್ರರೇಖೆಯ ಸೋಫಾಗಳು, ಟೀಪಾಯ್‌ಗಳು ಹೆಚ್ಚು ಟ್ರೆಂಡ್‌ನಲ್ಲಿವೆ. ಇವುಗಳು ಮನೆಗೆ ಮೃದುವಾದ ನೋಟ ನೀಡಲಿವೆ. ನೈಸರ್ಗಿಕವಾದ ರೋಸ್‌ವುಡ್, ತೇಗ ಮತ್ತು ಬೆತ್ತದ ಫರ್ನಿಚರ್‌ಗಳಿಗೆ ಮರುಜೀವ ಬಂದಿದೆ. ಕೈಯಿಂದ ಮಾಡಿದ ಟೇಬಲ್ ಮತ್ತು ಕುರ್ಚಿಗಳನ್ನು ಮನೆಯಲ್ಲಿ ಇಡುತ್ತಿದ್ದಾರೆ. ಇಡೀ ಕೋಣೆಗೆ ಮಿನುಗು ನೀಡಲು ಲಿವಿಂಗ್ ರೂಮ್‌ನಲ್ಲಿ ಗಾಢ ಹಸಿರು, ರಾಯಲ್ ಬ್ಲೂ ಅಥವಾ ಜ್ಯುವೆಲ್ ಟೋನ್ ಹೊಂದಿರುವ ಸೋಫಾ ಅಳವಡಿಸುವುದು ಹೊಸ ಫ್ಯಾಷನ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net