ಶ್ರದ್ಧಾ ಕಪೂರ್ ‘ಈಥಾ’ಗೆ ಸೆನ್ಸಾರ್ ಸರ್ಟಿಫಿಕೇಟ್; ರನ್‌ಟೈಮ್ ಎಷ್ಟು ಗೊತ್ತಾ? | Shraddha Kapoor

Shraddha Kapoor
ಶ್ರದ್ಧಾ ಕಪೂರ್ ‘ಈಥಾ’ ಚಿತ್ರದ ಮತ್ತೊಂದು ಅಪ್‌ಡೇಟ್
Published on: 

Shraddha Kapoor: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟನೆಯ ಬಹುನಿರೀಕ್ಷಿತ ‘ಈಥಾ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರ ಟ್ರೇಲರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಕುತೂಹಲ ಮೂಡಿಸಿದೆ. ಇದೀಗ ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಮತ್ತು ರನ್‌ಟೈಮ್ ಬಹಿರಂಗವಾಗಿದ್ದು, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಚಿತ್ರಕ್ಕೆ ಯು/ಎ 16+ ಪ್ರಮಾಣಪತ್ರ ನೀಡಿದೆ.

ಸಿಬಿಎಫ್‌ಸಿ ಮಾಹಿತಿ ಪ್ರಕಾರ, ‘ಈಥಾ’ ಚಿತ್ರಕ್ಕೆಯು/ಎ 16+ ಪ್ರಮಾಣಪತ್ರ ನೀಡಲಾಗಿದೆ. ಅಂದರೆ 16 ವರ್ಷ ಮೇಲ್ಪಟ್ಟವರು ಚಿತ್ರ ವೀಕ್ಷಿಸಬಹುದು. 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪೋಷಕರ ಮಾರ್ಗದರ್ಶನದಲ್ಲಿ ಸಿನಿಮಾ ನೋಡಲು ಸೂಚಿಸಲಾಗಿದೆ.

‘ಈಥಾ’ ಚಿತ್ರದ ರನ್‌ಟೈಮ್ ಎಷ್ಟು?

ಇನ್ನು ಚಿತ್ರದ ರನ್‌ಟೈಮ್ 172 ನಿಮಿಷ 14 ಸೆಕೆಂಡ್ ಇದೆ. ಅಂದರೆ ಬರೋಬ್ಬರಿ 2 ಗಂಟೆ 52 ನಿಮಿಷ 14 ಸೆಕೆಂಡ್‌ಗಳ ಸಿನಿಮಾ ಇದಾಗಿದೆ. ಇದು ಶ್ರದ್ಧಾ ಕಪೂರ್ ಅವರ ವೃತ್ತಿಜೀವನದಲ್ಲೇ ಅತಿ ಹೆಚ್ಚು ಅವಧಿಯ ಸಿನಿಮಾ ಎನ್ನಲಾಗಿದೆ.

ಡಿಸೆಂಬರ್ 4ಕ್ಕೆ ‘ಈಥಾ’ ಬಿಡುಗಡೆ

ಮೊದಲು ಆಗಸ್ಟ್‌ನಲ್ಲಿ ಬಿಡುಗಡೆಯಾಗಬೇಕಿದ್ದ ‘ಈಥಾ’ ಸಿನಿಮಾ ಮುಂದೂಡಿಕೆಯಾಗಿತ್ತು. ಇದೀಗ ಡಿಸೆಂಬರ್ 4, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಟ್ರೇಲರ್ ಮತ್ತು ಹಾಡುಗಳಿಗೆ ಉತ್ತಮ ಗಮನ ಸಿಕ್ಕಿರುವುದರಿಂದ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಸಲ್ಮಾನ್ ಚಿತ್ರದ ಜತೆ ಪೈಪೋಟಿ

‘ಈಥಾ’ ಚಿತ್ರಕ್ಕೆ ಆರಂಭದಲ್ಲಿ ಸೋಲೋ ಬಿಡುಗಡೆ ಸಿಗಲಿದೆ ಎನ್ನಲಾಗಿತ್ತು. ಆದರೆ ಇತ್ತೀಚೆಗೆ ಸಲ್ಮಾನ್ ಖಾನ್ ತಮ್ಮ ಸಿನಿಮಾ ‘ಮಾತೃಭೂಮಿ’ ಕೂಡ ಡಿಸೆಂಬರ್ 4, 2026ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ. ಇದರಿಂದ ಎರಡೂ ಸಿನಿಮಾಗಳು ಒಂದೇ ದಿನ ತೆರೆಗೆ ಬರಲಿವೆ.

ಇದನ್ನೂ ಓದಿ: ಕೆಲಸ ಬಿಟ್ಟು ಹೋಗುವ ವಿಚಾರಕ್ಕೆ ಗಲಾಟೆ; ಕಾರ್ಮಿಕರ ಮೇಲೆ ಹಲ್ಲೆ, ಗನ್ ತೋರಿಸಿ ಧಮ್ಕಿ? | Coffee Estate Assault

ಈ ಬಗ್ಗೆ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿ, ಶ್ರದ್ಧಾ ಕಪೂರ್ ಸಿನಿಮಾ ಅದೇ ದಿನ ಬಿಡುಗಡೆಯಾಗುತ್ತಿರುವುದು ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಿದ್ದಾರೆ. ಮೊದಲೇ ಗೊತ್ತಿದ್ದರೆ ತಮ್ಮ ಸಿನಿಮಾ ಬಿಡುಗಡೆ ದಿನಾಂಕವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದೆ ಎಂದೂ ತಿಳಿಸಿದ್ದಾರೆ. ಅಲ್ಲದೆ, ಶ್ರದ್ಧಾ ಜತೆ ಮಾತನಾಡಿದ್ದು, ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುವುದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಲ್ಮಾನ್ ಹೇಳಿದ್ದಾರೆ.