ಪ್ರೊ.ಬಿ.ಕೆ.ಕೆಂಪೇಗೌಡ ನೇಮಕಾತಿ ರದ್ದುಪಡಿಸಿ : ಸರ್ಕಾರಕ್ಕೆ ಛಲವಾದಿ ನಾರಾಯಣಸ್ವಾಮಿ ಪತ್ರ - Chalavadi Narayanaswamy

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ ಮತ್ತು ಉನ್ನತ ಶಿಕ್ಷಣ ಇಲಾಖೆ ನಿರ್ದೇಶನದನ್ವಯ ವಿಶ್ವವಿದ್ಯಾಲಯದ ವ್ಯಾಸಂಗ ವಿಭಾಗದ ಹಿರಿಯ ಸದಸ್ಯರು ಅಥವಾ ಪ್ರಾಧ್ಯಾಪಕರನ್ನು ಮಾತ್ರ ಆ ಹುದ್ದೆಗೆ ನೇಮಿಸಬೇಕು. ಕಾಲೇಜು ಶಿಕ್ಷಣ ಇಲಾಖೆ ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದ ಕಾಲೇಜುಗಳ ಬೋಧಕರನ್ನು ಈ ಹುದ್ದೆಗೆ ನೇಮಿಸಲು ಅವಕಾಶವಿಲ್ಲ ಎಂದು ಪತ್ರದಲ್ಲಿ ನಾರಾಯಣಸ್ವಾಮಿ ಉಲ್ಲೇಖಿಸಿದ್ದಾರೆ.
Cancel Prof. B.K. Kempegowda’s appointment
ಸರ್ಕಾರಕ್ಕೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಬರೆದಿರುವ ಪತ್ರ
Published on: 

ಬೆಂಗಳೂರು: (B.K. Kempegowda’s appointment) ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರ (ಮೌಲ್ಯಮಾಪನ) ಹುದ್ದೆಗೆ ಪ್ರೊ. ಬಿ.ಕೆ. ಕೆಂಪೇಗೌಡ ಅವರನ್ನು ನೇಮಕ ಮಾಡಿರುವ ಕ್ರಮ ನಿಯಮಬಾಹಿರವಾಗಿದ್ದು, ತಕ್ಷಣ ಅವರ ನೇಮಕಾತಿ ರದ್ದುಪಡಿಸಿ, ಅರ್ಹ ಹಿರಿಯ ಪ್ರಾಧ್ಯಾಪಕರನ್ನು ನೇಮಿಸಬೇಕೆಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಮೈಸೂರು ವಿವಿಯ ಕುಲಸಚಿವರು ಹುದ್ದೆಗೆ ನಂಜನಗೂಡಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಹಾಗೂ ಪ್ರಭಾರ ಪ್ರಾಂಶುಪಾಲ ಆಗಿರುವ ಪ್ರೊ. ಬಿ.ಕೆ. ಕೆಂಪೇಗೌಡ ಅವರನ್ನು 2026ರ ಆ.10ರಂದು ನೇಮಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ ಮತ್ತು ಉನ್ನತ ಶಿಕ್ಷಣ ಇಲಾಖೆ ನಿರ್ದೇಶನದನ್ವಯ ವಿಶ್ವವಿದ್ಯಾಲಯದ ವ್ಯಾಸಂಗ ವಿಭಾಗದ ಹಿರಿಯ ಸದಸ್ಯರು ಅಥವಾ ಪ್ರಾಧ್ಯಾಪಕರನ್ನು ಮಾತ್ರ ಆ ಹುದ್ದೆಗೆ ನೇಮಿಸಬೇಕು. ಕಾಲೇಜು ಶಿಕ್ಷಣ ಇಲಾಖೆ ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದ ಕಾಲೇಜುಗಳ ಬೋಧಕರನ್ನು ಈ ಹುದ್ದೆಗೆ ನೇಮಿಸಲು ಅವಕಾಶವಿಲ್ಲ ಎಂದು ಪತ್ರದಲ್ಲಿ ನಾರಾಯಣಸ್ವಾಮಿ ಉಲ್ಲೇಖಿಸಿದ್ದಾರೆ.

Also Read
ಬೆಳೆಗಾರರ ರಕ್ಷಣೆಗೆ ಕಾನೂನು ತಿದ್ದುಪಡಿ, ಶ್ರೀಗಂಧ ಮಂಡಳಿ ಸ್ಥಾಪನೆ: ಸಚಿವ ರಾಮಲಿಂಗಾರೆಡ್ಡಿ ಭರವಸೆ - Sandalwood Board
Cancel Prof. B.K. Kempegowda’s appointment

ಹಿಂದೆ ಪ್ರೊ.ಬಿ.ಕೆ. ಕೆಂಪೇಗೌಡ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ನಂಜನಗೂಡು ಕ್ಷೇತ್ರದ ಶಾಸಕ ಮತ್ತು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಸಭೆ ನಡೆಸಿ ಕೆಲ ನಿರ್ದೇಶನಗಳ ಆಧಾರದಲ್ಲಿ ಅವರನ್ನು ಪ್ರಾಂಶುಪಾಲ ಹುದ್ದೆಯಿಂದ ಬದಲಾವಣೆ ಮಾಡಿರುವುದು ತಿಳಿದುಬಂದಿದೆ. ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ವಿಶೇಷ ಅನುದಾನ ದುರುಪಯೋಗಪಡಿಸಿಕೊಂಡ ಆರೋಪವಿದೆ. ಇಂತಹ ಆರೋಪಗಳು ಮತ್ತು ನೇಮಕಾತಿಯ ನಿಯಮಬದ್ಧತೆ ಬಗ್ಗೆ ಪ್ರಶ್ನೆಗಳು ಉದ್ಬವಿಸಿರುವ ಹಿನ್ನೆಲೆಯಲ್ಲಿ ಅವರ ನೇಮಕಾತಿ ರದ್ದುಪಡಿಸಬೇಕು ಎಂದು ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.