ನಟ ರಜನಿಕಾಂತ್​, ಧನುಷ್​ ಮನೆಗಳಿಗೆ ಬಾಂಬ್​ ಬೆದರಿಕೆ! | Bomb Threat

Bbau (86)
Published on

ತಮಿಳುನಾಡು: ತಮಿಳು ನಟರಾದ ರಜನಿಕಾಂತ್ ಮತ್ತು ಧನುಷ್ ಅವರ ಮನೆಗಳಿಗೆ ಬಾಂಬ್ ಬೆದರಿಕೆ(Bomb Threat) ಕರೆ ಬಂದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ರಜನಿಕಾಂತ್ ಮತ್ತು ಧನುಷ್ ಅವರ ನಿವಾಸಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಅಪರಿಚಿತ ವ್ಯಕ್ತಿಗಳು ತಮಿಳುನಾಡು ಡಿಜಿಪಿಗೆ ಇಮೇಲ್‌ಗಳನ್ನು ಕಳುಹಿಸಿದ್ದಾರೆ. ಇಮೇಲ್ ಸ್ವೀಕರಿಸಿದ ನಂತರ, ತೇನಾಂಪೇಟೆ ಪೊಲೀಸರು ಬಾಂಬ್ ಪತ್ತೆ ದಳದೊಂದಿಗೆ ರಜನಿಕಾಂತ್ ಅವರ ಮನೆಗೆ ಭದ್ರತಾ ಪರಿಶೀಲನೆಗಾಗಿ ಹೋಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ನಟನ ಭದ್ರತಾ ಸಿಬ್ಬಂದಿ ಸ್ಫೋಟಕವನ್ನು ಇರಿಸಲು ಯಾವುದೇ ವ್ಯಕ್ತಿ ಮನೆಗೆ ಪ್ರವೇಶಿಸಿಲ್ಲ ಎಂದು ಅವರಿಗೆ ತಿಳಿಸಿದ್ದಾರೆ.

ಇಮೇಲ್‌ಗಳಲ್ಲಿ ಹೆಸರಿಸಲಾದ ಇತರರ ಮನೆಗಳನ್ನು ಸಹ ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ಪರಿಶೀಲಿಸಿದಾಗ ಯಾವುದೇ ಬಾಂಬ್​ ಪತ್ತೆಯಾಗಿಲ್ಲ. ಅಲ್ಲದೆ, ಅದು ಸುಳ್ಳು ಮೇಲ್​ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net