ಅನಂತ್ ಅಂಬಾನಿ, ರಾಧಿಕಾಗೆ ಕಾಸ್ಟ್ಲಿ​​ಗಿಫ್ಟ್​ ಕೊಟ್ಟ ಸ್ಟಾರ್​ ನಟ-ನಟಿಯರು; ಕಾರು, ಖಾಸಗಿ ಜೆಟ್,60 ಲಕ್ಷ ರೂ. ಬೆಲೆ ಚಿನ್ನದ ಪೆನ್...

Anant Ambani Radhika Merchant
Published on

ಮುಂಬೈ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನಡದಿರುವುದು ಗೊತ್ತೆ ಇದೆ. ಈ ಸಂಭ್ರಮದ ನಂತರ ನವದಂಪತಿ ದೊರೆತ ಸಾಲು ಸಾಲು ಉಡುಗೊರೆಗಳ ಪಟ್ಟಿಯು ಹೊರಬಂದಿದೆ.

ಬಾಲಿವುಡ್ ಸೆಲೆಬ್ರಿಟಿಗಳು ಅನಂತ್ ಮತ್ತು ರಾಧಿಕಾಗೆ ಕೋಟ್ಯಂತರ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಯಾರೆಲ್ಲಾ ಯಾವ ಉಡುಗೊರೆಗಳನ್ನು ನೀಡಿದ್ದಾರೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ....

ಬಾಲಿವುಡ್​ನಟ​​ ಶಾರುಖ್ ಖಾನ್ ಫ್ರಾನ್ಸ್​ನಲ್ಲಿ 40 ಕೋಟಿ ರೂ. ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟನ್ನು ಅನಂತ್​ ಅಂಬಾನಿ ಜೋಡಿಗೆ ಗಿಫ್ಟ್ ಕೊಟ್ಟಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಬಚ್ಚನ್ ಕುಟುಂಬ ನೀಡಿದ ಉಡುಗೊರೆಯು ಕಮ್ಮಿಯದ್ದೇನಲ್ಲ. ನವವಧು ರಾಧಿಕಾಗೆ 30 ಕೋಟಿ ಬೆಲೆಬಾಳುವ ಹಸಿರು ಕಲ್ಲಿನ ನೆಕ್ಲೇಸ್ ನೀಡಿದ್ದಾರೆ. ಆಲಿಯಾ ಭಟ್ ಹಾಗೂ ರಣಭೀರ್ ಕಪೂರ್ 9 ಕೋಟಿ ಮೌಲ್ಯದ ಮರ್ಸಿಡಿಸ್ ಕಾರ್, ದೀಪಿಕಾ ಹಾಗೂ ರಣವೀರ್ ಸಿಂಗ್ 20 ಕೋಟಿಯ ಕಸ್ಟಮೈಸ್ಡ್ ರೋಲ್ಸ್ ರಾಯ್ಸ್, ಕತ್ರಿನಾ ಮತ್ತು ವಿಕ್ಕಿ ರಾಧಿಕಾಗೆ 19 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ನೆಕ್ಲೇಸ್, ಕಿಯಾರಾ ಹಾಗೂ ಸಿದ್ಧಾರ್ಥ್​ 25 ಲಕ್ಷ ರೂಪಾಯಿ ಬೆಲೆಬಾಳುವ ಹ್ಯಾಂಡ್ ಮೇಡ್ ಶಾಲು, ಅದೇ ರೀತಿ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝಕರ್ ಬರ್ಗ್ 300 ಕೋಟಿ ರೂಪಾಯಿ ಮೌಲ್ಯದ ಖಾಸಗಿ ಜೆಟ್ ನೀಡಿದ್ದಾರೆ.

ಅಕ್ಷಯ್ ಕುಮಾರ್,ದಂಪತಿಗೆ ಅನನ್ಯ ಉಡುಗೊರೆಯನ್ನು ನೀಡಿದ್ದಾರೆ. ಅನಂತ್ ಮತ್ತು ರಾಧಿಕಾ ಅವರಿಗೆ 60 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪೆನ್ನನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಲ್ಮಾನ್ ಖಾನ್ ಅನಂತ್ ಮತ್ತು ರಾಧಿಕಾ ಅವರಿಗೆ 15 ಕೋಟಿ ರೂಪಾಯಿ ಮೌಲ್ಯದ ಹೊಸ ಸ್ಪೋರ್ಟ್ಸ್ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ

ಅಮೆಜಾನ್ ಸಿಇಒ ಜೆಫ್ ಬೆಜೋಸ್ 11.5 ಕೋಟಿ ಬೆಲೆಬಾಳುವ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದರೆ ಈ ಕುರಿತಾಗಿ ಸುದ್ದಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net