

ಬರ ಸರ್ವಪಕ್ಷ ನಿಯೋಗದ ಜತೆ ಬಿಜೆಪಿ ನಾಯಕರು ಬರಲ್ಲ ಎನ್ನುವ ವಿಚಾರ.
ಬಿಜೆಪಿ ನಾಯಕರು ಬರಬೇಕು ಇದರಿಂದ ಕೇಂದ್ರಕ್ಕೆ ಮನವರಿಕೆ ಮಾಡೋದು ಸುಲಭವಾಗುತ್ತದೆ.
ರೈತರ ಮೇಲೆ ಬಿಜೆಪಿ ನಾಯಕರಿಗೆ ಕಾಳಜಿ ಇಲ್ಲ ಎಂದು ಡಿಸಿಎಂ ಪರಮೇಶ್ವರ್ ಅವರು ಕಿಡಿಕಾರಿದರು
ಬೆಂಗಳೂರು: ಬರ ಸರ್ವಪಕ್ಷ ನಿಯೋಗದ ಜತೆ ಬಿಜೆಪಿ ನಾಯಕರು ಬರಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ಉಲ್ಲೇಖಿಸಿ ಮಾತನಾಡಿದ ಡಿಸಿಎಂ ಪರಮೇಶ್ವರ್ ಅವರು, ಬರ ನಿಯೋಗ ಜೊತೆ ಎಲ್ಲರೂ ಬರಬೇಕು. ಆದರೆ ಬಿಜೆಪಿಯವ್ರು ಬರಲ್ಲ ಅಂದ್ರೆ ಹೇಗೆ?. ಬಿಜೆಪಿ(BJP) ಸರ್ಕಾರ ಕೇಂದ್ರದಲ್ಲಿದೆ, ಇಲ್ಲಿಂದ ಬಿಜೆಪಿಯವ್ರು ಬಂದರೆ ಹೆಚ್ಚಿನ ರೀತಿಯಲ್ಲಿ ಸಹಾಯ ಆಗುತ್ತೆ. ಬರ ಪಕ್ಷ ನೋಡಿ ಬರುತ್ತಾ ಎಂದು ಕಿಡಿಕಾರಿದರು
ರಾಜ್ಯದಲ್ಲಿ ಕಾಡುತ್ತಿರುವ ಬರ ಸಮಸ್ಯೆ ಮತ್ತು ಬರ ಅಧ್ಯಯನಕ್ಕೆ ಆಗಮಿಸುತ್ತಿರುವ ಕೇಂದ್ರ ತಂಡಗಳು, ಸರ್ವಪಕ್ಷ ನಿಯೋಗ ಹಾಗೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಡಿಸಿಎಂ ಪರಮೇಶ್ವರ್ ಅವರು ಬೆಂಗಳೂರಿನಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಬರ ಪರಿಶೀಲನೆಗಾಗಿ ಕೇಂದ್ರದಿಂದ ಮೂರು ತಂಡಗಳು ಆಗಮಿಸುತ್ತಿದ್ದು, ರಾಜ್ಯದಲ್ಲಿ ಸಮಗ್ರ ಅಧ್ಯಯನ ನಡೆಸಿ ವರದಿ ನೀಡಲಿವೆ. ಈಗಾಗಲೇ ಕೇಂದ್ರಕ್ಕೆ ಪ್ರಾಥಮಿಕ ಮನವಿ ಸಲ್ಲಿಸಲಾಗಿದ್ದು, ಇದರ ಆಧಾರದ ಮೇಲೆ ಅಧ್ಯಯನ ನಡೆಯಲಿದೆ. ಮತ್ತೊಂದು ಮನವಿಯನ್ನು ಸಹ ಸಲ್ಲಿಸಲಾಗುವುದು ಎಂದು ಹೇಳಿದರು. ಮುಂದುವರೆದು
ಬರ ಸರ್ವಪಕ್ಷ ನಿಯೋಗದ ಜತೆ ಬರಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ಹೇಳಿದ ವಿಚಾರವಾಗಿ ಮಾತನಾಡಿದ ಡಿಸಿಎಂ ಪರಮೇಶ್ವರ್ ಅವರು, ಬರ ನಿಯೋಗ ಜೊತೆ ಎಲ್ಲರೂ ಬರಬೇಕು. ಆದರೆ ಬಿಜೆಪಿಯವ್ರು ಬರಲ್ಲ ಅಂದ್ರೆ ಹೇಗೆ?. ಬಿಜೆಪಿ ಸರ್ಕಾರ ಕೇಂದ್ರದಲ್ಲಿದೆ, ಇಲ್ಲಿಂದ ಬಿಜೆಪಿಯವ್ರು ಬಂದರೆ ಹೆಚ್ಚಿನ ರೀತಿಯಲ್ಲಿ ಸಹಾಯ ಆಗುತ್ತೆ ಎಂದು ಹೇಳಿದರು.
ಮುಂದುವರೆದು, ಇನ್ನೊಂದಷ್ಟು ತಾಲ್ಲೂಕುಗಳ ಗ್ರೌಂಡ್ ಟ್ರೂತಿಂಗ್ ನಡೀತಿದೆ. ಅದಾದ ಮೇಲೆ ಕೇಂದ್ರಕ್ಕೆ ಸಮಗ್ರ ವರದಿ ಕೊಡ್ತೇವೆ. ಬಿಜೆಪಿಯವರನ್ನು ಇನ್ನೊಮ್ಮೆ ಕರೀತೇವೆ. ಅವರು ಬರದಿದ್ರೆ ಏನೂ ಮಾಡಕ್ಕಾಗಲ್ಲ, ಅವರಿಗೆ ರೈತರ ಮೇಲೆ ಕಾಳಜಿ ಇಲ್ಲ ಎನ್ನುವುದನ್ನು ಗೊತ್ತಾಗುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬರ ಪಕ್ಷ ನೋಡಿ ಬರುತ್ತಾ? ಯಾವುದೋ ಪಕ್ಷಕ್ಕೆ ಬರ ಸೀಮಿತ ಅಲ್ಲ. ಬಿಜೆಪಿ ಅವರೂ ಬಂದರೆ ಅನುಕೂಲ ಆಗುತ್ತೆ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಕೇಂದ್ರಕ್ಕೆ ಬರ ಬಗ್ಗೆ ಪರಿಣಾಮಕಾರಿಯಾಗಿ ಅವರೂ ಮನವರಿಕೆ ಮಾಡಬಹುದು. ಸಮಗ್ರ ಬರ ವರದಿಯನ್ನು ಅಕ್ಟೋಬರ್ ಮೊದಲ ವಾರದೊಳಗೆ ಕೇಂದ್ರಕ್ಕೆ ಕಳಿಸ್ತೇವೆ. ಕೇಂದ್ರ ಬರಿಹಾರ ಕೊಡದಿದ್ದರೆ ಮುಂದೇನು ಮಾಡಬೇಕು ನೋಡ್ತೇವೆ. ಕಳೆದ ಸಲ ಸುಪ್ರೀಂಕೋರ್ಟ್ ಗೆ ಹೋಗಿದ್ವಿ, ಈ ಸಲ ಅದಕ್ಕೆ ಅವಕಾಶ ಆಗಲ್ಲ ಅನ್ಕೋತೇವೆ ಎಂದು ಹೇಳಿದರು.
ಗ್ಯಾರಂಟಿಗಳಿಗೆ ಸ್ವಪಕ್ಷದ ನಾಯಕರಿಂದಲೇ ಅಪಸ್ವರ ಎದ್ದಿರುವ ಬಗ್ಗೆ ಮಾತನಾಡಿದ ಅವರು ಕೆಲವರು ಹೇಳಿಕೆ ಕೊಡ್ತಿದ್ದಾರೆ ಅಷ್ಟೇ. ಆದರೆ ಗ್ಯಾರಂಟಿಗೆ ಹೆಚ್ಚು ಹಣ ವೆಚ್ಚವಾಗುತ್ತದೆ ಎನ್ನುವುದು ಕಾಮನ್ ಸೆನ್ಸ್ ವಿಚಾರ. ಅದು ಎಲ್ಲರಿಗೂ ಗೊತ್ತಿದೆ. ಸಹಜವಾಗಿ ಹಣಕಾಸು ಪರಿಸ್ಥಿತಿ ಮೇಲೆ ಒತ್ತಡ ಬರುತ್ತೆ. ಆದರೂ ಇಷ್ಟು ವರ್ಷ ಕೊಟ್ಕೊಂಡು ಬಂದಿದೀವಲ್ಲ. ಈಗಲೂ ಗ್ಯಾರಂಟಿಗಳು ಮುಂದುವರೆಯುತ್ತವೆ. ಹಣಕಾಸು ಹೊರೆ ಆದರೂ ಅದನ್ನು ನಿರ್ವಹಣೆ ಮಾಡಿದ್ದೀವಿ. ಮೂರು ವರ್ಷದಿಂದಲೂ ಹಣಕಾಸು ವಿಷಯ ನಿರ್ವಹಣೆ ಮಾಡಿದೀವಿ, ಮುಂದೆಯೂ ಮಾಡ್ತೀವಿ ಎಂದು ಅವರು ಹೇಳಿದರು, (ಏಜೆನ್ಸೀಸ್).