BBKT3: ಮಂಜನಿಗೆ ಅಮ್ಮನಿಂದ ಖಡಕ್‌ ಕಿವಿಮಾತು! ಫೋನ್‌ನಲ್ಲೇ ಕಣ್ಣೀರಿಟ್ಟ ಮಾಡ್ರನ್​ ಕವಿ?

ಬಿಗ್‌ ಬಾಸ್‌ ಮನೆಯಲ್ಲಿ ಮಂಜ ಬಳಸಿದ ಅವಾಚ್ಯ ಪದಗಳಿಗೆ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತ ಫೋನ್‌ನಲ್ಲಿ ಅಮ್ಮನ ಧ್ವನಿ ಕೇಳುತ್ತಿದ್ದಂತೆ ಮಂಜ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
advice from Mom to Manja
ಫೋನ್‌ನಲ್ಲೇ ಕಣ್ಣೀರಿಟ್ಟ ಬಿಗ್‌ ಬಾಸ್‌ ಸ್ಪರ್ಧಿ ಮಂಜ
Published on: 

Bigg Boss Kannada: ಬಿಗ್‌ ಬಾಸ್‌ ಮನೆಯಲ್ಲಿ ಮಂಜ ಬಳಸಿದ ಅವಾಚ್ಯ ಪದಗಳ ವಿಚಾರಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಮಗನ ಮಾತಿನ ಶೈಲಿಗೆ ಬೇಸರಗೊಂಡ ತಾಯಿ, ಫೋನ್‌ ಕರೆ ಮೂಲಕವೇ ಮಂಜನಿಗೆ ಬುದ್ಧಿಮಾತು ಹೇಳಿದ್ದಾರೆ. ಅಮ್ಮನ ಧ್ವನಿ ಕೇಳುತ್ತಿದ್ದಂತೆ ಮಂಜ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ಭಾವುಕ ಕ್ಷಣದ ಪ್ರೋಮೊವನ್ನು ಕಲರ್ಸ್‌ ಕನ್ನಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಪ್ರೋಮೊದಲ್ಲಿ ಕಿಚ್ಚ ಸುದೀಪ್‌ ಅವರು ಮಂಜನನ್ನು ಕನ್ಫೆಷನ್‌ ರೂಮ್‌ಗೆ ಹೋಗುವಂತೆ ಹೇಳುತ್ತಾರೆ. ಅಲ್ಲಿಗೆ ಹೋದ ಮಂಜ, ಟೇಬಲ್‌ ಮೇಲಿದ್ದ ಪತ್ರವನ್ನು ಓದುತ್ತಾರೆ. ತಾವು ಆಡಿದ ಮಾತುಗಳಿಂದ ಕನ್ನಡದ ಜನರಿಗೆ ಎಷ್ಟು ನೋವಾಗಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಸಂದೇಶ ನೀಡಲಾಗಿದೆ ಎಂಬ ಮಾಹಿತಿ ಪತ್ರದಲ್ಲಿರುತ್ತದೆ.

ಕನ್ಫೆಷನ್‌ ರೂಮ್‌ನಲ್ಲಿ ಮಂಜನಿಗಾಗಿ ಕಾದಿತ್ತು ಅಮ್ಮನ ಕರೆ

ಪತ್ರ ಓದಿದ ಬಳಿಕ ಮಂಜನಿಗೆ ಅವರ ತಾಯಿಯ ಫೋನ್‌ ಕರೆ ಬರುತ್ತದೆ. ಮಗ ಬಳಸುತ್ತಿರುವ ಪದಗಳು ಮತ್ತು ಮಾತನಾಡುವ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ತಾಯಿ, ಬಿಗ್‌ ಬಾಸ್‌ ಮನೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಪ್ರೀತಿಯಿಂದಲೇ ಮನವರಿಕೆ ಮಾಡಿಕೊಟ್ಟಿದ್ದಾರೆ.

ನಿನ್ನ ಮಾತು ಕೇಳಿ ನನಗೆ ಬೇಸರ ಆಗಿದೆ

ಮಂಜನಿಗೆ ಕರೆ ಮಾಡಿದ ತಾಯಿ, ‘ಮಂಜ, ನೀನು ಮಾತನಾಡುತ್ತಿರುವ ರೀತಿ ಸರಿಯಿಲ್ಲ. ಈ ಕಾರ್ಯಕ್ರಮವನ್ನು ಇಡೀ ಕುಟುಂಬವೇ ಕುಳಿತು ನೋಡುತ್ತೆ. ಮನೆಯೊಳಗೆ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಆಟ ಆಡಬೇಕು. ಹೀಗೆ ಕೆಟ್ಟ ಪದಗಳನ್ನು ಬಳಸಬಾರದು. ನಿನ್ನ ಮಾತುಗಳನ್ನು ಕೇಳಿ ನನಗೆ ಬೇಸರವಾಗಿದೆ. ನಿನ್ನ ಮಾತುಗಳಿಂದ ಬೇರೆಯವರಿಗೂ ನೋವಾಗಿರುತ್ತೆ’ ಎಂದು ಬುದ್ಧಿಮಾತು ಹೇಳಿದ್ದಾರೆ.

ಅಮ್ಮನ ಮಾತುಗಳನ್ನು ಕೇಳುತ್ತಿದ್ದಂತೆ ಮಂಜ ಭಾವುಕರಾಗಿದ್ದಾರೆ. ಕಣ್ಣೀರು ಹಾಕುತ್ತಲೇ ತಾಯಿಯ ಮಾತುಗಳನ್ನು ಕೇಳಿಸಿಕೊಂಡಿದ್ದಾರೆ. ಈ ಭಾವುಕ ಕ್ಷಣ ಇದೀಗ ಪ್ರೋಮೊದಲ್ಲಿ ಗಮನ ಸೆಳೆಯುತ್ತಿದೆ.

ಅವಾಚ್ಯ ಪದ ಬಳಸಿದ್ದಕ್ಕೆ ಮತ್ತೆ ಕಳಪೆ ಪಟ್ಟ

ಅಗ್ನಿಪರೀಕ್ಷೆ ಮೂಲಕ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿರುವ ಮಂಜ, ಅವಾಚ್ಯ ಪದಗಳ ಬಳಕೆಯಿಂದಲೂ ಸುದ್ದಿಯಲ್ಲಿದ್ದಾರೆ. ಮನೆಯೊಳಗೆ ಸ್ಪರ್ಧಿಗಳು ಪರಸ್ಪರ ನಿಂದಿಸುವುದು ಮತ್ತು ಕೆಟ್ಟ ಪದಗಳನ್ನು ಬಳಸುವ ವಿಚಾರ ಚರ್ಚೆಗೆ ಕಾರಣವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಿಯಮ ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಮಂಜಗೆ ಈ ವಾರವೂ ಕಳಪೆ ಪಟ್ಟ ಸಿಕ್ಕಿದೆ.

ಇದನ್ನೂ ಓದಿ: ಬಿರುಗಾಳಿ ಅಬ್ಬರಕ್ಕೆ ಹರಿದ್ವಾರ ತತ್ತರ; ಕ್ರಿಕೆಟ್‌ ಬಾಲ್‌ ಗಾತ್ರದ ಆಲಿಕಲ್ಲುಗಳಿಂದ ವಾಹನಗಳ ಗಾಜು ಪೀಸ್‌ ಪೀಸ್‌! | Uttarakhand Hailstorm

ಅಮ್ಮನ ಕಿವಿಮಾತು ಕೇಳಿದ ಬಳಿಕ ಮಂಜ ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರಾ? ಮುಂದಿನ ದಿನಗಳಲ್ಲಿ ಬಿಗ್‌ ಬಾಸ್‌ ಮನೆಯಲ್ಲಿ ಅವರ ಆಟ ಹೇಗಿರಲಿದೆ? ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net