ಅಕ್ಟೋಬರ್‌ನಲ್ಲಿ ಸಾಲು ಸಾಲು ರಜೆ: ಗಾಂಧಿ ಜಯಂತಿ, ದಸರಾ ಸೇರಿ ಈ ದಿನಗಳಂದು ಬ್ಯಾಂಕ್​​​​​ ಬಂದ್​..Bank Holiday

ಅಕ್ಟೋಬರ್‌ನಲ್ಲಿ ಸಾಲು ಸಾಲು ರಜೆ: ಗಾಂಧಿ ಜಯಂತಿ, ದಸರಾ ಸೇರಿ ಈ ದಿನಗಳಂದು ಬ್ಯಾಂಕ್​​​​​ ಬಂದ್​..Bank Holiday
Published on: 
  • ಅಕ್ಟೋಬರ್​ನಲ್ಲಿ ಒಟ್ಟು ಒಂಬತ್ತು ದಿನ ಬ್ಯಾಂಕ್​ಗಳಿಗೆ ರಜೆ

  • ಅಕ್ಟೋಬರ್ 26ರಿಂದ ಬ್ಯಾಂಕ್​ ಮುಷ್ಕರವಿದ್ರೆ ಸಂಕಷ್ಟ

  • ಗಾಂಧಿ ಜಯಂತಿ, ದಸರಾ ಸೇರಿದಂತೆ ಈ ಎಲ್ಲ ದಿನ ಬ್ಯಾಂಕ್ ಇರಲ್ಲ

ಅಕ್ಟೋಬರ್​ನಲ್ಲಿ ಹೆಚ್ಚು ಬ್ಯಾಂಕ್​ ಕೆಲಸಗಳನ್ನು ನೀವೇನಾದ್ರೂ ಇಟ್ಟುಕೊಂಡಿದ್ದರೆ ತಪ್ಪದೆ ಈ ಸುದ್ದಿ ಓದಿ. ಯಾಕೆಂದ್ರೆ ಗಾಂಧಿ ಜಯಂತಿ, ದುರ್ಗಾ ಮಾತೆಯ ಪೂಜೆ, ದಸರಾ ಸೇರಿದಂತೆ ಸಾಲು ಸಾಲು ಹಬ್ಬಗಳು ಈ ಮಾಸದಲ್ಲಿ ಇದ್ದು, ಆರ್​ಬಿಐ ಕ್ಯಾಲೆಂಡರ್​ ಪ್ರಕಾರ 11 ದಿನ ಬ್ಯಾಂಕ್​ಗೆ ರಜೆ ಇರಲಿದೆ. ಯಾವ್ಯಾವದ ದಿನ ಬ್ಯಾಂಕ್​ಗಳಿಗೆ ರಜೆ ಇರಲಿದೆ ಎಂದು ನೋಡೋಣ ಬನ್ನಿ.

ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಬ್ಯಾಂಕಿಂಗ್ ಸೇವೆಗಳು ಹಬ್ಬ, ಎರಡು ಮತ್ತು ನಾಲ್ಕನೇ ಶನಿವಾರ ಸೇರಿದಂತೆ ಭಾನುವಾರದ ದಿನಗಳಲ್ಲಿ ಬ್ಯಾಂಕ್​ ಬಂದ್ ಇರಲಿದ್ದು, ಗ್ರಾಹಕರು ಆನ್‌ಲೈನ್ ಮತ್ತು ಯುಪಿಐ ಮೂಲಕ ಡಿಜಿಟಲ್ ಸೇವೆಗಳನ್ನು ಎಂದಿನಂತೆ ಬಳಸಿಕೊಳ್ಳಬಹುದು.

ಅಕ್ಟೋಬರ್​ನಲ್ಲಿ ಯಾವ್ಯಾವ ದಿನ ಬ್ಯಾಂಕ್ ರಜೆ ಇರಲಿದೆ?

  • ಅಕ್ಟೋಬರ್ 2, 2026 (ಶುಕ್ರವಾರ): ಮಹಾತ್ಮ ಗಾಂಧಿ ಜಯಂತಿ (ರಾಷ್ಟ್ರೀಯ ರಜೆ) - ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬ್ಯಾಂಕ್‌ಗಳು ಆದಿನ ಮುಚ್ಚಲ್ಪಟ್ಟಿರುತ್ತದೆ.

  • ಅಕ್ಟೋಬರ್ 10, 2026 (ಶನಿವಾರ): ಮಹಾಲಯ ಅಮಾವಾಸ್ಯೆ - ಕರ್ನಾಟಕ ಮತ್ತು ಕೋಲ್ಕತ್ತಾದಲ್ಲಿ ಬ್ಯಾಂಕ್‌ಗಳಿಗೆ ರಜೆ.

  • ಅಕ್ಟೋಬರ್ 11 ಭಾನುವಾರ; ದೇಶದ ಎಲ್ಲ ಬ್ಯಾಂಕ್​ಗಳಿಗೆ ಈ ದಿನ ರಜೆ ಇರಲಿದೆ.

  • ಅಕ್ಟೋಬರ್ 18 ಭಾನುವಾರ: ದೇಶದ ಎಲ್ಲ ಬ್ಯಾಂಕ್​ಗಳಿಗೆ ಈ ದಿನ ರಜೆ ಇರಲಿದೆ.

  • ಅಕ್ಟೋಬರ್ 19, 2026 (ಸೋಮವಾರ): ದಸರಾ (ಮಹಾಷ್ಟಮಿ)/ಮಹಾ ನವಮಿ/ಆಯುಧ ಪೂಜೆ/ದುರ್ಗಾ ಪೂಜೆ ಸಲುವಾಗಿ ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯದಲ್ಲಿ ರಜೆ ಇರಲಿದೆ

  • ಅಕ್ಟೋಬರ್ 20, 2026 (ಮಂಗಳವಾರ): ದಸರಾ (ವಿಜಯ ದಶಮಿ)/ಮಹಾನವಮಿ/ಆಯುಧ ಪೂಜೆ - ಮಣಿಪುರ ಮತ್ತು ಸಿಕ್ಕಿಂ ಹೊರತುಪಡಿಸಿ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

  • ಅಕ್ಟೋಬರ್ 21, 2026 (ಬುಧವಾರ): ವಿಜಯ ದಶಮಿ/ದುರ್ಗಾ ಪೂಜೆ -ತ್ರಿಪುರ, ಕರ್ನಾಟಕ, ಸಿಕ್ಕಿಂ, ಅಸ್ಸಾಂ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್ ರಜೆ.

  • ಅಕ್ಟೋಬರ್​ 24 ನಾಲ್ಕನೇ ಶನಿವಾರ

  • ಅಕ್ಟೋಬರ್​ 25 ಭಾನುವಾರ

  • ಅಕ್ಟೋಬರ್ 26ರಿಂದ ಮುಷ್ಕರ?

ಅಕ್ಟೋಬರ್ ಅಂತ್ಯದಲ್ಲಿ ಬ್ಯಾಂಕ್​ ಮುಷ್ಕರವಿದ್ದರೆ ಗ್ರಾಹಕರು ಸಮಸ್ಯೆ ಎದುರಿಸಬೇಕಾಗುತ್ತದೆ. ಐದು ದಿನಗಳ ಕೆಲಸದ ವಾರವನ್ನು ನಿಗದಿಪಡಿಸುವಂತೆ ಒತ್ತಾಯಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಪ್ರತಿಭಟನೆ ನಡೆಸಲು ನಿರ್ಧರಿಸಿದರೆ. ಈ ಮುಷ್ಕರಕ್ಕೆ ಒಪ್ಪಿಗೆ ಸಿಕ್ಕರೆ, ಬ್ಯಾಂಕ್ ಶಾಖೆಯ ಕಾರ್ಯಾಚರಣೆಗಳ ಮೇಲೆ ಸಮಸ್ಯೆಯುಂಟಾಗಬಹುದು.

ರಜಾ ದಿನಗಳಲ್ಲೂ ಡಿಜಿಟಲ್ ಬ್ಯಾಂಕಿಂಗ್ ಸೇವೆ ಲಭ್ಯ

ಬ್ಯಾಂಕ್ ರಜೆಗಳಿದ್ದರೂ ಗ್ರಾಹಕರು ಆತಂಕಪಡಬೇಕಿಲ್ಲ. ಆನ್‌ಲೈನ್ ಬ್ಯಾಂಕಿಂಗ್, ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು ಮತ್ತು ಯುಪಿಐಆಧಾರಿತ ಪಾವತಿಗಳ ಮೂಲಕ ಮನೆಯಿಂದಲೇ ಬಹುತೇಕ ಎಲ್ಲಾ ಬ್ಯಾಂಕಿಂಗ್ ಕಾರ್ಯಾಚರಣೆಗಳನ್ನು ನಡೆಸಬಹುದು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net