

ರಿಪ್ಪನ್‌ಪೇಟೆ: ಸಮೀಪದ ಹೆದ್ದಾರಿಪುರ ಮಹಿಳಾ ಹಾಲು ಉತ್ಪಾದಕ ಸಹಕಾರ ಸಂಘದ ಕೇಂದ್ರಕ್ಕೆ ಹಾಲು ತರುವಾಗ ಬೈಕ್ ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡಿರುವ ಸಂತ್ರಸ್ತ ಕಲ್ಲುಕೊಪ್ಪದ ಸೋಮಣ್ಣ ಅವರ ಮನೆಗೆ ತೆರಳಿ ಶಿಮುಲ್ ಅಧ್ಯಕ್ಷ ಎಚ್.ಎನ್.ವಿದ್ಯಾಧರ ಪರಿಹಾರದ ಚೆಕ್ ವಿತರಿಸಿದರು. ಹೆದ್ದಾರಿಪುರ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯೆ ಇಂದಿರಾ ಅವರ ಪತಿ ಸೋಮಣ್ಣ ಕೆಲ ತಿಂಗಳುಗಳ ಹಿಂದೆ ಸಂಘಕ್ಕೆ ಹಾಲು ಹಾಕಲು ಬೈಕ್‌ನಲ್ಲಿ ತೆರಳುತ್ತಿರುವಾಗ ಅವಘಡ ಉಂಟಾಗಿ ಒಂದು ಕಾಲು ಕಳೆದುಕೊಂಡಿದ್ದಾರೆ. ಹಾಗಾಗಿ ಅಧ್ಯಕ್ಷರು ಶಿಮುಲ್‌ನಿಂದ ಮತ್ತು ವೈಯಕ್ತಿಕವಾಗಿ ನೆರವು ನೀಡಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಎನ್.ಸುಧೀರ್, ನಿರ್ದೇಶಕ ಎಂ.ಎಂ.ಪರಮೇಶ್, ಸಂಘದ ಅಧ್ಯಕ್ಷೆ ಅರ್ಚನಾ ಅಭಿಷೇಕ್, ಶಿಮುಲ್ ಕ್ಷೇತ್ರಾಧಿಕಾರಿ ನವೀನ್ ಇತರರಿದ್ದರು.