ಪರಿಸರ ಮಾಲಿನ್ಯ ತಡೆಯಲು ಹಸಿರು ನೀತಿ ಅಳವಡಿಕೆ ಅಗತ್ಯ

kuvempu vv
ಕುವೆಂಪು ವಿವಿಯಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಪರಿಸರ ಸಂರಕ್ಷಣೆಗೆ ಪೂರಕವಾಗಿರುವ ಅಂಶಗಳ ಕುರಿತು ಮಾಹಿತಿ ಪತ್ರವನ್ನು ಪ್ರೊ.ಶರತ್ ಅನಂತಮೂರ್ತಿ ಬಿಡುಗಡೆ ಮಾಡಿದರು. ಪ್ರೊ.ಇ.ಟಿ.ಪುಟ್ಟಯ್ಯ, ಪ್ರೊ.ಎಸ್.ಎಂ.ಗೋಪಿನಾಥ್, ಎ.ಎಲ್.ಮಂಜುನಾಥ್, ಪ್ರೊ.ಕೆ.ಯೋಗೇಂದ್ರ ಇದ್ದರು.
Published on

ಶಿವಮೊಗ್ಗ: ಪರಿಸರ ಮಾಲಿನ್ಯ ತಡೆಗಟ್ಟುವ ಮೂಲಕ ಹಸಿರು ಆರ್ಥಿಕತೆಯ ಕಡೆಗೆ ತೆರೆದುಕೊಳ್ಳಲು ಭಾರತ ಸಮಗ್ರವಾದ ಹಸಿರು ನೀತಿ ಅಳವಡಿಸಿಕೊಳ್ಳಬೇಕಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಹೇಳಿದರು.

ವಿವಿಯ ಪರಿಸರ ಅಧ್ಯಯನ ವಿಭಾಗದಿಂದ ಪರಿಸರ ಸಂರಕ್ಷಣೆಗೆ ಹಸಿರು ಪರಿಹಾರ ಎಂಬ ವಿಷಯದ ಕುರಿತು ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, 20ನೇ ಶತಮಾನದಿಂದ ಇದುವರೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಊಹಿಸಲಸಾಧ್ಯವಾದ ಆವಿಷ್ಕಾರಗಳು ನಡೆದಿವೆ ಎಂದರು.
ನಾಗರಿಕತೆಯ ರಚನಾತ್ಮಕ ಅಭಿವೃದ್ಧಿಯ ದೃಷ್ಟಿಕೋನದಿಂದ ಆರಂಭವಾಗಿ ಪರಮಾಣು ಸಂಶೋಧನೆಯಂತಹ ಕೆಲವು ಚಟುವಟಿಕೆಗಳು ಮನುಕುಲಕ್ಕೆ ವ್ಯತಿರಿಕ್ತವಾಗಿ ಪರಿಣಮಿಸಿದೆ. ಹೀಗಾಗಿ ಅಸಂಪ್ರದಾಯಿಕ ಇಂಧನ ಮೂಲಗಳ ಬಳಕೆ ಮತ್ತು ಆಟೋಮೊಬೈಲ್ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ತೇಜನ ನೀಡುವುದು ಅವಶ್ಯ ಎಂದು ಅಭಿಪ್ರಾಯಪಟ್ಟರು.
ಗುಲ್ಬರ್ಗ ವಿವಿ ವಿಶ್ರಾಂತ ಕುಲಪತಿ ಪ್ರೊ.ಇ.ಟಿ.ಪುಟ್ಟಯ್ಯ ಮಾತನಾಡಿ, ವಾಯುಮಾಲಿನ್ಯ, ಜಲಮಾಲಿನ್ಯ ನಿಯಂತ್ರಣ, ತ್ಯಾಜ್ಯನಿರ್ವಹಣೆಯಲ್ಲಿ ವಿವಿಧ ಇಲಾಖೆಗಳು, ಖಾಸಗಿ ಸಂಸ್ಥೆಗಳು ಮತ್ತು ನಾಗರಿಕ ಸಂಘಟನೆಗಳ ಸಾಮೂಹಿಕ ಪ್ರಯತ್ನ ಅಗತ್ಯ ಎಂದರು.
ಕುಲಸಚಿವ ಎ.ಎಲ್.ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ.ಎಸ್.ಎಂ.ಗೋಪಿನಾಥ್, ಪ್ರೊ.ಸುನಿಲ್ ನೌತಿಯಾಲ್, ಸುಜಿತ್‌ಕುಮಾರ್ ಡೋಂಗ್ರೆ, ಡಾ.ಶರತ್‌ಚಂದ್ರ, ಪ್ರೊ.ಕೆ.ಯೋಗೇಂದ್ರ, ಪ್ರೊ.ಜೆ.ನಾರಾಯಣ, ಡಾ.ಹೀನಾ ಕೌಸರ್, ಡಾ.ಬಸವರಾಜಪ್ಪ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net