ಕಿರುವಾರ ಎಸ್. ಸುದರ್ಶನ್ ಬೆಂಗಳೂರು
ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿಧ ಮುಖ್ಯರಸ್ತೆಗಳ ಅಕ್ಕಪಕ್ಕದಲ್ಲಿ ತಲೆ ಎತ್ತಿರುವ ಹೋಟೆಲ್, ಡಾಬಾ, ರೆಸ್ಟೋರೆಂಟ್, ಕೈಗಾರಿಕೆಗಳಿಂದ ಅಸಮರ್ಪಕ ಕಸ ವಿಲೇವಾರಿಯಾಗುತ್ತಿದ್ದು, ಹೊರರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರನ್ನು ಕಸದ ರಾಶಿಗಳು ಸ್ವಾಗತಿಸುತ್ತಿವೆ!
ಉತ್ಪತ್ತಿಯಾಗುವ ತ್ಯಾಜ್ಯವನ್ನು ಬೇಕಾಬಿಟ್ಟಿಯಾಗಿ ಚೆಲ್ಲಿ, ಅದಕ್ಕೆ ಬೆಂಕಿ ಇಡುವ ಹೋಟೆಲ್, ಡಾಬಾಗಳು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿಗಳಿಂದ ಪಡೆದ ಟ್ರೇಡ್ ಲೈಸೆನ್ಸ್ನ ಷರತ್ತುಗಳನ್ನು ಪಾಲಿಸದಿರುವುದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ದುರ್ವಾಸನೆ, ಸೊಳ್ಳೆಗಳ ಉತ್ಪತ್ತಿಯಿಂದ ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ.
ಬೆಂಗಳೂರು- ಚೆನ್ನೈ ರಾಷ್ಟ್ರೀಯ ಹೆದ್ದಾರಿ (ಕೋಲಾರ ಮಾರ್ಗ), ಬೆಂ.- ಹೈದರಾಬಾದ್ (ಚಿಕ್ಕಬಳ್ಳಾಪುರ ಮಾರ್ಗ), ಹಾಸನ ಹೆದ್ದಾರಿ, ಬೆಂ.- ತುಮಕೂರು ಹೆದ್ದಾರಿ, ಬಳ್ಳಾರಿ ರಸ್ತೆ ಮುಂತಾದೆಡೆ ಕಸದ ರಾಶಿ ಯಥೇಚ್ಚವಾಗಿ ಕಾಣಿಸುತ್ತಿದ್ದು, ರಾಜಧಾನಿಯಲ್ಲಿ ಕಸದ ನಿರ್ವಹಣೆ ಮಾಡುವ ಸಂಸ್ಥೆಗಳ ಅಸಮರ್ಥತೆಯೂ ಜಗಜ್ಜಾಹೀರಾಗುತ್ತಿದೆ.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕಸವನ್ನು ವಿಂಗಡಿಸಿ ಕಡ್ಡಾಯವಾಗಿ ವಿಲೇವಾರಿ ಮಾಡಬೇಕು. ಅದು ಪರಿಸರದ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕು. ಆದರೆ ಇದನ್ನು ಪಾಲಿಸದೆ ಜೈವಿಕ ಮತ್ತು ನ ತ್ಯಾಜ್ಯವನ್ನು ನಿಯವಾನುಸಾರ ವಿಲೇವಾರಿ ವಾಡದೆ, ಸಾರ್ವಜನಿಕ ಸ್ಥಳ, ಕಾಲುವೆ, ಚರಂಡಿಗೆ ಸುರಿಯಲಾಗುತ್ತಿದೆ. ಇನ್ನು ಕೆಲವರು ಘಟಕಗಳ ತ್ಯಾಜ್ಯವನ್ನು ರಸ್ತೆ ಪಕ್ಕದಲ್ಲಿ ಸುರಿಯುತ್ತಿದ್ದಾರೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಕುರಿತು ಹೋಟೆಲ್, ಕೈಗಾರಿಕೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಹೊಣೆಗಾರಿಕೆ ಮರೆತ ಅಧಿಕಾರಿಗಳು:
ರಸ್ತೆಯ ಪಕ್ಕದ ಹೋಟೆಲ್, ರೆಸ್ಟೋರೆಂಟ್ ಹಾಗೂ ಕೈಗಾರಿಕೆಗಳು ಬೃಹತ್ ತ್ಯಾಜ್ಯ ಉತ್ಪಾದನಾ ವಿಭಾಗಕ್ಕೆ ಸೇರುತ್ತವೆ. ತ್ಯಾಜ್ಯ ವಿಲೇವಾರಿ ನಿಯಮ-2026ರ ಅಡಿಯಲ್ಲಿ ಮೂಲದಲ್ಲೇ ತ್ಯಾಜ್ಯವನ್ನು 4 ರೀತಿ ಬೇರ್ಪಡಿಸಬೇಕು. ಕಸದ ವಾಹನಕ್ಕೆ ನೀಡಬೇಕು. ಪರಿಸರಸ್ನೇಹಿಯಾಗಿ ವಿಲೇವಾರಿ ಮಾಡುತ್ತಿದ್ದಾರೆಯೇ ಎಂಬುದನ್ನು ಸಮಕ್ಷಮ ಪ್ರಾಧಿಕಾರವೂ ಖಚಿತಪಡಿಸಿಕೊಳ್ಳಬೇಕು. ಇದು ಸಮರ್ಪಕವಾಗಿ ಆಗದೆ ಇರುವುದರಿಂದ ನಿಯಮ ಉಲ್ಲಂಘನೆ ನಿರಂತರವಾಗಿದೆ. ಸ್ಥಳೀಯ ಸಂಸ್ಥೆಗಳು ಹಾಗೂ ಹೆದ್ದಾರಿ ಪ್ರಾಧಿಕಾರ ಪರಸ್ಪರ ಸಂಬಂಧವಿಲ್ಲದಂತಿವೆ. ಸಾರ್ವಜನಿಕರು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂಬುದು ಪರಿಸರ ಪ್ರೇಮಿಗಳ ಅಹವಾಲು.
ದಂಡ, ಪರವಾನಿಗೆ ರದ್ದಿಗೂ ಅವಕಾಶ
ತ್ಯಾಜ್ಯ ವಿಲೇ ಹೊಣೆ ಹೊತ್ತ ಸಂಸ್ಥೆಗಳು ಮನೆ, ಸಾರ್ವಜನಿಕ ಸ್ಥಳಗಳಲ್ಲಿನ ಕಸ ತೆರವಿಗೆ ಮಾತ್ರ ಸಿಮೀತವಾಗದೆ ಹೋಟೆಲ್, ಡಾಬಾಗಳಿಂದಲೂ ತ್ಯಾಜ್ಯ ಸಂಗ್ರಹ ಮಾಡಬೇಕು. ವೈಜ್ಞಾನಿಕ ವಿಲೇವಾರಿ ಕುರಿತು ಸೂಚನೆ ನೀಡಬೇಕು. ನಿಯಮ ಪಾಲನೆ ಮಾಡದೆ ಇರುವವರ ವಿರುದ್ಧ ದಂಡ ಅಥವಾ ಪರವಾನಗಿ ರದ್ದುಪಡಿಸಿ ಬಿಸಿ ಮುಟ್ಟಿಸಬಹುದು. ಆದರೆ ಇದ್ಯಾವ ಹೊಣೆಯನ್ನೂ ನಿರ್ವಹಿಸದೇ ಬೇಜವಾಬ್ದಾರಿ ತೋರುವ ಅಧಿಕಾರಿಗಳು ತ್ಯಾಜ್ಯ ಅಕ್ರಮದಲ್ಲಿ ಭಾಗಿಯಾಗಿರಬಹುದೇ ಎಂಬ ಅನುಮಾನಗಳಿಗೆ ಎಡೆಮಾಡಿದೆ.