ಬೈಕ್​ ಸವಾರನ ಮೇಲೆ ಖಾಸಗಿ ಬಸ್ಸು ಹರಿದು ಸಾವು! ಸ್ಥಳೀಯರ ಆಕ್ರೋಶಕ್ಕೆ ಸುಟ್ಟು ಭಸ್ಮವಾದ ಬಸ್ಸು

accident
Published on

ಚೆನ್ನೈ: ತಮಿಳುನಾಡಿನಲ್ಲಿ ಬಸ್ಸು ಮತ್ತು ಬೈಕಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್​ ಸವಾರನ ಮೇಲೆ ಬಸ್ಸು ಹರಿದಿರುವ ಹಿನ್ನೆಲೆಯಲ್ಲಿ ಆತ ಮೃತನಾಗಿದ್ದಾನೆ. ಇನ್ನೋರ್ವ ವ್ಯಕ್ತಿ ಗಂಭೀರ ಗಾಯಾಳುವಾಗಿದ್ದು, ಸ್ಥಳೀಯರ ಆಕ್ರೋಶ ಹೆಚ್ಚಾಗಿದೆ.

ತಾಂಡುರೈ-ಪೂನಮಲ್ಲಿ ಹೈ ರಸ್ತೆಯ ಅಮುತುರ್ಮೇಡು ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಸೋಮವಾರ ಸಂಜೆ 6.15ರ ಸಮಯಕ್ಕೆ ಕಾರ್ತಿಕೇಯನ್​ ಹಾಗೂ ರಾಜೇಂದ್ರನ್​ ಬೈಕ್​ನಲ್ಲಿ ಸಂಸ್ಥೆಯಿಂದ ಮನೆಗೆ ವಾಪಾಸಾಗುತ್ತಿದ್ದರು. ಈ ಸಮಯದಲ್ಲಿ ಖಾಸಗಿ ಬಸ್ಸು ಬೈಕಿಗೆ ಡಿಕ್ಕಿ ಹೊಡೆದಿದೆ. ಕಾರ್ತಿಕೇಯನ್​ ಬಸ್ಸಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಾಜೇಂದ್ರನ್​ ಸ್ಥಿತಿ ಗಂಭೀರವಾಗಿದ್ದು, ಆತನಿಗೆ ಶ್ರೀ ರಾಮಚಂದ್ರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತ ಸಂಭವಿಸುತ್ತಿದ್ದಂತೆ ಗಾಬರಿಯಾದ ಬಸ್ಸಿನ ಚಾಲಕ, ಗಾಡಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸಿಟ್ಟಿಗೆದ್ದ ಸ್ಥಳೀಯರು ಬಸ್ಸಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ ಎಂದು ವರದಿಯಾಗಿದೆ. ಬೆಂಕಿ ಹಚ್ಚುವಾಗ ಬಸ್ಸಿನಲ್ಲಿ ಪ್ರಯಾಣಿಕರಿರಲಿಲ್ಲ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net