33 ಕೋಟಿ ದೇವತೆಗಳ ಆಶೀರ್ವಾದಕ್ಕಾಗಿ ಸಾಹಸ: ಮೈಮೇಲೆ ದನಗಳನ್ನು ಹಾಯಿಸಿಕೊಳ್ಳುವ ವಿಚಿತ್ರ ಪದ್ಧತಿ! | Madhya Pradesh Ritual

ದಸರಾ ಹಬ್ಬದ ಬೆನ್ನಲ್ಲೇ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ವಿಚಿತ್ರ ಆಚರಣೆಯೊಂದು ನಡೆದಿದ್ದು, ಗ್ರಾಮಸ್ಥರು ತಮ್ಮ ಮೈಮೇಲೆ ದನಗಳನ್ನು ಹಾಯ ಬಿಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಭಕ್ತಿ ಮೆರೆದಿದ್ದಾರೆ.
Madhya Pradesh cattle running over devotees
ಮೈಮೇಲೆ ದನಗಳನ್ನು ಹಾಯಿಸಿಕೊಂಡು ಭಕ್ತಿ ಮೆರೆದ ಉಜ್ಜಯಿನಿ ಜನ
Published on: 

Cattle Run Over Devotees: ಮಧ್ಯಪ್ರದೇಶದಲ್ಲಿ ದಸರಾ ಹಬ್ಬದ ಸಂಭ್ರಮದ ಬಳಿಕ ನಡೆದ ವಿಚಿತ್ರ ಆಚರಣೆಯೊಂದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉಜ್ಜಯಿನಿ ಜಿಲ್ಲೆಯ ಭಿದಾವಡ್ ಗ್ರಾಮದಲ್ಲಿ ಗ್ರಾಮಸ್ಥರು ತಮ್ಮ ಮೈಮೇಲೆ ದನಗಳನ್ನು ಹಾಯ ಬಿಟ್ಟು ವಿಶಿಷ್ಟ ರೀತಿಯಲ್ಲಿ ಭಕ್ತಿ ಸಮರ್ಪಿಸಿದ್ದಾರೆ.

ಗೋವುಗಳಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿದ್ದಾರೆ ಎಂಬುದು ಸ್ಥಳೀಯರ ಗಟ್ಟಿಯಾದ ನಂಬಿಕೆ. ದನಗಳು ತಮ್ಮ ಮೈಮೇಲೆ ನಡೆದು ಹೋದರೆ ದೈವಿಕ ಆಶೀರ್ವಾದ ದೊರೆಯುವುದರ ಜತೆಗೆ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಜನರು ನಂಬುತ್ತಾರೆ. ಈ ವಿಶಿಷ್ಟ ಆಚರಣೆಗಾಗಿ ಗ್ರಾಮಸ್ಥರು ಐದು ದಿನಗಳ ಕಾಲ ಕಠಿಣ ಉಪವಾಸವಿಿದ್ದು, ಹಬ್ಬದ ಹಿಂದಿನ ರಾತ್ರಿ ದೇವಸ್ಥಾನದಲ್ಲಿ ಭಜನೆ ಹಾಗೂ ಕೀರ್ತನೆಗಳಲ್ಲಿ ಪಾಲ್ಗೊಳ್ಳುತ್ತಾರೆ.

ಹಬ್ಬದ ದಿನದಂದು ಗ್ರಾಮಸ್ಥರು ಸಾಲಾಗಿ ಮೈಮೇಲೆ ಮುಖ ಮಾಡಿ ಮಲಗುತ್ತಾರೆ. ಆ ಸಂದರ್ಭದಲ್ಲಿ ಡ್ರಮ್ಸ್ ಸದ್ದು ಮತ್ತು ಮಂತ್ರಘೋಷಗಳ ನಡುವೆ ದನಗಳನ್ನು ಅವರ ಮೇಲೆ ಹಾಯಿಸಲಾಗುತ್ತದೆ. ದನಗಳು ದಾಟಿ ಹೋದ ತಕ್ಷಣವೇ ಗ್ರಾಮಸ್ಥರು ಎದ್ದು ನಿಂತು ಸಂತೋಷದಿಂದ ನೃತ್ಯ ಮಾಡಿ ಸಂಭ್ರಮಿಸುತ್ತಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಹೊಸ ಪ್ಲ್ಯಾನ್: ಗುಜರಾತ್ ವಿವಿ ಹಾಸ್ಟೆಲ್‌ನಲ್ಲಿ 'ಆ್ಯಂಟಿ ಸೂಸೈಡ್' ಫ್ಯಾನ್‌ಗಳ ಅಳವಡಿಕೆ | Anti Suicide Fan

ಈ ಅಪಾಯಕಾರಿ ಆಚರಣೆಯಿಂದ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ. ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ವಿಚಿತ್ರ ಆಚರಣೆಯ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net