ಡಿವಿಎಸ್ ಕಾಲೇಜಿಗೆ ರಾಜ್ಯಮಟ್ಟದಲ್ಲಿ 8 Rank

dvs collage feliciate second pu exam rank holders
ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ Rank ಪಡೆದ ವಿದ್ಯಾರ್ಥಿನಿಯರನ್ನು ಡಿವಿಎಸ್ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಕೆ.ಎನ್.ರುದ್ರಪ್ಪ ಕೊಳಲೆ, ಎಸ್.ರಾಜಶೇಖರ್, ಎಸ್.ಪಿ.ದಿನೇಶ್, ಗೋಪಿನಾಥ್, ಡಾ. ಸತೀಶ್‌ಕುಮಾರ್ ಶೆಟ್ಟಿ, ರಾಜಶೇಖರ್, ಲಕ್ಷ್ಮೀದೇವಿ, ಎಂ.ವೆಂಕಟೇಶ್ ಇದ್ದರು.
Published on

ಶಿವಮೊಗ್ಗ: ದೇಶೀಯ ವಿದ್ಯಾಶಾಲಾ(ಡಿವಿಎಸ್) ಪಿಯು ಸ್ವತಂತ್ರ ಕಾಲೇಜಿಗೆ 2023-24ನೇ ಸಾಲಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.98ರಷ್ಟು ಲಿತಾಂಶ ಲಭಿಸಿದ್ದು, ಎಂಟು ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ Rank ಪಡೆದಿದ್ದಾರೆ ಎಂದು ಡಿವಿಎಸ್ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ತಿಳಿಸಿದರು.

ವಿಜ್ಞಾನ ವಿಭಾಗದಲ್ಲಿ ಶೇ.97.79, ಕಲಾ ವಿಭಾಗದಲ್ಲಿ ಶೇ.98.23 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.98.36 ಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ 613 ವಿದ್ಯಾರ್ಥಿಗಳಲ್ಲಿ 241 ಮಂದಿ ಡಿಸ್ಟಿಂಕ್ಷನ್‌ನಲ್ಲಿ, 337 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 23 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಡಿವಿಎಸ್ ಕಾರ್ಯದರ್ಶಿ ಎಸ್.ರಾಜಶೇಖರ್ ಮಾತನಾಡಿ, ರಾಜ್ಯಮಟ್ಟದಲ್ಲಿ 8 ವಿದ್ಯಾರ್ಥಿಗಳು ರ‌್ಯಾಂಕ್ ಪಡೆದಿದ್ದು, ವಿಜ್ಞಾನ ವಿಭಾಗದಲ್ಲಿ 590 ಅಂಕ ಪಡೆದ ಡಿ.ಎನ್.ನಿತ್ಯಶ್ರೀ 9, ಕಲಾ ವಿಭಾಗದಲ್ಲಿ 593 ಅಂಕ ಪಡೆದ ಕೆ.ಸಿ.ಚುಕ್ಕಿ 4, 591 ಅಂಕ ಪಡೆದ ಎಚ್.ಎಂ.ಸಿಂಚನಾ 6 ಹಾಗೂ 589 ಅಂಕ ಪಡೆದ ಸಾಮಿಯಾ ಖುಲ್ಸಮ್ 8 ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 593 ಅಂಕ ಪಡೆದ ಎಚ್.ಎಂ.ಯಶಸ್ವಿ 5, 591 ಅಂಕ ಪಡೆದ ಎಂ.ನವ್ಯಾ 7, 590 ಅಂಕ ಪಡೆದ ರಿಯಾ ಪಿರೇರಾ 8 ಹಾಗೂ 589 ಅಂಕ ಪಡೆದ ಆರ್.ಸಾಂಘವಿ 9ನೇ Rank ಪಡೆದಿದ್ದಾರೆ ಎಂದರು.
ಅರ್ಥಶಾಸದಲ್ಲಿ 15, ಗಣಿಶಾಸದಲ್ಲಿ 11, ಲೆಕ್ಕಶಾಸದಲ್ಲಿ 9, ಜೀವಶಾಸ, ಕನ್ನಡದಲ್ಲಿ ತಲಾ 7, ಸಂಸ್ಕೃತದಲ್ಲಿ 6, ವ್ಯವಹಾರ ಅಧ್ಯಯನ, ಸಮಾಜಶಾಸದಲ್ಲಿ 4, ಇತಿಹಾಸದಲ್ಲಿ 3, ರಾಜ್ಯಶಾಸ, ಸಂಖ್ಯಾಶಾಸದಲ್ಲಿ ತಲಾ 2, ಇಂಗ್ಲಿಷ್, ಭೌತಶಾಸ, ರಸಾಯನಶಾಸದಲ್ಲಿ ತಲಾ ಒಬ್ಬರು ವಿಷಯವಾರು ನೂರಕ್ಕೆ 100 ಅಂಕ ಪಡೆದಿದ್ದಾರೆ ಎಂದರು.
ಡಿವಿಎಸ್ ಸಂಯುಕ್ತ ಪಿಯು ಕಾಲೇಜಿನಲ್ಲಿ ಶೇ.96 ಲಿತಾಂಶ ಬಂದಿದ್ದು, ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶಿಾನಿಯಾ ಖಾನ್ 579 ಅಂಕ ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸಮಿತಿಯು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಪ್ರತಿವರ್ಷವು ಉತ್ತಮ ಲಿತಾಂಶ ಬರುತ್ತಿದೆ ಎಂದರು. ಇದೇ ವೇಳೆ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಖಜಾಂಚಿ ಗೋಪಿನಾಥ್, ಡಾ. ಸತೀಶ್‌ಕುಮಾರ್ ಶೆಟ್ಟಿ, ಪ್ರಾಚಾರ್ಯರಾದ ರಾಜಶೇಖರ್, ಲಕ್ಷ್ಮೀದೇವಿ, ಎಂ.ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿದ್ದರು.

ಹಕ್ಕಿಪಿಕ್ಕಿ ಸಮುದಾಯದ ಅಣ್ಣ-ತಂಗಿಗೆ ಉಚಿತ ಶಿಕ್ಷಣ
ವಿದ್ಯಾನಗರ ಸಹ್ಯಾದ್ರಿ ಕಾಲೇಜು ಪಕ್ಕದ ಹಕ್ಕಿಪಿಕ್ಕಿ ಅಲೆಮಾರಿ ಸಮಾಜದ ಗಣೇಶ್ ಮತ್ತು ಗೀತಾ (ಅಣ್ಣ-ತಂಗಿ) ಅವರು ಎಸ್ಸೆಸ್ಸೆಲ್ಸಿಯಲ್ಲಿ ಕ್ರಮವಾಗಿ 550 ಮತ್ತು 590 ಅಂಕ ಪಡೆದಿದ್ದರು. ಅವರನ್ನು ಸಮಿತಿಯು ದತ್ತು ಪಡೆದು ಡಿವಿಎಸ್ ಕಾಲೇಜಿನಲ್ಲಿ ಪ್ರಥಮ ಪಿಯುಗೆ ಉಚಿತ ಶಿಕ್ಷಣ ನೀಡಲಾಗಿತ್ತು. ಪ್ರಥಮ ಪಿಯುಸಿಯಲ್ಲಿ ಶೇ.81 ಅಂಕ ಪಡೆದು ಉತ್ತೀರ್ಣರಾಗಿದ್ದು, ದ್ವಿತೀಯ ಪಿಯುಗೂ ಉಚಿತವಾಗಿ ಶಿಕ್ಷಣ ನೀಡುವುದಾಗಿ ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net