

ಬೆಂಗಳೂರು: ಕರ್ನಾಟಕದ ಈಜುಪಟುಗಳು ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ 52ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ನ (
junior national championship
) 2ನೇ ದಿನ 9 ಚಿನ್ನ, 5 ಬೆಳ್ಳಿ, 2 ಕಂಚಿನ ಸಹಿತ 16 ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಮೊದಲ ದಿನ ರಾಜ್ಯ ತಂಡ 7 ಚಿನ್ನ ಸಹಿತ 16 ಪದಕಗಳನ್ನು ಜಯಿಸಿತ್ತು. ಬುಧವಾರ ನಡೆದ ಸ್ಪರ್ಧೆಗಳಲ್ಲಿ ಚರಿತಾ ಣೀಂದ್ರನಾಥ್, ರುಜುಲಾ ಎಸ್, ತಾನ್ಯಾ ಷಡಾಕ್ಷರಿ, ವಿಹಿತಾ ನಯನಾ, ತನಿಷಿ ಗುಪ್ತಾ, ಸಮರ್ಥ್ ಗೌಡ, ವೇದಾಂತ್ ರಾಕೇಶ್ ಮೆಹ್ರಾ ತಲಾ 1 ಚಿನ್ನ ಗೆದ್ದರು. ಬಾಲಕಿಯರ 4/100 ಮೀ. ಮೆಡ್ಲೆ ರಿಲೇ ಸ್ಪರ್ಧೆಯ ಗ್ರೂಪ್-1ಎ ಮತ್ತು 1ಬಿ ವಿಭಾಗಗಳಲ್ಲೂ ರಾಜ್ಯಕ್ಕೆ ಚಿನ್ನ ಒಲಿಯಿತು.
ಅಮನ್ ಅಭಿಜಿತ್, ಪ್ರಿಯಾಂಶಿ ಮಿಶ್ರಾ, ನೈಷಾ, ತಿಸ್ಯ ಸೋನರ್, ಮೋನಿಷಾ ಪಿ. ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಡೇನಿಯಲ್ ಪೌಲ್, ಸುಬ್ರಹ್ಮಣ್ಯ ಜೀವಮಾಂಶ್ ಕಂಚಿಗೆ ತೃಪ್ತಿಪಟ್ಟರು.