ಮಹೀಂದ್ರಾ ‘ಎಕ್ಸ್‌ಇವಿ 9ಎಸ್’ಗೆ 5 ಸ್ಟಾರ್ ರೇಟಿಂಗ್ - 5-star rating for Mahindra car

ಎಕ್ಸ್‌ಇವಿ 9ಎಸ್’ ಕಾರು ಪ್ರಯಾಣಿಕರ ಸುರಕ್ಷತೆ ವಿಭಾಗದಲ್ಲಿ 32ಕ್ಕೆ 31.15 ಅಂಕ ಹಾಗೂ ಮಕ್ಕಳ ಸುರಕ್ಷತೆ ವಿಭಾಗದಲ್ಲಿ 49ಕ್ಕೆ 45 ಅಂಕ ಗಳಿಸಿದೆ. ಒಟ್ಟಾರೆ 76.15 ಅಂಕಗಳನ್ನು ಪಡೆದುಕೊಂಡಿದ್ದು, ಭಾರತ್ ಎನ್‌ಸಿಎಪಿ ಪರೀಕ್ಷೆಯಲ್ಲಿ ಇದುವರೆಗೆ ಪರೀಕ್ಷಿಸಲಾದ ಏಳು ಸೀಟರ್ ವಾಹನಗಳ ಪೈಕಿ ಅಧಿಕ ಅಂಕವಾಗಿದೆ.
mahindra
Mahindra ‘XEV 9S car
Published on: 

ಬೆಂಗಳೂರು: (5-star rating for Mahindra car) ‘ಮಹೀಂದ್ರಾ ಕಂಪನಿಯ ಎಕ್ಸ್‌ಇವಿ 9ಎಸ್’ ಕಾರು, ಭಾರತ್ ಎನ್‌ಸಿಎಪಿ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ದೇಶದ ಮೊದಲ 7 ಆಸನಗಳ ವಿದ್ಯುತ್‌ಚಾಲಿತ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಪರೀಕ್ಷೆಗೊಳಗಾದ ಎಲ್ಲ 7 ಸೀಟರ್ ವಾಹನಗಳ ಪೈಕಿ ಅತ್ಯಧಿಕ ಅಂಕ ಗಳಿಸಿದ ವಾಹನ ಎಂಬ ಕೀರ್ತಿಗೂ ಪಾತ್ರವಾಗಿದೆ.

ಎಕ್ಸ್‌ಇವಿ 9ಎಸ್’ ಕಾರು ಪ್ರಯಾಣಿಕರ ಸುರಕ್ಷತೆ ವಿಭಾಗದಲ್ಲಿ 32ಕ್ಕೆ 31.15 ಅಂಕ ಹಾಗೂ ಮಕ್ಕಳ ಸುರಕ್ಷತೆ ವಿಭಾಗದಲ್ಲಿ 49ಕ್ಕೆ 45 ಅಂಕ ಗಳಿಸಿದೆ. ಒಟ್ಟಾರೆ 76.15 ಅಂಕಗಳನ್ನು ಪಡೆದುಕೊಂಡಿದ್ದು, ಭಾರತ್ ಎನ್‌ಸಿಎಪಿ ಪರೀಕ್ಷೆಯಲ್ಲಿ ಇದುವರೆಗೆ ಪರೀಕ್ಷಿಸಲಾದ ಏಳು ಸೀಟರ್ ವಾಹನಗಳ ಪೈಕಿ ಅಧಿಕ ಅಂಕವಾಗಿದೆ.

Also Read
ಕೆನರಾ ಬ್ಯಾಂಕ್ ಮ್ಯಾರಥಾನ್‌ನಲ್ಲಿ 11,286 ಮಂದಿ ಭಾಗಿ - Canara Bank Marathon
mahindra

ಮಹೀಂದ್ರಾ ಕಂಪನಿ ತಯಾರಿಸಿರುವ ಮೂರನೇ ಎಲೆಕ್ಟ್ರಿಕ್ ವಾಹನವಾದ ಇದು ಸುರಕ್ಷತಾ ರೇಟಿಂಗ್ ಪಡೆದಿದೆ. ಈ ಹಿಂದೆ ಎಕ್ಸ್‌ಇವಿ 9ಇ ಮತ್ತು ಬಿಇ 6 ಕಾರುಗಳು 5 ಸ್ಟಾರ್ ರೇಟಿಂಗ್ ಪಡೆದಿದ್ದವು.

ಮಹೀಂದ್ರಾ ಆಂಡ್ ಮಹೀಂದ್ರಾ ಲಿ.ನ ಆಟೊಮೋಟಿವ್ ವಿಭಾಗದ ಅಧ್ಯಕ್ಷ ಡಾ.ಆರ್. ವೇಲುಸ್ವಾಮಿ ಮಾತನಾಡಿ, ಎಕ್ಸ್‌ಇವಿ 9ಎಸ್’ ಕಾರಿಗೆ ದೇಶಾದ್ಯಂತ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 5 ಸ್ಟಾರ್ ರೇಟಿಂಗ್ ಗ್ರಾಹಕರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲಿದೆ. ವಿನ್ಯಾಸ, ಕಾರ್ಯಕ್ಷಮತೆ, ತಂತ್ರಜ್ಞಾನ ಮಾತ್ರವಲ್ಲದೆ ಸುರಕ್ಷತೆಯಲ್ಲಿಯೂ ಇದು ಅತ್ಯುತ್ತಮವಾಗಿದೆ ಎಂಬುದನ್ನು ದೃಢಪಡಿಸಿದೆ ಎಂದರು.