ವಿದ್ಯುತ್ ತಂತಿ ಸ್ಪರ್ಶಿಸಿ ಐವರು ಕನ್ವಾರಿಯಾಗಳು ಸಾವು!

Untitled design (44)
Published on

ಉತ್ತರಪ್ರದೇಶ: ಉತ್ತರಪ್ರದೇಶದ ಮೀರತ್​​ನಲ್ಲಿ ಯಾತ್ರೆ ಹೋಗುತ್ತಿದ್ದ ವಾಹನದ ಸ್ಪೀಕರ್​ಗೆ ವಿದ್ಯುತ್​​ ಸ್ಪರ್ಶಿಸಿದ ಕಾರಣ ಐವರು ಕನ್ವಾರಿಯಾಗಳು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಘಟನೆಯ ವಿವರ: ಉತ್ತರಪ್ರದೇಶ ಜಿಲ್ಲೆಯ ಭಾವನ್‌ಪುರ ಪ್ರದೇಶದಲ್ಲಿ ಕನ್ವರ್ ಯಾತ್ರೆಯಲ್ಲಿ ಭಾಗಿಯಾಗಿದ್ದ ಕನ್ವಾರಿಯಾಗಳು, ಪವಿತ್ರ ಜಲವನ್ನು ಸಂಗ್ರಹಿಸಿ ಹರಿದ್ವಾರದಿಂದ ಹಿಂದಿರುಗುವಾಗ ಈ ಘಟನೆ ಸಂಭವಿಸಿದೆ. ವಾಹನದ ಸ್ಪೀಕರ್​​ ಹೈಟೆನ್ಷನ್ ಓವರ್‌ಹೆಡ್ ತುಗಲಿದ ಕೂಡಲೇ ವಿದ್ಯುತ್​ ಸ್ಪರ್ಶಿಸಿ, ಐವರು ಕನ್ವಾರಿಯಾಗಳು ಸಾವನ್ನಪ್ಪಿದ್ದಾರೆ. ಇದರಿಂದ ಕುಪಿತಗೊಂಡ ಸ್ಥಳೀಯರು ರಸ್ತೆ ತಡೆದು, ವಿದ್ಯುತ್ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಪ್ರತಿಭಟನೆ ನಡೆಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net