More

    ಆರೋಗ್ಯ ತಪಾಸಣೆಗೆ ಮುಂದಾಗುತ್ತಿರುವ ಜನ

    ವಿಜಯವಾಣಿ ಸುದ್ದಿಜಾಲ ನೆಲಮಂಗಲ
    ನಟ ವಿಜಯ್‌ರಾಘವೇಂದ್ರ ಪತ್ನಿ ಸ್ಪಂದನಾ ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಜನಸಮಾನ್ಯರಲ್ಲೂ ಹೃದಯಾಘಾತದ ಬಗ್ಗೆ ಹೆಚ್ಚು ಭಯ ಆವರಿಸಿದ್ದು, ಎಲ್ಲೆಡೆ ಆರೋಗ್ಯ ತಪಾಸಣೆಗೆ ಮುಂದಾಗಿದ್ದಾರೆ.
    ನಗರದ ಸಾರ್ವಜನಿಕ ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಗಳಿಗೆ ಎಡತಾಕುತ್ತಿರುವ 30 ರಿಂದ 50 ವರ್ಷದೊಳಗಿನ ಜನತೆ ಹೃದಯ, ಲಿವರ್, ಕಿಡ್ನಿ ಕಾರ್ಯಚಟುವಟಿಕೆ ಕುರಿತಾಗಿ ತಪಾಸಣೆ ಮಾಡಿಸಿಕೊಂಡು ವರದಿಗಾಗಿ ಕಾದು ಕುಳಿತಿದ್ದಾರೆ. ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಹತ್ತಾರು ಮಂದಿ ಕುಟುಂಬ ಸಮೇತ ವೈದ್ಯರನ್ನು ಸಂಪರ್ಕಿಸುತ್ತಿದ್ದು, ಇಸಿಜಿ, ಟಿಎಂಟಿ ಪರೀಕ್ಷೆಗೆ ಒಳಗಾಗಿದ್ದಾರೆೆ.
    ಕಳೆದ 2020ರ ಜೂನ್ 7ರಂದು ನಟ ಚಿರಂಜೀವಿ ಸರ್ಜಾ, 2021ರ ಅಕ್ಟೋಬರ್ 29ರಂದು ವ್ಯಾಯಾಮ ಮಾಡುವಾಗ ನಟ ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ಮೃತಪಟ್ಟಿದ್ದು ಒಂದೆಡೆಯಾದರೆ ಆ.7ರಂದು ಸ್ಪಂದನಾ ಹೃದಯಾಘಾತದಿಂದ ಮೃತಪಟ್ಟಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.
    ಪ್ರತಿ ವರ್ಷ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಮುಂಜಾಗ್ರತೆ ಅನುಸರಿಸಲಾಗುತ್ತಿತ್ತು. ಆದರೆ ಸ್ಪಂದನಾ ನಿಧನ ಒಂದೆಡೆಯಾದರೆ ಕೆಲ ಹೃದ್ರೋಗ ತಜ್ಞರು ನೀಡುತ್ತಿರುವ ಹೇಳಿಕೆಯಿಂದ ಒಂದು ರೀತಿಯ ಭಯ ಸೃಷ್ಟಿ ಆಗಿದೆ ಎನ್ನುತ್ತಾರೆ ಮುಖಂಡ ಮೂರ್ತಿ.


    ಸಾಮಾನ್ಯವಾಗಿ ದೇಹದಲ್ಲಿ ಆಗುವ ಬದಲಾವಣೆಗಳನ್ನು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಹೃದಯಾಘಾತಗಳು ಸಂಭವಿಸುತ್ತಿವೆ. ಮನುಷ್ಯನ ದೇಹದಲ್ಲಿ ಪ್ರತಿಯೊಂದು ಅಂಗಾಗ ಅಂತ್ಯಂತ ಮುಖ್ಯವಾಗಿದ್ದು ಅದರಲ್ಲಿ ಹೃದಯ ಭಾಗ ಬಹುಮುಖ್ಯ. ಹೃದಯಾಘಾತದ ಬಗ್ಗೆ ಭಯ ಬೇಡ, ಎಚ್ಚರಿಕೆ ಇದ್ದರೆ ಸಾಕು. ಹೃದಯಾಘಾತಕ್ಕೆ ಸಂಬಂಧಿಸಿದ ಕೆಲ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.
    ಡಾ.ಟಿ.ಎಚ್.ಅಂಜನಪ್ಪ, ನಗರದ ಖಾಸಗಿ ಆಸ್ಪತ್ರೆ ವೈದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts