More

    ನೀಲ ಸುಂದರಿ ನೇರಳೆ ಹಣ್ಣಿಗೆ ಭಾರಿ ಬೇಡಿಕೆ – ಕೇಜಿಗೆ 200 ರೂ.ನಂತೆ ಮಾರಾಟ

    ಲಿಂಗಸುಗೂರು: ವರ್ಷದ ಹನ್ನೆರೆಡು ತಿಂಗಳು ಮಾರುಕಟ್ಟೆಯಲ್ಲಿ ಬಾಳೆ, ಸೇಬು, ನಿಂಬೆ, ಎಳೆನೀರು ಸೇರಿದಂತೆ ಇತರ ಹಣ್ಣುಗಳು ಕಾಣಸಿಗುತ್ತವೆ. ಈಗ ಮಾರುಕಟ್ಟೆಯಲ್ಲಿ ಲಗ್ಗೆಯಿಟ್ಟ ನೀಲ ಸುಂದರಿ ನೇರಳೆ ಹಣ್ಣಿಗೆ ಭಾರಿ ಬೇಡಿಕೆ ಬಂದಿದೆ.

    ಇದನ್ನೂ ಓದಿ: ಉತ್ತಮ ಆರೋಗ್ಯಕ್ಕೆ ಸೇವಿಸಿ ನೇರಳೆ ಹಣ್ಣು; ಯಾರೆಲ್ಲಾ ಇದನ್ನು ತಿನ್ನಲೇ ಬೇಕು ನೋಡಿ…

    ಪ್ರತಿವರ್ಷ ಮುಂಗಾರು ಹಂಗಾಮು ಆರಂಭದಲ್ಲೇ ಮಾರುಕಟ್ಟೆಗೆ ಕಾಲಿಡುವ ನೇರಳೆ ಹಣ್ಣು, ಬೆಳಗಾವಿ, ಹುಬ್ಬಳ್ಳಿ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಈಗ ಜಿಲ್ಲೆಯ ತೋಟಗಾರಿಕೆ ಪ್ರದೇಶದಲ್ಲಿ ಅಲ್ಪಸ್ವಲ್ಪ ನೇರಳೆ ಹಣ್ಣನ್ನು ಕಾಣಬಹುದಾಗಿದೆ. ಈ ಬಾರಿ ಆಂಧ್ರ ಪ್ರದೇಶದಿಂದ ಜಂಬೂ ನೇರಳೆ ಆಮದು ಮಾಡಿಕೊಳ್ಳಲಾಗಿದೆ. ಕೆಜಿಗೆ 200 ರೂ.ನಂತೆ ಮಾರಾಟ ಮಾಡಲಾಗುತ್ತಿದೆ.

    ಬುಟ್ಟಿ ಮತ್ತು ತಳ್ಳುಬಂಡಿಗಳ ಮೂಲಕ ಸಂಚರಿಸುತ್ತಾ ಮಾರಾಟ ಮಾಡಲಾಗುತ್ತಿದೆ. ನೇರಳೆಗೆ ಮಕ್ಕಳು ಮನ ಸೋತಿದ್ದಾರೆ. ನೇರಳೆ ಹಣ್ಣು ನಾಲಿಗೆಗೆ ರುಚಿ ನೀಡುವ ಜತೆಗೆ ಔಷಧೀಯ ಗುಣಗಳನ್ನು ಹೊಂದಿದೆ. ಈ ಹಣ್ಣು ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.

    ಪೋಷಕಾಂಶಗಳ ಆಗರ

    ಪ್ರೋಟೀನ್, ವಿಟಮಿನ್, ಫ್ಲಾವಿನೋಯ್ಡಾ, ಮ್ಯಾಂಗನೀಸ್, ಪೊಟ್ಯಾಸಿಯಂ, ಕ್ಯಾಲ್ಸಿಯಂ ಮೊದಲಾದ ಅಂಶಗಳು ನೇರಳೆ ಹಣ್ಣಿನಲ್ಲಿ ಹೇರಳವಾಗಿವೆ. ನೇರಳೆ ಹಣ್ಣಿನಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ರಕ್ತ ಶುದ್ಧೀಕರಣ ಜತೆಗೆ ಹೀಮೊಗ್ಲೋಬಿನ್ ಅಂಶ ಹೆಚ್ಚಿಸಲು ಸಹಕಾರಿಯಾಗಿದೆ.

    ನೇರಳೆ ಹಣ್ಣಿನ ಪೇಸ್ಟ್‌ಗೆ ಸಾಸಿವೆ ಎಣ್ಣೆ ಮಿಶ್ರಣ ಮಾಡಿ ದೇಹದ ಉರಿ ಇರುವ ಜಾಗಕ್ಕೆ ಲೇಪಿಸಿದರೆ ಶಮನವಾಗುತ್ತದೆ. ಅಜೀರ್ಣ ಸಮಸ್ಯೆ ದೂರವಾಗಿ ಚಯಾಪಚಯೆ ಕ್ರಿಯೆ ಉತ್ತಮಗೊಳ್ಳುತ್ತದೆ.

    ನೇರಳೆ ಬೀಜಗಳನ್ನು ಪೌಡರ್ ಮಾಡಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರಲಿದೆ. ರಕ್ತದೊತ್ತಡ ಕಡಿಮೆ ಮಾಡಲು ಒಣಗಿದ ಬೀಜ ಸೇವಿಸಬೇಕು. ಹೀಗೆ ನೇರಳೆ ಹಣ್ಣಿನ ಸೇವನೆಯಿಂದ ನಾಲಿಗೆಗೆ ರುಚಿ ನೀಡುವ ಜತೆಗೆ ಆರೋಗ್ಯ ವೃದ್ಧಿಗೂ ಸಹಕಾರಿಯಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts