More

    ಮದ್ಯದಂಗಡಿ ಬೇಕೇಬೇಕು… ಬೇಡವೇ ಬೇಡ

    ಶಿವಮೊಗ್ಗ: ಮದ್ಯದಂಗಡಿ ತೆರೆಯುವ ವಿಚಾರದಲ್ಲಿ ಕಳೆದ ಕೆಲವು ದಿನಗಳಿಂದ ಪರ-ವಿರೋಧ ವ್ಯಕ್ತವಾಗುತ್ತಿದ್ದು ಒಂದು ಬಣ ಮದ್ಯದಂಗಡಿಗೆ ಯಾವ ಕಾರಣಕ್ಕೂ ಅನುಮತಿ ನೀಡಬಾರದೆಂದು ಪ್ರತಿಭಟನೆ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಕೆಲ ಮದ್ಯಪ್ರಿಯರು ಈ ಭಾಗದಲ್ಲಿ ಮದ್ಯದಂಗಡಿ ಬೇಕೇಬೇಕೆಂಬ ಹೋರಾಟಕ್ಕೆ ಗುರುವಾರ ನಗರದ ಗೋಪಾಲ ಗೌಡ ಬಡಾವಣೆ ಸಾಕ್ಷಿಯಾಯಿತು.

    ಗೋಪಾಲ ಗೌಡ ಬಡಾವಣೆಯ ನೂರಡಿ ರಸ್ತೆಯಲ್ಲಿ ಮದ್ಯದಂಗಡಿ ತೆರೆದಿದ್ದು ನವಕರ್ನಾಟಕ ನಿರ್ಮಾಣ ವೇದಿಕೆ ಪದಾಽಕಾರಿಗಳು ನೂತನ ಮದ್ಯದಂಗಡಿಗೆ ಅವಕಾಶ ನೀಡಬಾರದೆಂದು ಆಗ್ರಹಿಸಿ ಮದ್ಯದಂಗಡಿ ಎದುರು ಪ್ರತಿಭಟಿದರೆ, ಮಹಿಳೆಯರೂ ಸೇರಿದಂತೆ ಕೆಲವರು ಮದ್ಯದಂಗಡಿ ಅವಶ್ಯಕತೆ ಇದ್ದು ಇಲ್ಲಿಂದ ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು.
    ಇದು ಪ್ರತಿಷ್ಠಿತ ಬಡಾವಣೆಯಾಗಿದ್ದು ವಾಸಕ್ಕೆ ಯೋಗ್ಯವಾದ ಸ್ಥಳವೆಂದು ಅನೇಕ ನಿವೃತ್ತ ನೌಕರರು ಇಲ್ಲಿ ಮನೆ ನಿರ್ಮಿಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ತರಾತುರಿಯಲ್ಲಿ ಕಟ್ಟಡ ಪರವಾನಗಿಯನ್ನೂ ಪಡೆಯದೆ ದಿಢೀರ್ ಕಟ್ಟಡ ನಿರ್ಮಿಸಿ ಮದ್ಯದಂಗಡಿ ತೆರೆದಿದ್ದಾರೆ ಎಂದು ನವಕರ್ನಾಟಕ ವೇದಿಕೆ ಪದಾಽಕಾರಿಗಳು ದೂರಿದರು.
    ಈ ಸ್ಥಳದ ಪಕ್ಕದಲ್ಲೇ ಖಾಸಗಿ ಶಾಲೆ ಪ್ರಾರಂಭವಾಗುತ್ತಿದೆ. ಕೂಗಳತೆ ದೂರದಲ್ಲೇ ರಾಮಕೃಷ್ಣ ಶಾಲೆ ಇದೆ. ಸಮೀಪದಲ್ಲೇ ಮಕ್ಕಳ ಆಟಿಕೆ ಉದ್ಯಾನ, ದಿನಬಳಕೆ ವಸ್ತುಗಳನ್ನು ಮಾರಾಟ ಮಾಡುವ ಸೂಪರ್ ಮಾರ್ಕೆಟ್ ಇದೆ. ಮಹಿಳೆಯರೇ ಹೆಚ್ಚಾಗಿ ಓಡಾಡುತ್ತಿದ್ದು ಈ ಸ್ಥಳದಲ್ಲಿ ಮದ್ಯದಂಗಡಿಗೆ ಪರವಾನಗಿ ನೀಡಿದರೆ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ. ಸಿಎಲ್-2 ಪರವಾನಗಿ ನೀಡಿದರೆ ನಿಯಮಾನುಸಾರ ಸ್ಥಳದಲ್ಲಿ ಕುಡಿಯಲು ಅವಕಾಶ ಇಲ್ಲದಿರುವುದರಿಂದ ಮದ್ಯವ್ಯಸನಿಗಳು ಹತ್ತಿರದ ಉದ್ಯಾನದಲ್ಲಿ ಮದ್ಯ ಸೇವಿಸುತ್ತಾರೆ. ಇದರಿಂದ ವಾಯುವಿಹಾರಕ್ಕೆ ಬರುವ ಎಲ್ಲರಿಗೂ ತೊಂದರೆಯಾಗುತ್ತದೆ. ಈ ಎಲ್ಲ ಅಂಶ ಮನಗಂಡು ಮದ್ಯದಂಗಡಿಗೆ ಅವಕಾಶ ನೀಡಬಾರದು. ವಾಸಕ್ಕೆ ಯೋಗ್ಯವಲ್ಲದ ಸ್ಥಳಕ್ಕೆ ವರ್ಗಾಯಿಸಬೇಕೆಂದು ಉರುಳು ಸೇವೆ ಮಾಡಿದರು.
    ಒಂದು ವೇಳೆ ಅವಕಾಶ ನೀಡಿದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿ ಅಬಕಾರಿ ಇಲಾಖೆ ಉಪ ಆಯುಕ್ತ ಕ್ಯಾ. ಅಜಿತ್‌ಕುಮಾರ್‌ಗೆ ಮನವಿ ಸಲ್ಲಿಸಿದರು. ವೇದಿಕೆ ಅಧ್ಯಕ್ಷ ಗೋ.ರಮೇಶ್ ಗೌಡ, ಜಿಲ್ಲಾಧ್ಯಕ್ಷ ಸಂತೋಷ್, ನಿಂಗರಾಜು, ನಯನಾ, ಲಕ್ಷ÷್ಮಣ್, ರಾಜು ಗುಜ್ಜರ್, ದೇವೇಂದ್ರಪ್ಪ, ಆಸೀಫ್, ರಾಜು ನಾಯ್ಕ, ಸುರೇಶ್, ಮುನೀರ್ ಪ್ರತಿಭಟನೆಯಲ್ಲಿದ್ದರು.
    ಮದ್ಯದಂಗಡಿ ಬೇಕೇಬೇಕೆಂದು ಆಗ್ರಹಿಸಿ ಮಹಿಳೆಯರೂ ಸೇರಿದಂತೆ ಮತ್ತೊಂದು ಬಣದವರು ಪ್ರತಿಭಟಿಸಿದರು. 100 ಅಡಿ ರಸ್ತೆಯ ಇಕ್ಕೆಲಗಳಲ್ಲೂ ವಾಣಿಜ್ಯ ಉದ್ದೇಶಕ್ಕೆ ಅವಕಾಶವಿದ್ದು ಬೇರೆ ಕಡೆ ಲೈಸೆನ್ಸ್ ಇರುವ ಮದ್ಯದಂಗಡಿ ಇಲ್ಲಿಗೆ ಸ್ಥಳಾಂತರಗೊAಡಿದೆ. ಯಾವ ಕಾರಣಕ್ಕೂ ಇಲ್ಲಿಂದ ಸ್ಥಳಾಂತರವಾಗಲು ಬಿಡುವುದಿಲ್ಲ. ಇಲ್ಲಿಯೇ ಮದ್ಯದಂಗಡಿ ಬೇಕು ಎಂದು ಪಟ್ಟುಹಿಡಿದರು.
    ಮದ್ಯದಂಗಡಿ ಪರ-ವಿರೋಧ ಪ್ರತಿಭಟನೆಗಳು ಭಾರಿ ಚರ್ಚೆಗೆ ಗ್ರಾಸವಾಗಿದ್ದು ಅಽಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಪ್ರತಿಭಟನೆ ವೇಳೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಮದ್ಯದಂಗಡಿ ಪರವಾದ ಹೋರಾಟದಲ್ಲಿ ರಾಜಕುಮಾರ್, ಪಣಿ, ನಟರಾಜ್, ರವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts