More

    ಲಭ್ಯವಾಗಲಿದೆ ಲಸಿಕೆ : 3 ದಿನಗಳಲ್ಲಿ ರಾಜ್ಯಗಳಿಗೆ 51 ಲಕ್ಷ ಡೋಸ್​

    ನವದೆಹಲಿ : ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇನ್ನು ಮೂರು ದಿನಗಳಲ್ಲಿ, ಸುಮಾರು 51 ಲಕ್ಷ ಕರೊನಾ ಲಸಿಕೆಯ ಡೋಸ್​ಗಳನ್ನು ಹೊಸದಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈಗಾಗಲೇ ನೀಡಿರುವ 20 ಕೋಟಿ ಲಸಿಕೆ ಡೋಸ್​ಗಳಲ್ಲಿ, ಇನ್ನೂ 1.84 ಕೋಟಿ ಡೋಸ್​ಗಳನ್ನು ಅವು ಜನರಿಗೆ ನೀಡುವುದು ಬಾಕಿ ಇದೆ ಎಂದೂ ಹೇಳಿದೆ.

    ಈವರೆಗೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 20 ಕೋಟಿ (20,28,09,250) ಡೋಸ್​ಗಳಷ್ಟು ಕರೊನಾ ಲಸಿಕೆಯನ್ನು ಉಚಿತವಾಗಿ ಒದಗಿಸಿದೆ. ಅದರಲ್ಲಿ, ಮೇ 14 ರಂದು ಲೆಕ್ಕ ಹಾಕಲಾದ ಸರಾಸರಿಯ ಪ್ರಕಾರ 18,43,67,772 ಗಳನ್ನು ಬಳಸಿಕೊಳ್ಳಲಾಗಿದೆ. ಇನ್ನೂ 1,84,41,478 ಡೋಸ್​ಗಳನ್ನು ಫಲಾನುಭವಿಗಳಿಗೆ ನೀಡಬೇಕಾಗಿದೆ ಎಂದು ಸಚಿವಾಲಯ ತಿಳಿಸಿದೆ.

    ಇದನ್ನೂ ಓದಿ: ನಕಲಿ ಡಾಕ್ಟರ್​ಗಳಿಂದಾಗಿ ಊರಿನ ತುಂಬಾ ಹರಡಿದ ಕರೊನಾ! ಸಾವಿನ ಮನೆಯ ಕದ ತಟ್ಟುತ್ತಿರುವ ಗ್ರಾಮಸ್ಥರು

    ಮುಂದಿನ 3 ದಿನಗಳಲ್ಲಿ ಸುಮಾರು 51 ಲಕ್ಷ (50,95,640) ಹೊಸ ಡೋಸ್​​ಗಳನ್ನು ರಾಜ್ಯಗಳು ಕೇಂದ್ರದ ವತಿಯಿಂದ ಪಡೆಯಲಿವೆ ಎಂದಿರುವ ಸಚಿವಾಲಯ, ಕೇಂದ್ರ ಸರ್ಕಾರವು ಈ ಮುಂದೆಯೂ ರಾಜ್ಯಗಳಿಗೆ ತನ್ನ ಪಾಲಿನಿಂದ ಉಚಿತವಾಗಿ ಲಸಿಕೆ ಒದಗಿಸಲಿದೆ ಎಂದಿದೆ. ಪ್ರತಿ ತಿಂಗಳೂ ಸೆಂಟ್ರಲ್ ಡ್ರಗ್ಸ್​ ಲ್ಯಾಬರೋಟರಿ ಅನುಮೋದಿಸುವ ಉತ್ಪಾದನೆಯ ಶೇ. 50 ರಷ್ಟನ್ನು ಕೇಂದ್ರ ಇದಕ್ಕಾಗಿ ಖರೀದಿಸುತ್ತದೆ ಎನ್ನಲಾಗಿದೆ. (ಏಜೆನ್ಸೀಸ್)

    ದೆಹಲಿಯಲ್ಲಿ ಕರೊನಾ ಸೋಂಕು ಇಳಿಕೆ ; ಲಾಕ್​ಡೌನ್ ಒಂದು ವಾರ ವಿಸ್ತರಣೆ

    ಅಪ್ಪಅಮ್ಮ, ಅಜ್ಜಅಜ್ಜಿ ಕರೊನಾಗೆ ಬಲಿ; 12 ದಿನಗಳಲ್ಲಿ ಅನಾಥರಾದ ಹೆಣ್ಣುಮಕ್ಕಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts